ETV Bharat / bharat

ರಾಹುಲ್​ ಗಾಂಧಿ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ಬಹುಮಾನ ಘೋಷಿಸಿದ ಶಿವಸೇನಾ ನಾಯಕ: ಅಂತರ ಕಾಯ್ದುಕೊಂಡ ಬಿಜೆಪಿ - Shiv Sena MLA Sanjay Gaikwad - SHIV SENA MLA SANJAY GAIKWAD

ಶಾಸಕರ ಇಂತಹ ಹೇಳಿಕೆ ಕುರಿತು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್​ ಬಾವಾಂಕುಲೆ ಅಂತರ ಕಾಪಾಡಿಕೊಂಡಿದ್ದಾರೆ.

Shiv Sena MLA Sanjay Gaikwad offered Rs 11 lakh to anyone who chops off Rahul Gandhis Tongue
ರಾಹುಲ್​ ಗಾಂಧಿ- ಸಂಜಯ್​ ಗಾಯಕ್ವಾಡ್​​ (ಈಟಿವಿ ಭಾರತ್​​)
author img

By PTI

Published : Sep 16, 2024, 5:27 PM IST

ಮುಂಬೈ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂ ಬಹುಮಾನ ನೀಡುವುದಾಗಿ ಶಿವಸೇನಾ ಶಾಸಕ ಸಂಜಯ್​ ಗಾಯಕ್ವಾಡ್​ ಘೋಷಿಸಿದ್ದಾರೆ. ಈ ಹೇಳಿಕೆ ಇದೀಗ ರಾಜಕೀಯ ವಿವಾದಕ್ಕೆ ಗುರಿಯಾಗಿದೆ.

ಅಮೆರಿಕ ಪ್ರವಾಸದಲ್ಲಿದ್ದ ರಾಹುಲ್​ ಗಾಂಧಿ ಮೀಸಲಾತಿ ಕುರಿತು ನೀಡಿದ ಹೇಳಿಕೆಗೆ ಗಾಯಕ್ವಾಡ್​ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ರಾಹುಲ್​ ಗಾಂಧಿ ತಪ್ಪು ನಿರೂಪಣೆಯ ಮೂಲಕವೇ ಮತ ಪಡೆದರು. ಇಂದು ದೇಶದಲ್ಲಿ ಮೀಸಲಾತಿ ಅಂತ್ಯಗೊಳಿಸುವ ಕುರಿತು ಮಾತನಾಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್​ ತನ್ನ ನೈಜ ಮುಖ ಬಯಲು ಮಾಡಿಕೊಂಡಿದೆ. ರಾಹುಲ್​ ಗಾಂಧಿ ಅವರ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂ ಬಹುಮಾನವಾಗಿ ನೀಡುತ್ತೇನೆ, ಇದು ನನ್ನ ಸವಾಲು ಎಂದಿದ್ದಾರೆ. ಈ ವಿಚಾರ ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಹೇಳಿಕೆಗೆ ಬಿಜೆಪಿ ಅಂತರ ಕಾಪಾಡಿಕೊಂಡಿದೆ.

ಶಾಸಕ ಗಾಯಕ್ವಾಡ್​ರ ಈ ಹೇಳಿಕೆಗೆ ಇದೀಗ ಬಿಜೆಪಿ ನಾಯಕರೇ ವಿರೋಧ ವ್ಯಕ್ತವಾಗಿದೆ. ಶಾಸಕರ ಹೇಳಿಕೆ ಕುರಿತು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್​ ಬಾವಾಂಕುಲೆ ಅಂತರ ಕಾಪಾಡಿಕೊಂಡಿದ್ದಾರೆ. ಅಲ್ಲದೇ ಅನೇಕ ಶಿವಸೇನಾ ನಾಯಕರು ಕೂಡ ಈ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ರಾಹುಲ್​ ಗಾಂಧಿ ಅಮೆರಿಕದದಲ್ಲಿ ನೀಡಿದ ಹೇಳಿಕೆ ಬಗ್ಗೆ ಗಾಯಕ್ವಾಡ್ ಮಾತನಾಡಿ, ದೇಶದ ಮೊದಲ ಪ್ರಧಾನಿ ಜವಾಹರ್​ ಲಾಲ್​ ನೆಹರೂ ಮೀಸಲಾತಿಯನ್ನು ವಿರೋಧಿಸಿದ್ದು, ಇದು ಪ್ರಗತಿಗೆ ಅಡ್ಡಿಯಾಗುತ್ತದೆ ಎಂದ ಅಂಶವನ್ನು ಪಕ್ಷ ಮರೆಯುವುದಿಲ್ಲ ಎಂದಿದ್ದಾರೆ. ರಾಜೀವ್​ ಗಾಂಧಿ ಕೂಡ ಮೀಸಲಾತಿಗೆ ಬೆಂಬಲ ನೀಡುವುದು ಎಂದರೆ, ಮೂರ್ಖರಿಗೆ ಬೆಂಬಲ ನೀಡಿದಂತೆ ಎಂದಿದ್ದರು. ಇದೀಗ ರಾಹುಲ್​ ಗಾಂಧಿ ಕೂಡ ಮೀಸಲಾತಿ ಅಂತ್ಯಗೊಳಿಸುವ ಕುರಿತು ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಮೀಸಲಾತಿ ಸಂಬಂಧ ನೆಹರೂ, ರಾಹುಲ್​ ಗಾಂಧಿ, ರಾಜೀವ್​ ಗಾಂಧಿ ಹೇಳಿಕೆಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಮರಾಠ ಮೀಸಲಾತಿಗಾಗಿ ಹೋರಾಡುತ್ತಿರುವ ಮನೋಜ್​ ಜಾರಂಗೆ ಕೂಡ ಈ ಬಗ್ಗೆ ಯೋಚನೆ ಮಾಡಬೇಕಿದೆ ಎಂದಿದ್ದಾರೆ.

ರಾಹುಲ್​ ಗಾಂಧಿ ಹೇಳಿಕೆ: ವಾಷಿಂಗ್ಟನ್​ ಡಿಸಿಯ ಜಾರ್ಜ್​ಟೌನ್​ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಮಾತನಾಡಿದ ರಾಹುಲ್​ ಗಾಂಧಿ, ದೇಶ ಉತ್ತಮ ಸ್ಥಿತಿಗೆ ತಲುಪಿದಾಗ, ಎಲ್ಲರಿಗೂ ಸಮಾನ ಅವಕಾಶ ದೊರೆತಾಗ ನಾವು ಮೀಸಲಾತಿಯನ್ನು ಅಂತ್ಯಗೊಳಿಸುತ್ತೇವೆ. ಸದ್ಯ ದೇಶದಲ್ಲಿ ಉತ್ತಮ ಸ್ಥಿತಿಯಿಲ್ಲ ಎಂದಿದ್ದರು. ಈ ಹೇಳಿಕೆ ಬಿಜೆಪಿ ಸೇರಿ ಇತರ ನಾಯಕರ ಕೆಂಗಣ್ಣಿಗೆ ಕಾರಣವಾಗಿತ್ತು.

ಇದನ್ನೂ ಓದಿ: ಮೀಸಲಾತಿ ಬಗೆಗಿನ ಹೇಳಿಕೆಯ ಗೊಂದಲವನ್ನು ರಾಹುಲ್ ಗಾಂಧಿ ಮೊದಲು ನಿವಾರಿಸಲಿ: ಪ್ರಶಾಂತ್ ಕಿಶೋರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.