ETV Bharat / bharat

ಹೊಂಡಕ್ಕೆ ವೇಗವಾಗಿ ನುಗ್ಗಿದ ಕಾರು: ಸ್ಥಳದಲ್ಲೇ ಆರು ಜನ ಸಾವು, ಇಬ್ಬರು ಮಕ್ಕಳಿಗೆ ಗಾಯ - ಹೊಂಡಕ್ಕೆ ವೇಗವಾಗಿ ನುಗ್ಗಿದ ಕಾರು

ಕಾನ್ಪುರ ದೇಹತ್‌ನಲ್ಲಿ ವೇಗವಾಗಿ ಬಂದ ಕಾರು ಹೊಂಡಕ್ಕೆ ನುಗ್ಗಿದ್ದು, ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಭೇಟಿ ನೀಡದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

News kanpur dehat  car accident kanpur dehat  kanpur dehat  ಹೊಂಡಕ್ಕೆ ವೇಗವಾಗಿ ನುಗ್ಗಿದ ಕಾರು  ಸ್ಥಳದಲ್ಲೇ ಆರು ಜನ ಸಾವು
ನೀರು ತುಂಬಿದ ಹೊಂಡಕ್ಕೆ ವೇಗವಾಗಿ ನುಗ್ಗಿದ ಕಾರು: ಸ್ಥಳದಲ್ಲೇ ಆರು ಜನ ಸಾವು, ಇಬ್ಬರು ಮಕ್ಕಳಿಗೆ ಗಾಯ
author img

By ETV Bharat Karnataka Team

Published : Feb 5, 2024, 7:59 AM IST

Updated : Feb 5, 2024, 8:09 AM IST

ಕಾನ್ಪುರ ದೇಹತ್ (ಉತ್ತರ ಪ್ರದೇಶ): ಕಾನ್ಪುರದ ದೇಹತ್‌ನಲ್ಲಿ ಸೋಮವಾರ ಬೆಳಗ್ಗೆ ವೇಗವಾಗಿ ಬಂದ ಕಾರೊಂದು ನೀರು ತುಂಬಿದ ಹೊಂಡಕ್ಕೆ ನುಗ್ಗಿದ ಪರಿಣಾಮ ದೊಡ್ಡ ದುರಂತವೊಂದು ಸಂಭವಿಸಿದೆ. ಈ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಈ ಕುರಿತು ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಕಾನ್ಪುರ್ ದೇಹತ್ ಜಿಲ್ಲೆಯ ಸಿಕಂದ್ರ ಪೊಲೀಸ್ ಠಾಣೆಯ ಸಂದಲ್ಪುರ್ ರಸ್ತೆಯ ಬಳಿಯ ಜಗನ್ನಾಥಪುರ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ. ಇಲ್ಲಿ ಕಾರೊಂದು ನಿಯಂತ್ರಣ ತಪ್ಪಿದ್ದರಿಂದ ನೀರು ತುಂಬಿದ ಆಳವಾದ ಹೊಂಡಕ್ಕೆ ನುಗ್ಗಿದೆ ಎಂದು ಹೇಳಲಾಗುತ್ತಿದೆ. ಈ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಪೊಲೀಸರು ಜೆಸಿಬಿ ಸಹಾಯದಿಂದ ಕಾರನ್ನು ಹೊರ ತೆಗೆದಿದ್ದಾರೆ. ಈ ಅವಘಡದಲ್ಲಿ ಇಬ್ಬರು ಮಕ್ಕಳು ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕಾನ್ಪುರ ದೇಹತ್‌ನಿಂದ ಕಾನ್ಪುರ ನಗರ ಆಸ್ಪತ್ರೆಗೆ ಚಿಕಿತ್ಸೆಗಾಗಿ ಶಿಫಾರಸು ಮಾಡಲಾಗಿದೆ. ಮಕ್ಕಳು ಇಲ್ಲಿನ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಮೃತ ದೇಹಗಳ ಗುರುತು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಸ್ಥಳದಲ್ಲಿ ಬೀಡುಬಿಟ್ಟಿರುವ ಪೊಲೀಸ್ ಅಧಿಕಾರಿಗಳು ಅಪಘಾತದ ಕುರಿತು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಮಳೆ ಸುರಿಯುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ನೀರಿನ ಹೊಂಡಕ್ಕೆ ನುಗ್ಗಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ಕ್ರಿಕೆಟ್ ಪಂದ್ಯದ ವೇಳೆ ಜಗಳ: ಕಲ್ಲಿನಿಂದ ಹೊಡೆದು 24 ವರ್ಷದ ಯುವಕನ ಹತ್ಯೆ

Last Updated : Feb 5, 2024, 8:09 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.