ETV Bharat / bharat

ಆರ್‌ಆರ್‌ಆರ್‌ ಸಿನಿಮಾ ಗಳಿಸಿದ ಹಣಕ್ಕಿಂತ ಆರ್‌ಆರ್‌ ತೆರಿಗೆ ಹೆಚ್ಚು: ಪ್ರಧಾನಿ ಮೋದಿ ಆರೋಪ - PM modi - PM MODI

ತೆಲಂಗಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಮಾಡಿದರು. ಕಾಂಗ್ರೆಸ್​ ವಿರುದ್ಧ ಎಂದಿನಂತೆ ತೀವ್ರ ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ (Source: File Photo (ETV Bharat))
author img

By ETV Bharat Karnataka Team

Published : May 8, 2024, 3:38 PM IST

ವೇಮುಲವಾಡ (ತೆಲಂಗಾಣ): ತೆಲಂಗಾಣದಲ್ಲಿ ಅಭಿವೃದ್ಧಿ ನಿಂತು ಹೋಗಿದೆ. ರಾಜ್ಯಾಡಳಿತ ಕ್ಷೀಣಿಸಿದೆ. ಜನರು ಸಂಕಷ್ಟದಲ್ಲಿದ್ದಾರೆ. ಆರ್​ಆರ್​ಆರ್​ ಸಿನಿಮಾ ಗಳಿಸಿದ ಹಣಕ್ಕಿಂತಲೂ ಆರ್​ಆರ್​ (ರೇವಂತ್​ ರೆಡ್ಡಿ) ತೆರಿಗೆ ಜನರಿಗೆ ಹೊರೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ಮಾರ್ಚ್​ 13 ರಂದು ನಾಲ್ಕನೇ ಹಂತದ ಮತದಾನ ಹಿನ್ನೆಲೆ ತೆಲಂಗಾಣದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಧಾನಿ, ಕಾಂಗ್ರೆಸ್​ ನೇತೃತ್ವದ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಆರ್​ಆರ್​ ತೆರಿಗೆ ರಾಷ್ಟ್ರವ್ಯಾಪಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ತೆಲುಗಿನಲ್ಲಿ ಭರ್ಜರಿ ಹಿಟ್​ ಕಂಡ ಆರ್​ಆರ್​ಆರ್ ಸಿನಿಮಾ ಗಳಿಸಿದ ಹಣಕ್ಕಿಂತ ದುಪ್ಪಟ್ಟು, ಆರ್​ಆರ್​ ಟ್ಯಾಕ್ಸ್ ವಸೂಲಿಯಾಗಿದೆ ಎಂಬ ಆರೋಪವಿದೆ ಎಂದು ಪ್ರಧಾನಿ ಹೇಳಿದರು.

ಮೂರನೇ ಹಂತದಲ್ಲೇ ಸೋತ ಕಾಂಗ್ರೆಸ್​: ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಮುಗಿದಿದೆ. ಜನರು ಬಿಜೆಪಿ ಮತ್ತು ಎನ್​ಡಿಎ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ. ಇದರಿಂದ ಕಾಂಗ್ರೆಸ್​ ಮೂರು ಹಂತಗಳು ಮುಗಿಯುವ ಹೊತ್ತಿಗೆ ಸೋಲು ಕಂಡಿದೆ. INDI ಮೈತ್ರಿಕೂಟ ಜನರ ವಿಶ್ವಾಸ ಗಳಿಸುವಲ್ಲಿ ವಿಫಲವಾಗಿದೆ ಎಂದರು.

ಇನ್ನುಳಿದ 4 ಹಂತಗಳ ಮತದಾನದಲ್ಲಿ ಜನರು ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಮತ ಹಾಕಲಿದ್ದಾರೆ. ಕರೀಂನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಂಡಿ ಸಂಜಯ್ ಅವರ ಗೆಲುವು ಈಗಾಗಲೇ ನಿರ್ಧಾರವಾಗಿದೆ. ಇಲ್ಲಿ ಪರಿಚಿತವಲ್ಲದ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ ಎಂದು ಲೇವಡಿ ಮಾಡಿದರು.

ಮೂರನೇ ಹಂತದಲ್ಲಿಯೇ ಎನ್‌ಡಿಎ ಗೆಲುವಿನತ್ತ ಸಾಗುತ್ತಿದೆ. ಕಾಂಗ್ರೆಸ್ ಎಲ್ಲಿ ಗೆಲ್ಲುತ್ತದೆ ಎಂದು ಭೂತಗನ್ನಡಿಯಲ್ಲಿ ಹುಡುಕುವ ಪರಿಸ್ಥಿತಿ ಬಂದಿದೆ. 40 ವರ್ಷಗಳ ಹಿಂದೆ ಬಿಜೆಪಿ ಕೇವಲ ಇಬ್ಬರು ಸಂಸದರನ್ನು ಹೊಂದಿತ್ತು. ಆ ಇಬ್ಬರು ಸಂಸದರಲ್ಲಿ ಒಬ್ಬರು ತೆಲಂಗಾಣದ ಹನುಮಕೊಂಡದಿಂದ ಗೆದ್ದಿದ್ದರು. ಈ ಭಾಗದ ಜನರು ತಮ್ಮ ಪಕ್ಷವನ್ನು ಎಂದಿಗೂ ಮರೆತಿಲ್ಲ ಎಂದು ಪ್ರಧಾನಿ ಮೋದಿ ಹರ್ಷಿಸಿದರು.

ಕಾಂಗ್ರೆಸ್ ಆಡಳಿತದಲ್ಲಿ ಎಲ್ಲ ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿದ್ದವು. 10 ವರ್ಷಗಳ ಎನ್​ಡಿಎ ಆಡಳಿತದಲ್ಲಿ ದೇಶದ ಎಲ್ಲ ಕ್ಷೇತ್ರಗಳನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ್ದೇವೆ. ಕೃಷಿಯನ್ನು ಆಧುನೀಕರಣಗೊಳಿಸಿ ಲಾಭದಾಯಕವಾಗಿಸಲಾಗಿದೆ. ಕ್ಷೇತ್ರದಲ್ಲಿ ಡ್ರೋನ್‌ಗಳ ಬಳಕೆಗೆ ಪ್ರೋತ್ಸಾಹಿಸಲಾಗಿದೆ. ಜವಳಿ ಪಾರ್ಕ್‌ಗಳನ್ನು ಸ್ಥಾಪಿಸಿದ್ದೇವೆ. ಬಂಡವಾಳ ಹೂಡಿಕೆಗೆ ನೆರವು ನೀಡುವ ಮೂಲಕ ರೈತರನ್ನು ಬೆಂಬಲಿಸುತ್ತೇವೆ’ ಎಂದರು.

ಕಾಂಗ್ರೆಸ್ ಮತ್ತು ಬಿಆರ್‌ಎಸ್ ಭ್ರಷ್ಟಾಚಾರದ ಕೂಪವಾಗಿವೆ. ಜನರ ಮುಂದೆ ಒಬ್ಬರಿಗೊಬ್ಬರು ಭ್ರಷ್ಟಾಚಾರದ ಆರೋಪ ಮಾಡುತ್ತಾರೆ. ಆದರೆ ತೆರೆಮರೆಯಲ್ಲಿ ಬಿಆರ್‌ಎಸ್ ಮತ್ತು ಕಾಂಗ್ರೆಸ್ ಭ್ರಷ್ಟಾಚಾರದ ಸಿಂಡಿಕೇಟ್ ಆಗಿವೆ. ಎಂಐಎಂ ಕಾಂಗ್ರೆಸ್ ಜೊತೆ ಉತ್ತಮ ಸಂಬಂಧ ಹೊಂದಿದೆ. ಕಾಂಗ್ರೆಸ್ ಮತ್ತು ಬಿಆರ್‌ಎಸ್ ಹೈದರಾಬಾದನ್ನು ಎಂಐಎಂಗೆ ಗುತ್ತಿಗೆ ನೀಡಿವೆ. ಎಂಐಎಂ ಗೆಲ್ಲಿಸಲು ಕಾಂಗ್ರೆಸ್ ಮತ್ತು ಇಂಡಿಯಾ ಕೂಟ ಶ್ರಮಿಸುತ್ತಿವೆ ಎಂದು ಆರೋಪಿಸಿದರು.

ಇದನ್ನೂ ಓದಿ: ಜಾಗತಿಕ ಮಾರುಕಟ್ಟೆಯಿಂದ ಕೋವಿಡ್​ ಲಸಿಕೆ ಹಿಂಪಡೆದ ಆಸ್ಟ್ರಾಜೆನೆಕಾ - AstraZeneca Vaccine

ETV Bharat Logo

Copyright © 2024 Ushodaya Enterprises Pvt. Ltd., All Rights Reserved.