ETV Bharat / bharat

ಕಳೆದ 5 ವರ್ಷದಲ್ಲಿ 10,000 ಮಕ್ಕಳಿಗೆ ಎದೆ ಹಾಲು ನೀಡಿದ​ ಆಸ್ಪತ್ರೆ - Sion Hospitals breastmilk bank

ಹಾಲಿನ ಬ್ಯಾಂಕ್​ ಮೂಲಕ ಮುಂಬೈನ ಆಸ್ಪತ್ರೆಯೊಂದು ಪ್ರತಿ ವರ್ಷ 2,000ದಿಂದ 2,5000 ನವಜಾತ ಶಿಶುಗಳಿಗೆ ಸಹಾಯ ಮಾಡುತ್ತಿದೆ.

sion-hospitals-breastmilk-bank-helps-more-than-10000-newborns-in-5-years
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)
author img

By PTI

Published : Sep 28, 2024, 4:08 PM IST

ಮುಂಬೈ, ಮಹಾರಾಷ್ಟ್ರ: ಏಷ್ಯಾದ ಮೊದಲ ಎದೆಹಾಲಿನ ಬ್ಯಾಂಕ್​ ಆಗಿರುವ ಸಿಯಾನ್​ ಆಸ್ಪತ್ರೆಗೆ ಕಳೆದ ಐದು ವರ್ಷಗಳಿಂದ 43 ಸಾವಿರಕ್ಕೂ ಹೆಚ್ಚು ಜನರು ಎದೆ ಹಾಲು ದಾನ ಮಾಡಿದ್ದಾರೆ ಎಂದು ಬೃಹನ್​ ಮುಂಬೈ ಮುನ್ಸಿಪಲ್​ ಕಾರ್ಪೊರೇಷನ್ (ಬಿಎಂಸಿ) ತಿಳಿಸಿದೆ.

ಈ ದಾನದಿಂದಾಗಿ 43.412 ತಾಯಿಯರ ಈ ದಾನವೂ 10,523 ನವಜಾತ ಶಿಶುಗಳಿಗೆ ಸಹಾಯವಾಗಿದೆ ಎಂದು ಆಗಸ್ಟ್​ನಲ್ಲಿ ರಾಷ್ಟ್ರೀಯ ಸ್ತನ್ಯಪಾನ ಮಾಸದ ವೇಳೆ ನಾಗರಿಕ ಸಂಸ್ಥೆ ಬಿಡುಗಡೆ ಮಾಡಿರುವ ದತ್ತಾಂಶ ತಿಳಿಸಿದೆ. ಎದೆ ಹಾಲಿನ ದಾನವೂ ಮರಣ ದರ ತಪ್ಪಿಸುವಲ್ಲಿ ನಿರ್ಣಾಯಕವಾಗಿದ್ದು, ಕಡಿಮೆ ತೂಕದ ಅಕಾಲಿಕ ಜನನದ ಅಪಾಯದಲ್ಲಿರುವ ನವಜಾತ ಶಿಶುಗಳಿಗೆ ಸಹಾಯವಾಗುತ್ತದೆ.

ಈ ಕುರಿತು ಮಾತನಾಡಿರುವ ಸಿಯೊನ್​ ಆಸ್ಪತ್ರೆಯ ಡೀನ್​ ಡಾ ಮೋಹನ್​ ಜೋಶಿ, ಅರ್ಮಿಡಾ ಫರ್ನಾಂಡೀಸ್​ರಿಂದ 1989ರಲ್ಲಿ ಈ ಹಾಲಿನ ಬ್ಯಾಂಕ್​ ಪ್ರಾರಂಭ ಮಾಡಲಾಯಿತು. ಟಾಟಾ ಗ್ರೂಪ್​ನ ಇಂಡಿಯನ್​ ಆಸ್ಪತ್ರೆಯ ಕಂಪನಿ ಲಿಮಿಟೆಡ್​​ನಿಂದ ಈ ಕೇಂದ್ರದ ಆರಂಭಕ್ಕೆ ಒಂದು ಲಕ್ಷ ರೂ ದಾನ ಪಡೆಯಲಾಗಿತ್ತು. ಏಷ್ಯಾದ ಮೊದಲ ಎದೆಹಾಲಿನ ಬ್ಯಾಂಕ್​ ಎಂಬ ಖ್ಯಾತಿಯೂ ಈ ಕೇಂದ್ರಕ್ಕಿದೆ ಎಂದು ಮಾಹಿತಿ ನೀಡಿದ್ದಾರೆ.

ವಿಟಮಿನ್​ ಕೊರತೆ ಎದುರಿಸುತ್ತಿರುವ ಮಕ್ಕಳಿಗೆ ಆಸರೆ: ತಾಯಿಯ ಹಾಲು ವಿಶೇಷವಾಗಿದೆ. ಕಾರಣ ಈ ಹಾಲಿನಲ್ಲಿ ನವಜಾತ ಶಿಶುಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಬೇಕಾಗುವ ಅನೇಕ ವಿಟಮಿನ್​ ಮತ್ತು ಹಿಮೋಗ್ಲೋಬಿನ್​ ಅಂಶ ಇದೆ. ಕಡಿಮೆ ತೂಕದ ಮಕ್ಕಳು ಮತ್ತು ಕುಂಠಿತ ಬೆಳವಣಿಗೆ ಮಕ್ಕಳು ಹಾಗೂ ಸ್ತನ್ಯಪಾನ ನೀಡಲು ಸಾಧ್ಯವಾಗದ ತಾಯಂದಿರ ಶಿಶುಗಳಿಗೆ ಈ ಎದೆಹಾಲುಗಳ ಬ್ಯಾಂಕ್​ ದೊಡ್ಡ ವರದಾನವಾಗಿದೆ. ಈ ಆಸ್ಪತ್ರೆ ಇದೀಗ ಪಶ್ಚಿಮ ಭಾರತದಲ್ಲೂ ಇದೆ ರೀತಿಯ ಹಾಲಿನ ಬ್ಯಾಂಕ್​ ನಿರ್ಮಾಣಕ್ಕೆ ಸಹಾಯ ಮಾಡುತ್ತಿದೆ.

ಯಾವುದೇ ಮಗು ಸಾಯದಂತೆ ನೋಡಿಕ್ಕೊಳ್ಳುವುದೇ ಈ ಆಸ್ಪತ್ರೆ ಉದ್ದೇಶ: ಈ ಕುರಿತು ಮಾತನಾಡಿರುವ ಆಸ್ಪತ್ರೆಯ ನವಜಾತ ಶಿಶು ವಿಭಾಗದ ಮುಖ್ಯಸ್ಥೆ ಡಾ ಸ್ವಾತಿ ಮನೆರ್ಕರ್​, ಎದೆಹಾಲಿನ ಕೊರತೆಯಿಂದಾಗಿ ಯಾವುದೇ ಮಗುವು ಸಾವನ್ನಪ್ಪಬಾರದು ಎಂಬ ಗುರಿಯೊಂದಿಗೆ ಈ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ದಾನಿಗಳಿಂದ ಹಾಲನ್ನು ಪಡೆಯುವಾಗ ನಾವು ಅಗತ್ಯ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮ ವಹಿಸುತ್ತೇವೆ. ಹೆಚ್ಚಿನ ಎದೆ ಹಾಲು ಹೊಂದಿರುವ ತಾಯಂದಿರು ತಮ್ಮ ಮಗುವಿಗೆ ಹಾಲು ನೀಡಿದ ಬಳಿಕವೇ ಅವರಿಗೆ ಹಾಲು ಪಡೆಯುತ್ತೇವೆ.

ದಾನಿಗಳಿಂದ ಪಡೆದ ಎದೆಹಾಲನ್ನು ಪಾಶ್ಚರೀಕರಣದ ಪ್ರದೇಶದಲ್ಲಿ ಅದನ್ನು ಸಂಸ್ಕರಿಸುತ್ತೇವೆ. ಇದಾದ ಬಳಿಕ ಅದನ್ನು -40ಡಿಗ್ರಿ ಸೆಲ್ಸಿಯಸ್​ನಲ್ಲಿ ಸಂಗ್ರಹಿಸಲಾಗುತ್ತದೆ. ಈ ಹಾಲನ್ನು ವೈದ್ಯರು ಶಿಫಾರಸು ಮಾಡಿದ ಬಳಿಕವೇ ನೀಡಲಾಗುವುದು. ಈ ಹಾಲಿನ ಬ್ಯಾಂಕ್​ ಪ್ರತಿ ವರ್ಷ 2,000 ದಿಂದ 2,5000 ನವಜಾತ ಶಿಶುಗಳಿಗೆ ಸಹಾಯ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿಶ್ವ ಸ್ತನ್ಯಪಾನ ಸಪ್ತಾಹ; ನೀಗಿಸಬೇಕಿದೆ ಅಂತರ, ಬೆಂಬಲ ಪ್ರತಿಪಾದಿಸಿದ ಡಬ್ಲ್ಯೂಹೆಚ್ಒ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.