ETV Bharat / bharat

ಸಾವಿನಲ್ಲೂ ಸಾರ್ಥಕತೆ: ಸೀತಾರಾಮ್​ ಯೆಚೂರಿ ಮೃತದೇಹ ಏಮ್ಸ್​​ಗೆ ದಾನ - SITARAM YECHURY BODY DONATED

author img

By ETV Bharat Karnataka Team

Published : Sep 14, 2024, 10:25 AM IST

ಬೋಧನೆ ಮತ್ತು ಸಂಶೋಧನೆ ಉದ್ದೇಶದಿಂದ ಯೆಚೂರಿ ದೇಹವನ್ನು ದಾನ ಮಾಡಲಾಗಿದೆ ಎಂದು ಏಮ್ಸ್​ ಪ್ರಕಟಣೆಯಲ್ಲಿ ತಿಳಿಸಿದೆ.

Sitaram Yechurys Body Donated To delhi AIIMS
ಸೀತಾರಾಮ್​ ಯೆಚೂರಿ (ANI)

ನವದೆಹಲಿ: ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್​ ಯೆಚೂರಿ ಮೃತದೇಹವನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್​)ಗೆ ಅವರ ಕುಟುಂಬ ದಾನ ಮಾಡಿದೆ.

ಬೋಧನೆ ಮತ್ತು ಸಂಶೋಧನೆ ಉದ್ದೇಶದಿಂದ ಯೆಚೂರಿ ದೇಹವನ್ನು ಅವರ ಕುಟುಂಬಸ್ಥರು ದಾನ ಮಾಡಿದ್ದಾರೆ ಎಂದು ಏಮ್ಸ್​ ಪ್ರಕಟಣೆಯಲ್ಲಿ ತಿಳಿಸಿದೆ. 72 ವರ್ಷದ ಸೀತಾರಾಮ್​ ಯೆಚೂರಿಯವರು ಆಗಸ್ಟ್​ 19, 2024ರಂದು ನ್ಯೂಮೋನಿಯಾ ಸಮಸ್ಯೆಯಿಂದ ದೆಹಲಿಯ ಏಮ್ಸ್​ಗೆ ದಾಖಲಾಗಿದ್ದರು. ಅವರು ಸೆಪ್ಟೆಂಬರ್​ 12ರ ಮಧ್ಯಾಹ್ನ 3.05ಕ್ಕೆ ಇಹಲೋಹ ತ್ಯಜಿಸಿದ್ದರು. ಕುಟುಂಬಸ್ಥರು ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆ ಮತ್ತು ಸಂಶೋಧನೆ ಉದ್ದೇಶದಿಂದ ದೇಹದಾನ ಮಾಡಿದ್ದಾರೆ.

ಯೆಚೂರಿ ಸಾವಿನ ಹಿನ್ನೆಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅಂತಿಮ ನಮನವನ್ನು ಸಲ್ಲಿಸಿದ್ದರು. ಮಾಜಿ ರಾಜ್ಯಸಭಾ ಸದಸ್ಯರಾಗಿದ್ದ ಯೆಚೂರಿ ಅವರಿಗೆ ಅನೇಕ ರಾಜಕೀಯ ಗಣ್ಯರು ಅಂತಿಮ ನಮನ ಸಲ್ಲಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿಪಕ್ಷ ನಾಯಕ ರಾಹುಲ್​ ಗಾಂಧಿ, ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಜೈರಾಮ್​ ರಮೇಶ್​, ಪಶ್ಚಿಮ ಬಂಗಾಳ ಸಿಂ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕರು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದರು.

ಯೆಚೂರಿ ಬದುಕಿನ ಹಾದಿ; ಎಸ್​ಎಫ್​ಐನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಸೀತಾರಾಮ್​ ಯೆಚೂರಿಯ ಅವರು ಬಳಿಕ 1978ರಲ್ಲಿ ಅಧ್ಯಕ್ಷರಾಗಿ ನೇಮಕಗೊಂಡರು. 2015 ರಲ್ಲಿ ಏಪ್ರಿಲ್​ 19ರಂದು ವಿಶಾಖಪಟ್ಟಣದಲ್ಲಿ ನಡೆದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ - ಮಾರ್ಕ್ಸ್‌ವಾದಿಯ ಐದನೇ ಪ್ರಧಾನ ಕಾರ್ಯದರ್ಶಿಯಾಗಿ ಯೆಚೂರಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಪ್ರಕಾಶ್​ ಕಾರಟ್​ ಅವರ ಉತ್ತರಾಧಿಕಾರಿಯಾದ ಯೆಚೂರಿ 2018ರಲ್ಲಿ ಸಿಪಿಐ (ಎಂ) ನ ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆಯಾದರು. 2022 ಏಪ್ರಿಲ್‌ನಲ್ಲಿ, ಯೆಚೂರಿ ಸತತ ಮೂರನೇ ಬಾರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಮರು ಆಯ್ಕೆಯಾಗಿದ್ದರು.

ಇದನ್ನೂ ಓದಿ: ವಿದ್ಯಾರ್ಥಿ ಹೋರಾಟದಿಂದ ರಾಜಕೀಯ ನೇತಾರ: ಸೀತಾರಾಂ ಯೆಚೂರಿ ಸವೆದು ಬಂದ ಹಾದಿ ಹೀಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.