ETV Bharat / bharat

ಮೂವರು ಉಗ್ರರ ಸ್ಕೆಚ್​ ಬಿಡುಗಡೆ ಮಾಡಿದ ಪೊಲೀಸರು: ಮಾಹಿತಿ ನೀಡಿದವರಿಗೆ 5 ಲಕ್ಷ ನಗದು ಬಹುಮಾನ ಘೋಷಣೆ - SKETCH OF 3 MILITANTS RELEASED

ಉಗ್ರರ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನ ನೀಡುವುದರ ಜೊತೆಗೆ ಅವರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಪೊಲೀಸ್​ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

SKETCH OF 3 MILITANTS RELEASED
3 ಉಗ್ರರ ಸ್ಕೆಚ್ (ETV Bharat)
author img

By ETV Bharat Karnataka Team

Published : Jul 27, 2024, 6:04 PM IST

ಜಮ್ಮು: ಜಮ್ಮು ಮತ್ತು ಕಾಶ್ಮೀರದ ದೋಡಾ ಮತ್ತು ಉರಾರ್​ ಬಾಗಿ ದೇಸಾ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಶಂಕಿತ ಉಗ್ರರ ಸ್ಕೆಚ್​ಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಮೂವರು ಶಂಕಿತ ಉಗ್ರರ ರೇಖಾಚಿತ್ರವನ್ನು ಸಿದ್ಧಪಡಿಸಲಾಗಿದ್ದು, ಉಗ್ರರ ಚಲನವಲನದ ಬಗ್ಗೆ ಯಾರಾದರೂ ಮಾಹಿತಿ ನೀಡಿದರೆ, ಪ್ರತಿ ಶಂಕಿತರಿಗೆ 5 ಲಕ್ಷ ರೂಪಾಯಿಯಂತೆ ಬಹುಮಾನ ನೀಡಲಾಗುವುದು. ಮತ್ತು ಮಾಹಿತಿ ನೀಡಿದವರ ಗುರುತನ್ನು ರಹಸ್ಯವಾಗಿಡಲಾಗುವುದು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ದೋಡಾ ಎಸ್​ಎಸ್​ಪಿ - 954190420, ಹೆಚ್​ಕ್ಯೂಆರ್​ಎಸ್​ ದೋಡಾ ಎಸ್​ಪಿ- 9797649362, 9541904202, ಒಪಿಎಸ್​ ದೊಡಾ ಎಸ್​ಪಿ - 954190420, ದಾರ್​ ದೋಡಾ DySP -9541904205, ಹೆಚ್​ಕ್ಯೂಆರ್​ಎಸ್​ ದೋಡಾ DySP -9541904205, ದೋಡಾ ಎಸ್​ಎಚ್​ಒ ಪಿಎಸ್​-9419163516, 9541904211, ದೆಸ್ಸಾ ಎಸ್​ಎಚ್​ಒ ಪಿಎಸ್​- 8082383906, ಐಸಿ ಪಿಪಿ ಬಾಗ್ಲಾ ಭಾರತ್ - 7051484314, 9541904249, ದೋಡಾ ಪಿಸಿಆರ್​- 01996233530, 7298923100, 9469365174, 9103317361. ಭಯೋತ್ಪಾದಕರ ಉಪಸ್ಥಿತಿ/ ಚಲನವಲನದ ಬಗ್ಗೆ ತಿಳಿದಲ್ಲಿ ಈ ಮೇಲಿನ ಸಂಪರ್ಕ ಸಂಖ್ಯೆಗಳಿಗೆ ಮಾಹಿತಿ ಒದಗಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ವರ್ಷದ ಆರಂಭದಿಂದ ಜಮ್ಮು ಪ್ರಾಂತ್ಯದ ಆರು ಜಿಲ್ಲೆಗಳಲ್ಲಿ ನಡೆದ ಸುಮಾರು ಹನ್ನೆರಡು ಭಯೋತ್ಪಾದಕ ದಾಳಿಗಳಲ್ಲಿ 11 ಭದ್ರತಾ ಸಿಬ್ಬಂದಿ, ಗ್ರಾಮ ರಕ್ಷಣಾ ಸಿಬ್ಬಂದಿ ಮತ್ತು ಐವರು ಭಯೋತ್ಪಾದಕರು ಸೇರಿದಂತೆ ಒಟ್ಟು 27 ಜನರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಜಮ್ಮುವಿನಲ್ಲಿ ಭಯೋತ್ಪಾದನೆ ಉಲ್ಬಣ, 'ನಯಾ ಕಾಶ್ಮೀರ'ದಲ್ಲಿ ಅನಿಶ್ಚಿತತೆ: ಚುನಾವಣೆಗಳು ಹಿಂಸಾಚಾರ ತಡೆಯಬಹುದೇ? - Terror Surge in Jammu

ETV Bharat Logo

Copyright © 2024 Ushodaya Enterprises Pvt. Ltd., All Rights Reserved.