ETV Bharat / bharat

'ಭಾರತ ಮುನ್ನುಗ್ಗುತ್ತಿದೆ': ದೇಶದ ಅಭಿವೃದ್ಧಿ, ಅಟಲ್ ಸೇತು ಬಗ್ಗೆ ರಶ್ಮಿಕಾ ಗುಣಗಾನ - Rashmika Mandanna - RASHMIKA MANDANNA

ದೇಶದ ಪ್ರಗತಿ ಬಗ್ಗೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Rashmika Mandanna
ನಟಿ ರಶ್ಮಿಕಾ ಮಂದಣ್ಣ (ETV Bharat)
author img

By ANI

Published : May 15, 2024, 5:31 PM IST

Updated : May 15, 2024, 5:46 PM IST

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರಿನ ದೇಶದ ಅತಿದೊಡ್ಡ ಸಮುದ್ರ ಸೇತುವೆ (ಅಟಲ್ ಬಿಹಾರಿ ವಾಜಪೇಯಿ ಸೇವ್ರಿ-ನವ ಶೇವಾ ಅಟಲ್ ಸೇತುವೆ)ಯನ್ನು ಜನವರಿ ತಿಂಗಳ ಎರಡನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದರು. ಇದು ಮುಂಬೈನ ಸಾರಿಗೆ ವ್ಯವಸ್ಥೆ ಮೇಲೆ ಅದ್ಭುತ ಪರಿಣಾಮ ಬೀರಿದೆ. ಇದೀಗ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಭಾರತ ಮುನ್ನುಗ್ಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಅಟಲ್ ಸೇತುವೆ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ, "ಎರಡು ಗಂಟೆಗಳ ಪ್ರಯಾಣವನ್ನು ಕೇವಲ 20 ನಿಮಿಷಗಳಲ್ಲಿ ಮಾಡಬಹುದು. ನೀವದನ್ನು ನಂಬುವುದಿಲ್ಲ. ಇಂಥದ್ದೊಂದು ಮಾರ್ಗ ಸಾಧ್ಯವಿತ್ತು ಎಂದು ಯಾರು ಯೋಚಿಸಿದ್ದರು ಹೇಳಿ?. ಅಂತಹ ಅದ್ಭುತ ಮೂಲಸೌಕರ್ಯಗಳಿಂದ ನವಿ ಮುಂಬೈನಿಂದ ಮುಂಬೈವರೆಗೆ, ಗೋವಾದಿಂದ ಮುಂಬೈವರೆಗೆ, ಬೆಂಗಳೂರಿನಿಂದ ಮುಂಬೈವರೆಗೆ ಎಲ್ಲಾ ಪ್ರಯಾಣಗಳು ಸುಲಭವಾದರೆ ಹೇಗಿರುತ್ತದೆ. ಇದು ನಮಗೆ ಹೆಮ್ಮೆ ತರುವ ವಿಚಾರ'' ಎಂದು ತಿಳಿಸಿದರು.

"ಇಲ್ಲ (no) ಅನ್ನೋದನ್ನು ಕೇಳುವುದನ್ನು ಭಾರತ ನಿಲ್ಲಿಸಿಬಿಟ್ಟಿದೆ. ಭಾರತೀಯರು ಇನ್ಮುಂದೆ ಅದಕ್ಕೆ ಸಿದ್ಧರಿಲ್ಲ. ಹಾಗಾಗಿ ನನಗೀಗ 'ಭಾರತ ಎಲ್ಲೂ ನಿಲ್ಲುವುದಿಲ್ಲ' ಎಂದು ಅನಿಸುತ್ತಿದೆ. ದೇಶದ ಬೆಳವಣಿಗೆಯನ್ನು ಗಮನಿಸಿ. ಅದ್ಭುತವಾಗಿದೆ. ಕಳೆದ 10 ವರ್ಷಗಳಲ್ಲಿನ ದೇಶದ ಬೆಳವಣಿಗೆ ಪ್ರಶಂಸನೀಯ. ಮೂಲಸೌಕರ್ಯ, ಯೋಜನೆಗಳು, ರಸ್ತೆ ಯೋಜನೆ ಎಲ್ಲವೂ ಅದ್ಭುತವಾಗಿವೆ. ಇದು ನಮ್ಮ ಸಮಯ ಎಂದು ನನಗನಿಸುತ್ತಿದೆ. ಏಳು ವರ್ಷಗಳಲ್ಲಿ ಆ ಪ್ರೊಜೆಕ್ಟ್​​ (20 ಕಿ.ಮೀ) ಪೂರ್ಣಗೊಂಡಿದೆ ಎಂಬುದನ್ನು ಈಗಷ್ಟೇ ತಿಳಿದುಕೊಂಡೆ. ಅದ್ಭುತ, ನನಗೆ ಮಾತೇ ಬರುತ್ತಿಲ್ಲ'' ಎಂದು ತಿಳಿಸಿದರು.

ಇದನ್ನೂ ಓದಿ: ಸಲ್ಮಾನ್ ಖಾನ್ ನಟನೆಯ 'ಸಿಖಂದರ್‌'ಗೆ ನಾಯಕಿಯಾದ ರಶ್ಮಿಕಾ ಮಂದಣ್ಣ - Rashmika Mandanna

ಮಾತು ಮುಂದುವರಿಸಿದ ರಶ್ಮಿಕಾ, "ಯುವ ಪೀಳಿಗೆ, ಯುವ ಭಾರತ ವೇಗದಲ್ಲಿ ಬೆಳೆಯುತ್ತಿದೆ. ಭಾರತ ಒಂದು ಸ್ಮಾರ್ಟ್ ಕಂಟ್ರಿ. ನಾನು ಹೇಳಲು ಬಯಸುವುದೇನೆಂದರೆ, ಯುವ ಭಾರತೀಯರು ಮತ ಚಲಾಯಿಸಬೇಕು. ಪ್ರಸ್ತುತ ಅವರು ಬಹಳ ಜವಾಬ್ದಾರಿಯುತರಾಗಿದ್ದಾರೆ. ನೀವು ಏನೇ ಹೇಳಿದರೂ ಕೂಡ ಅವರು ಪ್ರಭಾವಿತರಾಗುತ್ತಾರೆ ಎಂಬ ವಿಚಾರ ಇನ್ನು ಮುಂದೆ ನಡೆಯಲ್ಲ. ಏಕೆಂದರೆ, ಜನರು ಎಲ್ಲದನ್ನೂ ಗಮನಿಸುತ್ತಿದ್ದಾರೆ. ಜನರೀಗ ಜವಾಬ್ದಾರರಾಗಿರುತ್ತಾರೆ. ಈ ಬಗ್ಗೆ ಬಹಳ ಬುದ್ಧಿವಂತರಾಗಿದ್ದಾರೆ. ಅವರು ಸರಿಯಾದ ಮಾರ್ಗದಲ್ಲಿದ್ದಾರೆ ಎಂದು ನನಗನಿಸುತ್ತದೆ'' ಎಂದು ತಿಳಿಸಿದರು.

ಇದನ್ನೂ ಓದಿ: 'ಬ್ಲಾಕ್‌ಔಟ್ 2024' ಪಟ್ಟಿಯಲ್ಲಿ ನಟಿ ಆಲಿಯಾ ಭಟ್​​ - Alia Bhatt

ಇನ್ನು ನಟಿಯ ಸಿನಿಮಾ ವಿಚಾರ ಗಮನಿಸುವುದಾದರೆ, ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್ ಮುಖ್ಯಭೂಮಿಕೆಯ ಆ್ಯಕ್ಷನ್​​​ ಥ್ರಿಲ್ಲರ್ 'ಸಿಖಂದರ್'ನಲ್ಲಿ ಕಾಣಿಸಿಕೊಳ್ಳಲಿದ್ದು, ಇತ್ತೀಚೆಗಷ್ಟೇ ಅಧಿಕೃತವಾಗಿ ಘೋಷಿಸಿದ್ದಾರೆ. ಬಹುನಿರೀಕ್ಷಿತ ಚಿತ್ರ 'ಪುಷ್ಪ 2: ದಿ ರೂಲ್'ಬಿಡುಗಡೆಗೆ ಎದುರು ನೋಡುತ್ತಿದೆ. ಉಳಿದಂತೆ ರೈನ್​ಬೋ, ದಿ ಗರ್ಲ್​​ಫ್ರೆಂಡ್​​, ಛಾವಾ ಪ್ರೊಜೆಕ್ಟ್​ಗಳು ನಟಿ ಬಳಿ ಇವೆ.

Last Updated : May 15, 2024, 5:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.