ETV Bharat / bharat

ಕೇಂದ್ರ ಬಜೆಟ್​ 2024: ಯಾವ ವಸ್ತು ಏರಿಕೆ, ಯಾವುದು ಇಳಿಕೆ- ತಿಳಿಯಿರಿ - Union Budget 2024 - UNION BUDGET 2024

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸತತ ಮೂರನೇ ಅವಧಿಯ ಮೊದಲ ಪೂರ್ಣಾವಧಿ ಬಜೆಟ್ ಅನ್ನು ಇಂದು (ಮಂಗಳವಾರ) ಸಂಸತ್ತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು. ಯಾವುದು ಅಗ್ಗ ಮತ್ತು ಯಾವುದು ದುಬಾರಿ ಎಂಬುದರ ಮಾಹಿತಿ ಇಲ್ಲಿದೆ..

Etv Bharat
ಯಾವುದು ಅಗ್ಗ, ಯಾವುದು ದುಬಾರಿ? (ETV Bharat)
author img

By PTI

Published : Jul 23, 2024, 1:24 PM IST

Updated : Jul 23, 2024, 5:36 PM IST

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಚಿನ್ನ ಮತ್ತು ಬೆಳ್ಳಿಯ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 6ಕ್ಕೆ ಮತ್ತು ಪ್ಲಾಟಿನಂ ಮೇಲಿನ ತೆರಿಗೆಯನ್ನು ಶೇಕಡಾ 6.4ರಷ್ಟು ಇಳಿಕೆ ಮಾಡಲಾಗುವುದು ಎಂದು ಸೀತಾರಾಮನ್ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸತತ ಮೂರನೇ ಅವಧಿಯ ಮೊದಲ ಪೂರ್ಣಾವಧಿ ಬಜೆಟ್ ಅನ್ನು ಇಂದು (ಮಂಗಳವಾರ) ಸಂಸತ್ತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು.

''ಫೆರೋನಿಕಲ್, ಬ್ಲಿಸ್ಟರ್ ತಾಮ್ರದ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ತೆಗೆದುಹಾಕಲಾಗುವುದು. ಆದರೆ, ನಿಗದಿತ ಟೆಲಿಕಾಂ ಉಪಕರಣಗಳ ಮೇಲೆ ಶೇಕಡಾ 10 ರಿಂದ ಶೇಕಡಾ 15ಕ್ಕೆ ಹೆಚ್ಚಿಸಲಾಗಿದೆ. ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ ಮೂಲ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸುವುದು. ಸೀಗಡಿಗಳು ಮತ್ತು ಮೀನಿನ ಆಹಾರದ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 5ಕ್ಕೆ ಇಳಿಸಲಾಗುವುದು'' ಎಂದು ಸಚಿವರು ತಿಳಿಸಿದರು. ''ಸರ್ಕಾರವು ಅಮೋನಿಯಂ ನೈಟ್ರೇಟ್ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 10ಕ್ಕೆ ಮತ್ತು ಜೈವಿಕ ವಿಘಟನೀಯವಲ್ಲದ ಪ್ಲಾಸ್ಟಿಕ್‌ಗಳ ಮೇಲೆ ಶೇಕಡಾ 25ಕ್ಕೆ ಏರಿಕೆ ಮಾಡಲಾಗುವುದು'' ಎಂದರು.

''ಎಂಎಸ್‌ಎಂಇಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಪಿಪಿಪಿ (ಸಾರ್ವಜನಿಕ ಖಾಸಗಿ ಸಹಭಾಗಿತ್ವ) ಮೋಡ್‌ನಲ್ಲಿ ಇ-ಕಾಮರ್ಸ್ ರಫ್ತು ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಸಾಂಪ್ರದಾಯಿಕ ಕುಶಲಕರ್ಮಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಲು ಸಹಾಯವಾಗುತ್ತದೆ. ಸೌರ ಸೆಲ್ಸ್​ ಮತ್ತು ಪ್ಯಾನಲ್‌ಗಳ ತಯಾರಿಕೆಯಲ್ಲಿ ಬಳಸಲಾಗುವ ವಿನಾಯಿತಿ ಪಡೆದಿರುವ ಬಂಡವಾಳ ಸರಕುಗಳ ಪಟ್ಟಿಯನ್ನು ವಿಸ್ತರಿಸಲಾಗುವುದು'' ಎಂದು ಅವರು ಹೇಳಿದರು.

ಕ್ಯಾನ್ಸರ್​ ಔಷಧಗಳ ಮೇಲಿನ ಸೀಮಾ ಸುಂಕಕ್ಕೆ ವಿನಾಯಿತಿ: ಕ್ಯಾನ್ಸರ್​ ಔಷಧಿಗಳ ಮೇಲಿನ ಕಸ್ಟಮ್ಸ್​ ಸುಂಕವನ್ನು ಸಂಪೂರ್ಣ ವಿನಾಯಿತಿಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಬಜೆಟ್​ನಲ್ಲಿ ಘೋಷಿಸಿದೆ. ಈ ಮೂಲಕ ಕ್ಯಾನ್ಸರ್​ ರೋಗಿಗಳಿಗೆ ನೆಮ್ಮದಿ ನೀಡಿದೆ.

ಈ ಕುರಿತು ಬಜೆಟ್​ನಲ್ಲಿ ಪ್ರಸ್ತಾಪಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ಕ್ಯಾನ್ಸರ್​ ರೋಗಿಗಳಿಗೆ ನೆರವು ನೀಡುವ ಉದ್ದೇಶದಿಂದ ಮೂರು ಔಷಧಿಗಳಿಗೆ ಕಸ್ಟಮ್​ ಸುಂಕದಿಂದ ವಿನಾಯಿತಿ ನೀಡುತ್ತಿರುವುದಾಗಿ ತಮ್ಮ 2024-25ನೇ ಬಜೆಟ್​ ಭಾಷಣದ ವೇಳೆ ತಿಳಿಸಿದರು.

ಕ್ಯಾನ್ಸರ್​​ ಚಿಕಿತ್ಸೆಗೆ ನೀಡಲಾಗುತ್ತಿರುವ ಟ್ರಾಸ್ಟುಜುಮಾಬ್ ಡೆರುಕ್ಸ್ಟೆಕನ್, ಒಸಿಮೆರ್ಟಿನಿಬ್ ಮತ್ತು ದುರ್ವಾಲುಮಾಬ್ ಔಷಧಿಗಳ ಮೇಲಿನ ಕಸ್ಟಮ್ಸ್​ ಸುಂಕವನ್ನು ಶೇ 10ರಿಂದ ಶೂನ್ಯಗೊಳಿಸಲಾಗುತ್ತಿದೆ ಎಂದರು.

ಯಾವುದು ಅಗ್ಗ?

BUD-GOLD CUSTOMS DUTY
ಕೇಂದ್ರ ಬಜೆಟ್​ 2024: ಯಾವ ವಸ್ತು ಏರಿಕೆ, ಯಾವುದು ಇಳಿಕೆ- ತಿಳಿಯಿರಿ (ETV Bharat)
  • ಚಿನ್ನ
  • ಬೆಳ್ಳಿ
  • ಪ್ಲಾಟಿನಂ
  • ಮೊಬೈಲ್​ ಫೋನ್​
  • ಮೊಬೈಲ್​ ಚಾರ್ಜರ್​
  • ಟಿವಿ
  • ಚರ್ಮದ ಉತ್ಪನ್ನಗಳು
  • ಸೌರ ವಿದ್ಯುತ್ ಬಿಡಿಭಾಗಗಳು​
  • ಕ್ಯಾನ್ಸರ್ ಔಷಧಿ
  • 20 ಖನಿಜಗಳ ಮೇಲೆ ಅಬಕಾರಿ ಸುಂಕ ಇಳಿಕೆ
  • ಇಕಾಮರ್ಸ್​ ಮೇಲಿನ ಟಿಡಿಎಸ್​ ಶೇ. 1ರಿಂದ ಶೇ. 0.1ರಷ್ಟು ಇಳಿಕೆ
  • ತೆರಿಗೆ ಕಡಿತ
  • ಸ್ಟಾರ್ಟ್​ಅಪ್​ನಲ್ಲಿ ಬರುವ ಏಂಜೆಲ್ ಟ್ಯಾಕ್ಸ್​ ರದ್ದು
  • ಸಾಗರ ಆಹಾರ
  • ಚಪ್ಪಲಿ

ಯಾವುದು ದುಬಾರಿ?

  • ಪ್ಲಾಸ್ಟಿಕ್​ ಮತ್ತು ಪ್ಲಾಸ್ಟಿಕ್​ ಉತ್ಪನ್ನಗಳು
  • ಪ್ಲಾಸ್ಟಿಕ್ ಆಮದು ಮೇಲಿನ ಸುಂಕ ಏರಿಕೆ
  • ವಿದ್ಯುತ್​ ಉಪಕರಣಗಳು
  • ಮೊಬೈಲ್​ ಟವರ್
  • ಬ್ರ್ಯಾಂಡೆಡ್ ಬಟ್ಟೆಗಳು
  • ಆಮದು ಆಗುವ ಬಟ್ಟೆಗಳು
  • ಸ್ಟೇಟ್​​ ಸ್ಟ್ಯಾಂಪ್​ ಡ್ಯೂಟಿ ಹೆಚ್ಚಿಸಲು ರಾಜ್ಯಗಳಿಗೆ ಅವಕಾಶ
  • ಪ್ಲೆಕ್ಸ್ ಮತ್ತು ಬ್ಯಾನರ್

ಇದನ್ನೂ ಓದಿ: ಬಡ, ಮಧ್ಯಮ ವರ್ಗದವರಿಗೆ ಬಂಪರ್: 10 ಸಾವಿರ ಕೋಟಿ ನೆರವು, 3 ಕೋಟಿ ಮನೆಗಳ ನಿರ್ಮಾಣ ಗುರಿ - Union Budget 2024

Last Updated : Jul 23, 2024, 5:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.