ETV Bharat / bharat

ಮೀಸಲಾತಿಯು ನಮ್ಮ ಸಂವಿಧಾನದ ಆತ್ಮಸಾಕ್ಷಿ: ಉಪರಾಷ್ಟ್ರಪತಿ ಜಗದೀಪ್ ಧನ್ಕರ್ - Jagdeep Dhankar on Reservation

author img

By ETV Bharat Karnataka Team

Published : Sep 15, 2024, 7:40 PM IST

ಮೀಸಲಾತಿಯು ಭಾರತದ ಸಂವಿಧಾನದ ಆತ್ಮಸಾಕ್ಷಿ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಹೇಳಿದರು.

ಉಪರಾಷ್ಟ್ರಪತಿ ಜಗದೀಪ್ ಧನ್ಕರ್
ಉಪರಾಷ್ಟ್ರಪತಿ ಜಗದೀಪ್ ಧನ್ಕರ್ (IANS)

ಮುಂಬೈ: ಮೀಸಲಾತಿಯು ಸಂವಿಧಾನದ ಆತ್ಮಸಾಕ್ಷಿಯಾಗಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ರವಿವಾರ ಹೇಳಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲು ಮತ್ತು ಮಂಡಲ್ ಆಯೋಗದ ವರದಿಯ ಅನುಷ್ಠಾನವನ್ನು ನಿರಾಕರಿಸಿದವರ ಮನಸ್ಥಿತಿ ಎಂಥದ್ದಾಗಿತ್ತು ಎಂದು ಅವರು ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.

ಮುಂಬೈನ ಎಲ್ಫಿನ್ ಸ್ಟನ್ ಟೆಕ್ನಿಕಲ್ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜಿನಲ್ಲಿ ಸಂವಿಧಾನ್ ಮಂದಿರ (ಸಂವಿಧಾನ ದೇವಾಲಯ) ಉದ್ಘಾಟಿಸಿ ಅವರು ಮಾತನಾಡಿದರು.

ಮೀಸಲಾತಿಯನ್ನು ಕೊನೆಗೊಳಿಸುವ ಬಗ್ಗೆ ಮಾತನಾಡುವವರನ್ನು ಮತ್ತು ಅದು ಅರ್ಹತೆಗೆ ವಿರುದ್ಧವಾಗಿದೆ ಎಂದು ಭಾವಿಸುವವರನ್ನು ಟೀಕಿಸಿದ ಉಪರಾಷ್ಟ್ರಪತಿಗಳು, "ನಾನು ನಿಮಗೆ ಭರವಸೆ ನೀಡುತ್ತೇನೆ, ಮೀಸಲಾತಿಯು ಸಂವಿಧಾನದ ಆತ್ಮಸಾಕ್ಷಿಯಾಗಿದೆ. ಸಾಮಾಜಿಕ ಸಮಾನತೆಯನ್ನು ತರಲು ಮತ್ತು ಅಸಮಾನತೆಯನ್ನು ಕಡಿಮೆ ಮಾಡಲು ನಮ್ಮ ಸಂವಿಧಾನದಲ್ಲಿ ಮೀಸಲಾತಿಯು ಸಕಾರಾತ್ಮಕತೆಯ ಅರ್ಥವನ್ನು ಹೊಂದಿದೆ. ಮೀಸಲಾತಿ ಸಕಾರಾತ್ಮಕ ಕ್ರಮ, ಅದು ನಕಾರಾತ್ಮಕವಲ್ಲ. ಮೀಸಲಾತಿ ಯಾರನ್ನೂ ಅವಕಾಶದಿಂದ ವಂಚಿತಗೊಳಿಸುವುದಿಲ್ಲ, ಬದಲಿಗೆ ಅದು ಸಮಾಜದ ಆಧಾರಸ್ತಂಭ ಮತ್ತು ಶಕ್ತಿಯಾಗಿರುವವರನ್ನು ಕೈ ಹಿಡಿದು ಮೇಲಕ್ಕೆತ್ತುತ್ತದೆ" ಎಂದು ಅವರು ಹೇಳಿದರು.

ಮೀಸಲಾತಿಯ ವಿರುದ್ಧ ಪೂರ್ವಾಗ್ರಹದ ಮಾದರಿಯನ್ನು ಪ್ರಚಾರ ಮಾಡಲಾಗುತ್ತಿದೆ ಮತ್ತು ಸಾಂವಿಧಾನಿಕ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ವಿದೇಶಿ ನೆಲದಲ್ಲಿ ಪದೇ ಪದೆ 'ಭಾರತ ವಿರೋಧಿ' ಹೇಳಿಕೆಗಳನ್ನು ನೀಡುತ್ತಿದ್ದಾರೆ ಮತ್ತು ಮೀಸಲಾತಿಯನ್ನು ಕೊನೆಗೊಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಕೆಲವರು ಸಂವಿಧಾನವನ್ನು ಪ್ರದರ್ಶಿಸುವುದನ್ನು ಟೀಕಿಸಿದ ಧನ್ಕರ್, "ಸಂವಿಧಾನವನ್ನು ಪುಸ್ತಕದಂತೆ ಪ್ರದರ್ಶಿಸಬಾರದು. ಸಂವಿಧಾನವನ್ನು ಗೌರವಿಸಬೇಕು. ಸಂವಿಧಾನವನ್ನು ಓದಬೇಕು. ಸಂವಿಧಾನವನ್ನು ಅರ್ಥಮಾಡಿಕೊಳ್ಳಬೇಕು. ಕನಿಷ್ಠ ಯಾವುದೇ ನಾಗರಿಕ, ಜ್ಞಾನಿ ವ್ಯಕ್ತಿ, ಸಂವಿಧಾನದ ಬಗ್ಗೆ ಸಮರ್ಪಿತ ಮನೋಭಾವ ಹೊಂದಿರುವವರು ಮತ್ತು ಸಂವಿಧಾನದ ಸಾರವನ್ನು ಗೌರವಿಸುವವರು ಸಂವಿಧಾನವನ್ನು ಕೇವಲ ಪುಸ್ತಕವಾಗಿ ಪ್ರಸ್ತುತಪಡಿಸುವುದನ್ನು, ಅದನ್ನು ಪ್ರದರ್ಶಿಸುವುದನ್ನು ಒಪ್ಪುವುದಿಲ್ಲ" ಎಂದರು.

"ಮೀಸಲಾತಿ ವಿರೋಧಿ ಮನಸ್ಥಿತಿ, ಮೀಸಲಾತಿಯ ವಿರುದ್ಧ ಪೂರ್ವಾಗ್ರಹದ ಮಾದರಿಗಳು ಕಳವಳಕಾರಿಯಾಗಿವೆ. ಇಂದು, ಸಾಂವಿಧಾನಿಕ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿಯೊಬ್ಬರು ಮೀಸಲಾತಿಯನ್ನು ರದ್ದುಗೊಳಿಸಬೇಕು ಎಂದು ವಿದೇಶದಲ್ಲಿ ಹೇಳುತ್ತಾರೆ." ಎಂದು ಅವರು ನುಡಿದರು.

"ನಿಜವಾದ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಭಾರತ ರತ್ನವನ್ನು ಏಕೆ ನೀಡಲಿಲ್ಲ. ಮಾರ್ಚ್ 31, 1990 ರಂದು ಅವರಿಗೆ ಭಾರತ ರತ್ನ ನೀಡಲಾಯಿತು. ಈ ಗೌರವವನ್ನು ಮೊದಲೇ ಏಕೆ ನೀಡಲಿಲ್ಲ? ಬಾಬಾ ಸಾಹೇಬರು ಸಂವಿಧಾನದ ಶಿಲ್ಪಿ. ಬಾಬಾ ಸಾಹೇಬ್ ಅವರ ಚಿಂತನೆಗೆ ಸಂಬಂಧಿಸಿದ ಮತ್ತೊಂದು ಮಹತ್ವದ ವಿಷಯವೆಂದರೆ ಮಂಡಲ್ ಆಯೋಗದ ವರದಿ. ಈ ವರದಿಯನ್ನು ಮಂಡಿಸಿದ ನಂತರ, ಮುಂದಿನ ಹತ್ತು ವರ್ಷಗಳವರೆಗೆ ಮತ್ತು ದೇಶಕ್ಕೆ ಇಬ್ಬರು ಪ್ರಧಾನ ಮಂತ್ರಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಇದ್ದ ಆ ದಶಕದಲ್ಲಿ ಈ ವರದಿಯ ಬಗ್ಗೆ ಒಂದೇ ಒಂದು ಕ್ರಮವನ್ನು ತೆಗೆದುಕೊಳ್ಳಲಿಲ್ಲ" ಎಂದು ಅವರು ಹೇಳಿದರು.

ಇದನ್ನೂ ಓದಿ : ಅಧಿಕಾರಕ್ಕೆ ಬಂದರೆ ಬಿಹಾರದಲ್ಲಿ ಮದ್ಯ ನಿಷೇಧ ತಕ್ಷಣ ಕೊನೆಗಾಣಿಸುವೆ: ಪ್ರಶಾಂತ್ ಕಿಶೋರ್ - BIHAR LIQUOR BAN

ETV Bharat Logo

Copyright © 2024 Ushodaya Enterprises Pvt. Ltd., All Rights Reserved.