ETV Bharat / bharat

ನೀವು ಬೈಕ್​ ಚಲಾಯಿಸುತ್ತಿದ್ದೀರಾ? ಹಾಗಾದ್ರೆ ಬಹಳ ಎಚ್ಚರಿಕೆಯಿಂದಿರಿ! - Road Safety Tips - ROAD SAFETY TIPS

ದ್ವಿಚಕ್ರ ವಾಹನ ಚಲಾಯಿಸುವವರು ತಪ್ಪದೆ ಈ ನಿಯಮಗಳನ್ನು ಅನುಸರಿಸುವುದರಿಂದ ಅಪಘಾತದಂತಹ ದುರಂತಗಳನ್ನು ತಪ್ಪಿಸಬಹುದಾಗಿದೆ.

ನೀವು ಬೈಕ್​ ಚಲಾಯಿಸುತ್ತಿದ್ದೀರಾ?: ಹಾಗಾದ್ರೆ ಬಹಳ ಎಚ್ಚರಿಕೆಯಿಂದಿರಿ

author img

By ETV Bharat Karnataka Team

Published : Mar 26, 2024, 11:56 AM IST

ಬೈಕ್​ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ. ಯುವಕರಿಂದ ಹಿಡಿದು 60ರ ಪ್ರಾಯದ ವರೆಗಿನ ಬಹುತೇಕ ಜನರು ಬೈಕ್​​ಗಳನ್ನು ಚಲಾಯಿಸುವುದು ಸರ್ವೇ ಸಾಮಾನ್ಯ. ಅದರಲ್ಲೂ ಮಧ್ಯಮ ವರ್ಗದ ಹೆಚ್ಚಿನ ಜನರು ದ್ವಿಚಕ್ರ ವಾಹನಗಳ ಮೇಲೆ ಹೆಚ್ಚು ಅವಲಂಭಿರಾಗಿರುತ್ತಾರೆ. ಕಾರಿಗೆ ಹೋಲಿಕೆ ಮಾಡಿದರೆ ಈ ಬೈಕ್‌ಗಳ ಪ್ರಯಾಣ ಅತ್ಯಂತ ಅನುಕೂಲಕರವಾಗಿರಲಿದ್ದು ಜತೆಗೆ ಪ್ರಯಾಣದ ವೆಚ್ಚವೂ ಕೊಂಚ ಕಡಿಮೆಯೇ. ಆದರೆ ಈ ಬೈಕ್‌ ಪ್ರಯಾಣ ಕಾರು ಪ್ರಯಾಣಕ್ಕಿಂತ ಹೆಚ್ಚಿನ ಅಪಾಯಕಾರಿಯಾಗಿದೆ ಎಂಬುದನ್ನೂ ಗಮನಿಸಬೇಕು.

ಇನ್​ಶ್ಯೂರೆನ್ಸ್​ ಇನ್ಫಾರ್ಮೇಷನ್ ಇನ್​ಸ್ಟಿಟ್ಯೂಟ್​ ಪ್ರಕಾರ, ಇತರೆ ವಾಹನಗಳಿಗೆ ಹೋಲಿಸಿದರೇ ಬೈಕ್ ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆ ಶೇ.30ಕ್ಕಿಂತಲೂ ಹೆಚ್ಚು ಎಂದು ತಿಳಿಸಿದೆ. 2019ರಲ್ಲಿ ಕಾರು ಅಪಘಾತಗಳಲ್ಲಿ 22,637 ಜನರು ಸಾವನ್ನಪ್ಪಿದ್ದರೇ, ಬೈಕ್​ ಅಪಘಾತದಲ್ಲಿ 58,747 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (NCRB) ತಿಳಿಸಿದೆ. ಹಾಗಾಗಿ ಬೈಕ್​ ಚಾಲನೆ ಮಾಡುವಾಗ ಈ ಸೇಫ್ಟಿಗಳನ್ನು ತಪ್ಪದೆ ಪಾಲಿಸುವುದು ಉತ್ತಮ.

ಬೈಕ್ ಸೇಫ್​ ರೈಡ್​ ಟಿಪ್ಸ್​

  • ಬೈಕ್​​ ಸವಾರಿ ಮಾಡುವಾಗ ಸದಾ ಹೆಲ್ಮೆಟ್ ಧರಿಸುವುದು ಉತ್ತಮ. ಇದು ಅಪಘಾತದ ವೇಳೆ ತಲೆಯನ್ನು ರಕ್ಷಿಸುತ್ತದೆ. ಮೋಟಾರು ವಾಹನ ಕಾಯ್ದೆ 1988ರ ಪ್ರಕಾರ, ಭಾರತದಲ್ಲಿ ಬೈಕ್ ಅಥವಾ ಸ್ಕೂಟರ್ ಸವಾರಿ ಮಾಡುವಾಗ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸಿದಲ್ಲಿ 2000 ರೂ. ದಂಡದ ಜೊತೆಗೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು 3 ತಿಂಗಳವರೆಗೆ ಅಮಾನತುಗೊಳಿಸಬಹುದಾಗಿದೆ.
  • ರಸ್ತೆಗಳಲ್ಲಿ ಬಸ್ ಮತ್ತು ಟ್ರಕ್‌ಗಳಂತಹ ಭಾರೀ ವಾಹನಗಳಿಂದ ಸಾಕಷ್ಟು ಅಂತರವನ್ನು ಕಾಯ್ದುಕೊಳ್ಳುವುದು ಉತ್ತಮ.
  • ರಾತ್ರಿ ಸಮಯದಲ್ಲಿ ಇತರೆ ವಾಹನಗಳಿಗೆ ಸ್ಪಷ್ಟವಾಗಿ ಗೋಚರಿಸಲು ನಿಮ್ಮ ವಾಹನಗಳಿಗೆ ರೇಡಿಯಮ್​ ಅಳವಡಿಸುವುದು ಸೂಕ್ತ. ವಿಶೇಷವಾಗಿ ವಾಹನದ ಮುಂಭಾಗ ಮತ್ತು ಹಿಂಭಾಗದಲ್ಲಿ ರೇಡಿಯಮ್​ ಅಳವಡಿಸುವುದರಿಂದ ವಾಹನ ಸ್ಪಷ್ಟವಾಗಿ ಗೋಚರಿಸುತ್ತದೆ.
  • ಯಾವುದಾದರೂ ವಾಹನವನ್ನು ಓವರ್​ಟೇಕ್​ ಮಾಡುವಾಗ ಎಚ್ಚರದಿಂದಿರಿ. ನಿಮ್ಮ ಮುಂದಿನ ವಾಹನವು ಓವರ್‌ಟೇಕ್ ಅವಕಾಶ ನೀಡುವವರೆಗೂ ತಾಳ್ಮೆಯಿಂದಿರಿ. ಹಠಾತ್​ ಆಗಿ ಓವರ್​ ಟೇಕ್​ ಮಾಡಲು ಹೋದಾಗ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು.
  • ನೀವು ಲಾಂಗ್​ ಡ್ರೈವ್​ ಮಾಡಲು ಬಯಸಿದ್ದರೆ ಬೈಕ್ ರೈಡಿಂಗ್‌ಗೂ ಮುನ್ನ ಎಲ್ಬೋ ಗಾರ್ಡ್, ಮೊಣಕಾಲು ಗಾರ್ಡ್, ಜಾಕೆಟ್ ಮತ್ತು ಶೂಗಳನ್ನು ಧರಿಸುವುದು ಉತ್ತಮ. ಅಪಘಾತದ ಸಂದರ್ಭದಲ್ಲಿ, ಇವು ನಿಮ್ಮನ್ನು ಗಂಭೀರ ಗಾಯಗಳಿಂದ ಪಾರು ಮಾಡುತ್ತವೆ.
  • ಬೈಕ್​ಗಳ ಮೆಂಟೈನ್​ ಮಾಡುವುದು ಕೂಡ ಮುಖ್ಯ. 6 ತಿಂಗಳಿಗೆ ಒಮ್ಮೆಯಾದರೂ ನಿಮ್ಮ ಬೈಕ್​ನ್ನು ಸರ್ವೀಸ್ ಮಾಡಿಸುವುದು ಉತ್ತಮ. ಟೈರ್‌ಗಳಲ್ಲಿನ ಗಾಳಿಯ ಒತ್ತಡ, ಬ್ರೇಕ್, ಕ್ಲಚ್, ಸಸ್ಪೆನ್ಷನ್ ಮತ್ತು ಲೈಟ್‌ಗಳನ್ನು ಸಹ ಒಮ್ಮೆ ಪರಿಶೀಲಿಸಿ. ಇದರಿಂದಲೂ ಅಪಘಾತಗಳನ್ನು ತಪ್ಪಿಸಬಹುದಾಗಿದೆ.
  • ಹವಾಮಾನ ವೈಪರೀತ್ಯ ಸಂದರ್ಭದಲ್ಲಿ ಅಂದರೆ ಜೋರು ಮಳೆ, ಹಿಮಪಾತ, ಮಂಜು ಆವರಿಸಿದ ವೇಳೆ ಬೈಕ್​ ಪ್ರಯಾಣದಿಂದ ದೂರ ಇರವುದು ಉತ್ತಮ. ಅನಿವಾರ್ಯ ಇದ್ದಲ್ಲಿ ಎಲ್ಲಾ ಸಂಚಾರ ನಿಯಮಗಳನ್ನು ಅನುಸರಿಸಿ ಪ್ರಯಾಣಿಸಿ.
  • ಮದ್ಯಪಾನ ಮಾಡಿ ಬೈಕ್​ ಚಲಾಯಿಸುವುದು ಸಾವಿಗೆ ಆಹ್ವಾನ ನೀಡಿದಂತೆ. ಯಾವುದೇ ಕಾರಣಕ್ಕೂ ವಾಹನಗಳನ್ನು ಚಲಾಯಿಸುವು ವೇಳೆ ಇದರಿಂದ ದೂರ ಇರುವುದು ಉತ್ತಮ. ಒಂದು ವೇಳೆ ಮದ್ಯಪಾನ ಮಾಡಿ ಬೈಕ್​ ಚಲಾಯಿಸಿದ್ದು ಕಂಡು ಬಂದಲ್ಲಿ ದಂಡದ ಜೊತೆಗೆ ಜೈಲು ಶಿಕ್ಷಯನ್ನು ಅನುಭಿಸಬೇಕಾಗುತ್ತದೆ.
  • ಎಲ್ಲಾ ದ್ವಿಚಕ್ರ ವಾಹನ ಸವಾರರು ವಿಮಾ ಪಾಲಿಸಿಯನ್ನು ತೆಗೆದುಕೊಳ್ಳುವುದ ಉತ್ತಮ. ನಿಮಗೆ ಅಪಘಾತ ಸಂಭವಿಸಿದರೆ, ಬೈಕ್​ ಕಳ್ಳತನವಾದರೆ ಅಥವಾ ಹಾನಿಯಾದರೆ, ವಿಮಾ ಕಂಪನಿಯು ನಿಮಗೆ ಪರಿಹಾರವನ್ನು ನೀಡುತ್ತದೆ.

ಇದನ್ನೂ ಓದಿ: ವಿಭಿನ್ನ ಬ್ರ್ಯಾಂಡ್‌ಗಳ ಬೈಕ್‌ ಓಡಿಸುವ ಕ್ರೇಜ್‌ ನಿಮಗಿದೆಯೇ?: 5 ಬೆಸ್ಟ್‌ ಬೈಕ್‌ ರೆಂಟಲ್‌ ಆ್ಯಪ್‌ಗಳಿವು - Bike Rental Apps

ETV Bharat Logo

Copyright © 2025 Ushodaya Enterprises Pvt. Ltd., All Rights Reserved.