ETV Bharat / bharat

ಕುಸಿದ ನದಿ ದಡ; ಐವರು ಸ್ನೇಹಿತರು ನೀರುಪಾಲು - YOUTHS DIED - YOUTHS DIED

ರಾಜಸ್ಥಾನದ ನದಿ ನೀರಿನಲ್ಲಿ ಮುಳುಗಿ 5 ಮಂದಿ ಸ್ನೇಹಿತರು ಸಾವನ್ನಪ್ಪಿದ್ದಾರೆ. ನೀರಿನಲ್ಲಿ ಇನ್ನಷ್ಟು ಜನರು ಮುಳುಗಿರುವ ಶಂಕೆ ಇದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ನದಿ ದಡ ಕುಸಿದು ನೀರಿನಲ್ಲಿ ಮುಳುಗಿ 7 ಮಂದಿ ಸಾವು
ನದಿ ದಡ ಕುಸಿದು ನೀರಿನಲ್ಲಿ ಮುಳುಗಿ 7 ಮಂದಿ ಸಾವು (ETV Bharat)
author img

By ETV Bharat Karnataka Team

Published : Aug 11, 2024, 5:33 PM IST

ಭರತ್‌ಪುರ (ರಾಜಸ್ಥಾನ): ದೇಶದ ಹಲವು ಭಾಗಗಳಲ್ಲಿ ಮಳೆ ಅಬ್ಬರಿಸುತ್ತಿದೆ. ಇದರಿಂದ ಹಳ್ಳ-ಕೊಳ್ಳ, ನದಿಗಳು ತುಂಬಿ ಹರಿಯುತ್ತಿವೆ. ಜಲಧಾರೆಯ ಸೊಬಗನ್ನು ಕಣ್ತುಂಬಿಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಆದರೆ, ವರ್ಷಧಾರೆಯ ರಭಸಕ್ಕೆ ಹಲವೆಡೆ ಅನಾಹುತಗಳೂ ಸಂಭವಿಸಿವೆ. ರಾಜಸ್ಥಾನದಲ್ಲೂ ಇಂಥಹದ್ದೇ ಅನಾಹುತ ಘಟಿಸಿದೆ. ಇದರಿಂದ ಐವರು ಸ್ನೇಹಿತರು ನೀರುಪಾಲಾಗಿದ್ದಾರೆ.

ಭರತ್​ಪುರ ಜಿಲ್ಲೆಯ ಬಯಾನ ಎಂಬಲ್ಲಿ ಭಾನುವಾರ ಈ ದುರಂತ ಸಂಭವಿಸಿದೆ. ಇಲ್ಲಿನ ಬಂಗಂಗಾ ನದಿಯು ಉಕ್ಕಿ ಹರಿಯುತ್ತಿದೆ. ನದಿಯಿಂದ ಸೃಷ್ಟಿಯಾದ ಹಲವು ಕೆರೆಗಳು ನೀರು ತುಂಬಿ ಜೀವಕಳೆ ಪಡೆದುಕೊಂಡಿವೆ. ನೀರಿನ ಸೊಬಗನ್ನು ವೀಕ್ಷಿಸಲು ಜನರು ತಂಡೋಪತಂಡಗಳಲ್ಲಿ ಬರುತ್ತಿದ್ದಾರೆ. ಹೀಗೆ ಭಾನುವಾರ ರಜಾ ದಿನ ಕಾರಣ ಜನರು ತುಂಬಿಕೊಂಡಿರುವ ನದಿ ನೀರನ್ನು ವೀಕ್ಷಿಸಲು ಸೇರಿದ್ದರು.

ಇಬ್ಬರ ಶವಗಳು ಪತ್ತೆ: ಈ ವೇಳೆ ನದಿ ದಡದ ಮೇಲೆ ಜನರು ನಿಂತಿದ್ದರು. ಸತತ ಮಳೆಯಿಂದ ದಡದ ಮಣ್ಣು ಒದ್ದೆಯಾಗಿ ಮೃದುವಾಗಿತ್ತು. ಜನರು ಒಂದೇ ಕಡೆ ಸೇರಿದ್ದರಿಂದ ಮಣ್ಣು ಕೆರೆಯೊಳಗೆ ಕುಸಿದಿದೆ. ಇದರಿಂದ ಅಲ್ಲಿ ನೆರೆದಿದ್ದ ಜನರು ನೀರಿನಲ್ಲಿ ಬಿದ್ದಿದ್ದಾರೆ. ಈ ವೇಳೆ ಐದು ಮಂದಿ ಯುವಕರು ನೀರು ಮತ್ತು ಮಣ್ಣಿನಲ್ಲಿ ಸಿಲುಕಿದ್ದಾರೆ. ತಕ್ಷಣವೇ ಅಲ್ಲಿದ್ದ ಜನರು ಯುವಕರ ರಕ್ಷಣೆಗೆ ಧಾವಿಸಿದರೂ, ಅವರು ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದಾರೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದರು. ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಬಳಿಕ ಅವರು ರಕ್ಷಣಾ ಕಾರ್ಯ ಕೈಗೊಂಡರು. ಐವರು ಸ್ನೇಹಿತರ ಪೈಕಿ ಇಬ್ಬರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಉಳಿದವರ ಮೃತದೇಹ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.

ನದಿ ನೀರಿನಿಂದ ಕೆರೆಗಳಿಗೆ ನೀರು ಬಂದಿದೆ. ಇದನ್ನು ನೋಡಲು ಜನರು ಬಂದಿದ್ದಾರೆ. ಈ ವೇಳೆ ದಡ ಕುಸಿದು ಯುವಕರು ನೀರಿಗೆ ಬಿದ್ದಿದ್ದಾರೆ. ಅವರಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ನದಿ ಬತ್ತಿದಾಗ ಕೆಳಭಾಗದಲ್ಲಿ ಮಣ್ಣನ್ನು ಜೆಸಿಬಿ ಮೂಲಕ ಗುಂಡಿ ತೋಡಲಾಗಿತ್ತು. ಇದರೊಳಗೆ ನೀರು ಬಂದಿದೆ. ಹೀಗಾಗಿ ದಡ ಕುಸಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಅಚ್ಚರಿಯಾದ್ರೂ ನಿಜ; ಜಾಗತಿಕವಾಗಿ ಪ್ರತಿ ಗಂಟೆಗೆ 26 ಮಂದಿ ನೀರಿನಲ್ಲಿ ಮುಳುಗಿ ಸಾವು! - WORLD DROWNING PREVENTION DAY

ETV Bharat Logo

Copyright © 2025 Ushodaya Enterprises Pvt. Ltd., All Rights Reserved.