ETV Bharat / bharat

ರಾಮನೂರಿನಲ್ಲಿ ರಾವಣನಿಗೂ ದೇವಸ್ಥಾನ: ದಶಾಹರನಿಗೆ ಇಲ್ಲೇಕೆ ವಿಶೇಷ ಪೂಜೆ ಗೊತ್ತಾ?

ಲಖನೌದಲ್ಲಿ ರಾವಣನ ದೇವಸ್ಥಾನವಿದೆ. 135 ವರ್ಷಗಳ ಹಿಂದೆಯೇ ಕುಂದನ್ ಲಾಲ್ ಕುಂಜ್ ಬಿಹಾರಿ ಲಾಲ್ ಎಂಬುವವರು ಈ ದೇವಸ್ಥಾನ ನಿರ್ಮಿಸಿದ್ದಾರೆ. ಹೌದು ರಾಮನೂರಿನಲ್ಲಿ ದಶಾನನನ್ನು ಏಕೆ ಪೂಜಿಸಲಾಗುತ್ತಿದೆ ಎಂಬುದು ನಿಮಗೆ ಗೊತ್ತಾ?

ravan temple lucknow public worship good qualities dahan
ರಾಮನೂರಿನಲ್ಲಿ ರಾವಣನಿಗೂ ದೇವಸ್ಥಾನ: ರಾವಣಾಸೂರನಿಗೆ ಇಲ್ಲೇಕೆ ವಿಶೇಷ ಪೂಜೆ ಗೊತ್ತಾ? (ETV Bharat)
author img

By ETV Bharat Karnataka Team

Published : Oct 10, 2024, 9:53 AM IST

ಲಖನೌ, ಉತ್ತರಪ್ರದೇಶ: ರಾವಣನಲ್ಲಿ ಜನರು ಸಹಜವಾಗೇ ಕೆಟ್ಟದ್ದನ್ನು ಮಾತ್ರ ನೋಡುತ್ತಾರೆ. ಆದರೆ ಅವನಲ್ಲೂ ಸಾಕಷ್ಟು ಒಳ್ಳೆಯತನ ಇತ್ತು ಎಂಬುದನ್ನು ಮರೆತು ಬಿಡುತ್ತಾರೆ. ಆತ ಮಹಾನ್​ ವಿದ್ವಾಂಸ ಎಂಬ ಅಂಶ ಎಷ್ಟೋ ಜನರಿಗೆ ಗೊತ್ತೇ ಇಲ್ಲ ಎನಿಸುತ್ತದೆ. ಅಷ್ಟೇ ಅಲ್ಲ ರಾವಣ ಶಕ್ತಿಶಾಲಿ ಮತ್ತು ಮಹಾದೇವನ ನಿಜವಾದ ಭಕ್ತರಾಗಿದ್ದರು. ವರ್ಷಕ್ಕೊಮ್ಮೆ ದಸರಾದಂದು ರಾವಣನನ್ನು ಪೂಜಿಸುವುದು ಇದೇ ಕಾರಣಕ್ಕಾಗಿ. ಉತ್ತರ ಪ್ರದೇಶದ ರಾಜಧಾನಿ ಲಖನೌದ ಚೌಕ್ ಪ್ರದೇಶದಲ್ಲಿರುವ ರಾವಣ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಇಲ್ಲಿನ ಆಚರಣೆಗಳ ಬಗ್ಗೆ ಅರ್ಚಕ ಸಿಯಾರಾಮ್ ಅವಸ್ತಿ ಹೇಳುವುದು ಹೀಗೆ.

ಲಖನೌದ ಯಾವ ಸ್ಥಳದಲ್ಲಿದೆ ಈ ದೇವಾಲಯ?: ಚಾರ್ ಧಾಮ್ ದೇವಾಲಯವು ಲಖನೌದ ಚೌಕ್‌ನಲ್ಲಿರುವ ರಾಣಿ ಕತ್ರಾದಲ್ಲಿದೆ. ಇಲ್ಲಿ ಚಾರೋಧಾಮದ ದೇವಾಲಯಗಳಿವೆ. ಇವುಗಳನ್ನು 135 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಆದರೆ, ಇಲ್ಲಿ ಆಕರ್ಷಣೆಯ ಕೇಂದ್ರ ಬಿಂದು ಎಂದರೆ ಅದು ರಾವಣನ ಆಸ್ಥಾನ. ಈ ಚಾರ್​​ ಧಾಮ್ ದೇವಾಲಯವನ್ನು 135 ವರ್ಷಗಳ ಹಿಂದೆ ಕುಂದನ್ ಲಾಲ್ ಕುಂಜ್ ಬಿಹಾರಿ ಲಾಲ್ ಎಂಬುವವರು ನಿರ್ಮಿಸಿದ್ದಾರೆ ಎಂದು ದೇವಾಲಯದ ಅರ್ಚಕ ಸಿಯಾರಾಮ್ ಅವಸ್ತಿ ಹೇಳಿದ್ದಾರೆ.

ravan temple lucknow public worship good qualities
ಚಾರ್ ಧಾಮ್ ದೇವಾಲಯವು ಲಖನೌದ ಚೌಕ್‌ನಲ್ಲಿರುವ ರಾಣಿ ಕತ್ರಾದಲ್ಲಿದೆ (ETV Bharat)

ಇದನ್ನು ಓದಿ: ಅರಮನೆಯಲ್ಲಿ ಶರನ್ನವರಾತ್ರಿ ಪೂಜೆಯ ಮಹತ್ವವೇನು?: ರಾಜವಂಶಸ್ಥ ಯದುವೀರ್‌ ಸಂದರ್ಶನ - Mysuru Dasara 2024

ದಸರಾ ವೇಳೆಯೇ ರಾವಣನ ಆರಾಧನೆ: ಹೆಸರಿನಂತೆಯೇ ಈ ದೇವಾಲಯದಲ್ಲಿ ನಾಲ್ಕು ಧಾಮಗಳಿವೆ. ಸಿಯಾರಾಮ್ ತನ್ನ ದೇವಾಲಯದಲ್ಲಿ ರಾವಣನ ಆಸ್ಥಾನವಿದೆ. ಅದು ಪ್ರತಿದಿನ ತೆರೆದಿರುತ್ತದೆ. ದಸರಾ ಸಮಯದಲ್ಲಿ ಇಲ್ಲಿ ರಾವಣನನ್ನು ಬಹಳ ವೈಭವದಿಂದ ಪೂಜಿಸಲಾಗುತ್ತದೆ. ಈ ದೇವಾಲಯದಲ್ಲಿ ರಾವಣನ ಆಸ್ಥಾನವನ್ನು ನಿರ್ಮಿಸಲಾಗಿದೆ. ಇದರಲ್ಲಿ ರಾವಣನು ಸಿಂಹಾಸನದ ಮೇಲೆ ಕುಳಿತಿದ್ದಾನೆ. ಅವನ ಮಂತ್ರಿ, ಮಗ ಮತ್ತು ಸಹೋದರ ಮತ್ತು ಇತರ ರಾಕ್ಷಸರು ಆತನ ಆಸ್ಥಾನದಲ್ಲಿ ಆಸೀನರಾಗಿದ್ದಾರೆ.

ravan temple lucknow public worship good qualities dahan
ಹೆಸರಿನಂತೆಯೇ ಈ ದೇವಾಲಯದಲ್ಲಿ ನಾಲ್ಕು ಧಾಮಗಳಿವೆ (ETV Bharat)

ರಾವಣನಿಗೆ ಇಲ್ಲೇಕೆ ಪೂಜೆ ಮಾಡಲಾಗುತ್ತದೆ?: ಚಾರ್ ಧಾಮ್ ದೇವಸ್ಥಾನದಲ್ಲಿ ದಸರಾ ದಿನದಂದು ರಾವಣನನ್ನು ಪೂಜಿಸಲಾಗುತ್ತದೆ ಎಂದು ಅರ್ಚಕ ಸಿಯಾರಾಮ್ ಹೇಳುತ್ತಾರೆ. ರಾವಣನ ಬುದ್ಧಿವಂತಿಕೆ ಅರಿತುಕೊಳ್ಳುವುದು ಮತ್ತು ದುಷ್ಟರಿಂದ ನಮ್ಮನ್ನು ದೂರ ಇಡುವುದು ಈ ಪೂಜೆಯ ಹಿಂದಿನ ಪ್ರಮುಖ ಉದ್ದೇಶವಾಗಿದೆ. ರಾವಣನು ವಿದ್ವಾಂಸನಾಗಿದ್ದನು ಎಂಬ ವಿಚಾರವನ್ನು ಅರ್ಚಕ ಸಿಯಾರಾಮ್​ ಪದೇ ಪದೇ ನೆನಪಿಸುತ್ತಾರೆ. ಆತ ಮಹಾದೇವನ ಭಕ್ತನಲ್ಲದೆ, ಶ್ರೀರಾಮನ ಬಗ್ಗೆ ಗೌರವ ಹೊಂದಿದ್ದ. ಅವನು ರಾಮನಿಂದಲೇ ತನ್ನ ಸಂಹಾರ ಆಗುತ್ತೆ ಎಂಬ ವಿಚಾರವನ್ನೂ ತಿಳಿದಿದ್ದ. ಇಷ್ಟೆಲ್ಲ ಗೊತ್ತಿದ್ದೂ ಅವನು ಸೀತೆಯನ್ನು ಅಪಹರಿಸಿದ್ದನು.

135 ವರ್ಷಗಳ ಹಿಂದೆಯೇ ಕುಂದನ್ ಲಾಲ್ ಕುಂಜ್ ಬಿಹಾರಿ ಲಾಲ್ ಎಂಬುವವರು ಈ ದೇವಸ್ಥಾನ ನಿರ್ಮಿಸಿದ್ದಾರೆ (ETV Bharat)

ರಾವಣನ ದೇಗುಲಕ್ಕೂ ಭಕ್ತರ ದಂಡು: ನವರಾತ್ರಿ ವೇಳೆ ಈ ದೇವಸ್ಥಾನಕ್ಕೆ ಖಂಡಿತ ಬರುತ್ತೇನೆ. ಇಲ್ಲಿಗೆ ಬರುವುದು ವಿಭಿನ್ನ ಭಾವನೆಯನ್ನು ಉಂಟುಮಾಡುತ್ತದೆ. ಅದರಲ್ಲೂ ರಾವಣನ ದೇಗುಲವನ್ನು ಕಂಡರೆ ಆಶ್ಚರ್ಯವಾಗುತ್ತದೆ ಮತ್ತು ಲಕ್ಷಾಂತರ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದರೂ ಕೇವಲ ಜ್ಞಾನದಿಂದಲೇ ಪೂಜಿಸಬಹುದೆಂದು ತಿಳಿಯುತ್ತದೆ ಅಂತಾರೆ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅಜಯ್ ಶರಣ್ ಅವಸ್ತಿ ಎಂಬುವವರು.

ಇವುಗಳನ್ನು ಓದಿ: ಹೀಗಿತ್ತು ರತನ್​ ಟಾಟಾ ಬಾಲ್ಯ; 10 ಸಾವಿರ ಕೋಟಿಯಿಂದ 100 ಬಿಲಿಯನ್ ಡಾಲರ್​​ ಕಂಪನಿ ಕಟ್ಟಿದ್ದು ಹೇಗೆ?

ವಿಜಯ ದಶಮಿ ಹಬ್ಬದ 'ವಿಜಯ ಮುಹೂರ್ತ' ಯಾವಾಗ? ಬನ್ನಿ ಮರದ ಪೂಜೆ ಹೇಗೆ? - Vijaya Muhurtham

ನವರಾತ್ರಿಯಲ್ಲಿ ಬಣ್ಣ ಬಣ್ಣದ ಸೀರೆಗಳಲ್ಲಿ ಕಂಗೊಳಿಸುವ ದುರ್ಗಾ ಮಾತೆ: ಇದರ ವಿಶೇಷತೆ ಗೊತ್ತೇ? - Navaratri Colours

ETV Bharat Logo

Copyright © 2024 Ushodaya Enterprises Pvt. Ltd., All Rights Reserved.