ETV Bharat / bharat

ನೀಟ್​-ಯುಜಿ ಪರೀಕ್ಷೆಯಲ್ಲಿ ಅಕ್ರಮ ಆರೋಪ, ಮರು ಪರೀಕ್ಷೆಗೆ ಮನವಿ: ಕೇಂದ್ರ, ಎನ್​ಟಿಎ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್​ - NEET UG 2024

ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳು ನಡೆದಿರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ 2024ರ ನೀಟ್​-ಯುಜಿ ಪರೀಕ್ಷೆಯನ್ನು ಹೊಸದಾಗಿ ನಡೆಸಬೇಕೆಂದು ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್​ ಕೈಗೆತ್ತಿಕೊಂಡಿತು.

Supreme Court
ಸುಪ್ರೀಂ ಕೋರ್ಟ್​ (ETV Bharat)
author img

By PTI

Published : Jun 11, 2024, 6:24 PM IST

Updated : Jun 11, 2024, 8:00 PM IST

ನವದೆಹಲಿ: ವೈದ್ಯಕೀಯ ಪ್ರವೇಶಾತಿ ಪರೀಕ್ಷೆ 2024ರ ನೀಟ್​ (ಯುಜಿ) ಅನ್ನು ಹೊಸದಾಗಿ ನಡೆಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್​ಟಿಎ)ಗೆ ಸೂಚಿಸಿದೆ.

'ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆಯಾಗಿದೆ, ಉತ್ತರ ಬೇಕಿದೆ': ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಅಕ್ರಮಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ನೀಟ್​-ಯುಜಿ ಮರು ಪರೀಕ್ಷೆಗೆ ಒತ್ತಾಯಿಸಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ರಜಾಕಾಲದ ಪೀಠ, ''ಇವು ಸಾಮಾನ್ಯ ಆರೋಪಗಳಲ್ಲ. ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆಯಾಗಿದೆ. ಆದ್ದರಿಂದ ನಮಗೆ ಉತ್ತರ ಬೇಕಿದೆ'' ಎಂದು ಹೇಳಿತು.

ಕೌನ್ಸೆಲಿಂಗ್‌ಗೆ ತಡೆ ನೀಡಲು ನಿರಾಕರಿಸಿದ ಕೋರ್ಟ್: ಇದೇ ವೇಳೆ, ಎಂಬಿಬಿಎಸ್, ಬಿಡಿಎಸ್ (Bachelor of Dental Surgery) ಮತ್ತು ಇತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳ ಕೌನ್ಸೆಲಿಂಗ್‌ಗೆ ತಡೆ ನೀಡಲು ಕೋರ್ಟ್ ನಿರಾಕರಿಸಿತು. ಮತ್ತೊಂದೆಡೆ, ನೀಟ್-ಯುಜಿ ನಡೆಸುವ ಕೇಂದ್ರ ಮತ್ತು ಎನ್‌ಟಿಎಗೆ ನೋಟಿಸ್ ಜಾರಿ ಮಾಡಿತು. ಬಿಹಾರದಲ್ಲಿ ಈ ಪರೀಕ್ಷಾ ಅವ್ಯವಹಾರ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಅಲ್ಲಿನ ರಾಜ್ಯ ಸರ್ಕಾರಕ್ಕೂ ನೋಟಿಸ್ ನೀಡಿದೆ.

ಏನಿದು ನೀಟ್​-ಯುಜಿ?: ದೇಶಾದ್ಯಂತ ಎಂಬಿಬಿಎಸ್, ಬಿಡಿಎಸ್ ಮತ್ತು ಆಯುಷ್ ಮತ್ತು ಇತರ ಸಂಬಂಧಿತ ಕೋರ್ಸ್‌ಗಳ ಪ್ರವೇಶಕ್ಕಾಗಿ ಎನ್​ಟಿಎ ಮೂಲಕ ನೀಟ್​-ಯುಜಿ ಪರೀಕ್ಷೆ ನಡೆಸಲಾಗುತ್ತದೆ. 2024ನೇ ಸಾಲಿನ ಪರೀಕ್ಷೆ ಮೇ 5ರಂದು ನಡೆದಿತ್ತು. ಜೂನ್ 14ರಂದು ಫಲಿತಾಂಶ ಘೋಷಿಸುವ ನಿರೀಕ್ಷೆ ಇತ್ತು. ಆದರೆ, ಇದಕ್ಕೂ ಮುನ್ನ, ಜೂನ್ 4ರಂದೇ ಫಲಿತಾಂಶ ಪ್ರಕಟಿಸಲಾಗಿದೆ.

ಇದರ ನಡುವೆ ಪರೀಕ್ಷಾ ಅಕ್ರಮ ಆರೋಪಗಳ ಸಂಬಂಧ ಶಿವಂಗಿ ಮಿಶ್ರಾ ಮತ್ತಿತರ 9 ಎಂಬಿಬಿಎಸ್ ಆಕಾಂಕ್ಷಿಗಳು ಹೊಸದಾಗಿ ಪರೀಕ್ಷೆ ನಡೆಸುವಂತೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇಂದಿನ ವಿಚಾರಣೆ ವೇಳೆ, ವಿದ್ಯಾರ್ಥಿಗಳ ಕೌನ್ಸೆಲಿಂಗ್ ತಡೆಹಿಡಿಯುವಂತೆ ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ವಕೀಲ ಮ್ಯಾಥ್ಯೂಸ್ ಜೆ.ನೆಡುಂಪರ ಒತ್ತಾಯಿಸಿದರು. ಆದರೆ, ನ್ಯಾಯಪೀಠವು ಇದಕ್ಕೆ ಒಪ್ಪಲಿಲ್ಲ.

"ನೋಟಿಸ್ ನೀಡಲಾಗಿದೆ. ಅಷ್ಟರಲ್ಲಿಎನ್​ಟಿಎ ತನ್ನ ಪ್ರತಿಕ್ರಿಯೆ ಸಲ್ಲಿಸುತ್ತದೆ. ಕೌನ್ಸೆಲಿಂಗ್ ಆರಂಭವಾಗಲಿ. ನಾವು ಕೌನ್ಸೆಲಿಂಗ್ ನಿಲ್ಲಿಸಲ್ಲ. ಹೀಗೆಯೇ ಮುಂದೆಯೂ ವಾದಿಸಿದರೆ ಅರ್ಜಿಗಳನ್ನು ವಜಾ ಮಾಡಬೇಕಾಗುತ್ತದೆ'' ಎಂದು ಪೀಠ ಎಚ್ಚರಿತು.

ನೀಟ್​​ಗೆ ಸಂಬಂಧಿಸಿದ ಅರ್ಜಿಯೊಂದರ ವಿಚಾರಣೆಯೂ ನಡೆಯುತ್ತಿದೆ. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಾಚೂಡ್ ನೇತೃತ್ವದ ಪೀಠವೂ ಸಹ ಮೇ 17ರಂದು ಕೇಂದ್ರ ಮತ್ತು ಎನ್‌ಟಿಎಗೆ ನೋಟಿಸ್ ಜಾರಿಗೊಳಿಸಿತ್ತು. ಇದರ ವಿಚಾರಣೆಯನ್ನು ಜುಲೈ 8ಕ್ಕೆ ಪಟ್ಟಿ ಮಾಡಲಾಗಿದೆ. ಈ ಹಿಂದಿನ ಅರ್ಜಿಯ ಜೊತೆಗೆ ಹೊಸ ಅರ್ಜಿಗಳನ್ನು ಒಂದುಗೂಡಿಸಬೇಕು ಎಂಬ ಮನವಿಯನ್ನೂ ನ್ಯಾಯ ಪೀಠ ಗಮನಿಸಿದೆ.

ನೀಟ್-ಯುಜಿ ಫಲಿತಾಂಶ ಪ್ರಕಟಕ್ಕೂ ಮುನ್ನವೇ ಶಿವಂಗಿ ಮಿಶ್ರಾ ಮತ್ತು ಇತರರು ಜೂನ್ 1ರಂದು ಅರ್ಜಿ ಸಲ್ಲಿಸಿದ್ದಾರೆ. ಫಲಿತಾಂಶಗಳ ಘೋಷಣೆಯ ನಂತರ ಹಲವಾರು ಅಭ್ಯರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡುವ ಎನ್​ಟಿಎ ನಿರ್ಧಾರದ ವಿರುದ್ಧ ಇನ್ನೂ ಕೆಲವು ಅರ್ಜಿಗಳನ್ನು ಕೋರ್ಟ್​ಗೆ ಸಲ್ಲಿಸಲಾಗಿದೆ. ಆ ಅರ್ಜಿಗಳನ್ನು ಇನ್ನೂ ವಿಚಾರಣೆಗೆ ಪಟ್ಟಿ ಮಾಡಬೇಕಿದೆ.

ಮೇ 17ರಂದು ಸಿಜೆಐ ನೇತೃತ್ವದ ಪೀಠವು ಫಲಿತಾಂಶಗಳಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿತ್ತು. ಆದಾಗ್ಯೂ, ಮರು ಪರೀಕ್ಷೆಯ ನಡೆಸಲು ಮಾಡಿದ ಮನವಿ ಬಗ್ಗೆ ನೋಟಿಸ್ ನೀಡಲು ಸಮ್ಮತಿಸಿತ್ತು. ಇದೇ ರೀತಿಯ ಅರ್ಜಿಗಳು ವಿವಿಧ ಹೈಕೋರ್ಟ್‌ಗಳಲ್ಲಿ ವಿಚಾರಣೆಗೆ ಬಾಕಿ ಇವೆ. ಪಾಟ್ನಾದಲ್ಲಿ ಪತ್ರಿಕೆ ಸೋರಿಕೆಯಾಗಿದೆ ಮತ್ತು ರಾಜಸ್ಥಾನದಲ್ಲಿ ಅಭ್ಯರ್ಥಿಗಳಿಗೆ ತಪ್ಪು ಪ್ರಶ್ನೆ ಪತ್ರಿಕೆಗಳನ್ನು ನೀಡಲಾಗಿದೆ ಎಂಬ ಆರೋಪಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯೊಂದರಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ! ದೇಶದ ವಿವಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇನ್ಮುಂದೆ ವರ್ಷಕ್ಕೆ 2 ಸಲ ಪ್ರವೇಶಾತಿ ಪ್ರಕ್ರಿಯೆ

Last Updated : Jun 11, 2024, 8:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.