ETV Bharat / bharat

ದೆಹಲಿ ಚುನಾವಣೆ ಗೆದ್ದರೆ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2,100 ರೂಪಾಯಿ ಜಮೆ: ಕೇಜ್ರಿವಾಲ್ ಭರವಸೆ

ಸದ್ಯ ಮುಖ್ಯಮಂತ್ರಿ ಮಹಿಳಾ ಸಮ್ಮಾನ್​ ಯೋಜನೆಯಡಿ ದೆಹಲಿಯ ಆಪ್ ಸರ್ಕಾರ, ಮಹಿಳೆಯರಿಗೆ ಪ್ರತೀ ತಿಂಗಳು 1,000 ರೂಪಾಯಿ ನೀಡುತ್ತಿದೆ.

scheme-to-give-rs-1000-to-delhi-women-rolls-out-to-be-raised-to-rs-2100-after-polls-kejriwal
ಮಾಜಿ ಸಿಎಂ, ಎಎಪಿ ಸಂಚಾಲಕ ಅರವಿಂದ್​​ ಕೇಜ್ರಿವಾಲ್ (ANI)
author img

By PTI

Published : 2 hours ago

ನವದೆಹಲಿ: ಮೂರನೇ ಬಾರಿ ದೆಹಲಿ ವಿಧಾನಸಭೆಯ ಗದ್ದುಗೆ ಹಿಡಿಯಲು ಸಿದ್ಧತೆ ನಡೆಸುತ್ತಿರುವ ಆಮ್​ ಆದ್ಮಿ ಪಕ್ಷ (AAP), ಚುನಾವಣೆ ಘೋಷಣೆಗೂ ಮುನ್ನವೇ ಮತದಾರರಿಗೆ ಭರ್ಜರಿ ಯೋಜನೆಗಳ ಭರವಸೆ ನೀಡುತ್ತಿದೆ. ಕಳೆದೆರಡು ದಿನಗಳ ಹಿಂದೆ ಆಟೋ ಚಾಲಕರಿಗೆ ಪಂಚ ಗ್ಯಾರಂಟಿ ಘೋಷಿಸಿತ್ತು. ಇದೀಗ ಮಹಿಳೆಯರಿಗೆ ನೀಡುತ್ತಿರುವ ಮಾಸಿಕ ಹಣವನ್ನು 1,000ದಿಂದ 2,100 ರೂ.ಗೆ ಹೆಚ್ಚಿಸುವ ಭರವಸೆ ಕೊಟ್ಟಿದೆ.

ಈ ಕುರಿತು ಮಾತನಾಡಿರುವ ಎಎಪಿ ಸಂಚಾಲಕರೂ ಆಗಿರುವ ಅರವಿಂದ್​​ ಕೇಜ್ರಿವಾಲ್​, "ಸದ್ಯ ಮುಖ್ಯಮಂತ್ರಿ ಮಹಿಳಾ ಸಮ್ಮಾನ್​ ಯೋಜನೆಯಡಿ ಮಹಿಳೆಯರಿಗೆ ಮಾಸಿಕವಾಗಿ 1,000 ರೂ ನೀಡಲಾಗುತ್ತಿದೆ. ಚುನಾವಣೆಯಲ್ಲಿ ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಈ ಹಣವನ್ನು 2,100ಕ್ಕೆ ಏರಿಸುತ್ತೇವೆ" ಎಂದರು.

ಮಹಿಳಾ ಸಮ್ಮಾನ್​ ಯೋಜನೆ: ದೆಹಲಿ ಸರ್ಕಾರ 2024-25ರ ಬಜೆಟ್​ನಲ್ಲಿ ಈ ಯೋಜನೆಯನ್ನು ಘೋಷಿಸಿತ್ತು. ಇದಕ್ಕಾಗಿ 2,000 ಕೋಟಿ ರೂಪಾಯಿ ಮೀಸಲಿಟ್ಟಿತ್ತು.

ಬಿಜೆಪಿ ಟೀಕೆ: ಆಪ್ ಸರ್ಕಾರದ ನಡೆಯನ್ನು ಟೀಕಿಸಿರುವ ಬಿಜೆಪಿ, ಇದು ಉಚಿತ ಕನಸು ಎಂದು ಟೀಕಿಸಿದೆ. ಜೊತೆಗೆ, ಇದಕ್ಕೆ ಹಣ ಎಲ್ಲಿಂದ ತರುತ್ತೀರಿ ಎಂದು ಪ್ರಶ್ನಿಸಿದೆ.

ನಾನು ಹಣಕಾಸಿನ ಮೆಜಿಷಿಯನ್: ಇದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್​, "ನಾವು ಉಚಿತ ವಿದ್ಯುತ್​ ಭರವಸೆಯನ್ನು ನೀಡಿದ್ದೆವು. ಅದರಂತೆ ನೀಡಿದ್ದೇವೆ. ನಾನೊಬ್ಬ ಮೆಜಿಷಿಯನ್​ ಎಂದು ಬಿಜೆಪಿಗೆ ಹೇಳಬೇಕಿದೆ. ನಾನು ಹಣಕಾಸಿನ ಮೆಜಿಷಿಯನ್" ಎಂದಿದ್ದಾರೆ.

ಎಎಪಿ ಈಗಾಗಲೇ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಬಿಡುಗಡೆ ಮಾಡಿದೆ. ದೆಹಲಿಯ ಒಟ್ಟು 70 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಸೇರಿದಂತೆ ಯಾವುದೇ ಪಕ್ಷದೊಂದಿಗೂ ಮೈತ್ರಿಯಿಲ್ಲದೆ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಕೇಜ್ರಿವಾಲ್ ಈಗಾಗಲೇ ಘೋಷಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಜೊತೆ ಮೈತ್ರಿ ಇಲ್ಲ, ಸ್ವಂತ ಬಲದ ಮೇಲೆ ಏಕಾಂಗಿ ಹೋರಾಟ: ಕೇಜ್ರಿವಾಲ್​ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.