ETV Bharat / bharat

ರಂಜಾನ್ 2024: ಭಾರತದಲ್ಲಿ ಅರ್ಧಚಂದ್ರ ದರ್ಶನ, ಮಂಗಳವಾರದಿಂದ ಉಪವಾಸ ಪ್ರಾರಂಭ - Ramadan 2024

ಸೌದಿ ಅರೇಬಿಯಾದಲ್ಲಿ ನಿನ್ನೆ ರಂಜಾನ್ ಚಂದ್ರನ ದರ್ಶನವಾಗಿದೆ. ಭಾರತದಲ್ಲಿ ಮುಸ್ಲಿಮರು ಇಂದು ರಾತ್ರಿ ಅರ್ಧಚಂದ್ರನನ್ನು ನೋಡಿದ್ದಾರೆ. ಮಂಗಳವಾರದಿಂದ ಉಪವಾಸ ಪ್ರಾರಂಭವಾಗಲಿದೆ.

Ramadan
ರಂಜಾನ್
author img

By ETV Bharat Karnataka Team

Published : Mar 11, 2024, 10:38 PM IST

ಹೈದರಾಬಾದ್ : ಇಸ್ಲಾಂನ ಪವಿತ್ರ ಹಬ್ಬ ರಂಜಾನ್ ಆರಂಭಗೊಂಡಿದೆ. ಈ ತಿಂಗಳಿನಿಂದ ಉಪವಾಸ ಆರಂಭವಾಗುತ್ತಿದೆ. ವಿಶ್ವಾದ್ಯಂತ ಕೋಟ್ಯಂತರ ಮುಸ್ಲಿಮರು ಉಪವಾಸ ಆಚರಿಸುತ್ತಾರೆ. 29 ರಿಂದ 30 ದಿನಗಳವರೆಗೆ ರಂಜಾನ್ ಉಪವಾಸ, ಪ್ರಾರ್ಥನೆ, ಆತ್ಮಾವಲೋಕನ ನಡೆಯಲಿದೆ.

ಸೌದಿ ಅರೇಬಿಯಾದಲ್ಲಿ ನಿನ್ನೆ ರಂಜಾನ್ ಚಂದ್ರನ ದರ್ಶನವಾಗಿದೆ. ಭಾರತದಲ್ಲಿ ಮುಸ್ಲಿಮರು ಇಂದು ರಾತ್ರಿ ಅರ್ಧಚಂದ್ರನನ್ನು ನೋಡಿದ್ದಾರೆ. ನಾಳೆಯಿಂದಲೇ ರಂಜಾನ್​ ಉಪವಾಸ ಪ್ರಾರಂಭವಾಗಲಿದೆ. ಇದು ಪವಿತ್ರ ತಿಂಗಳ ಆರಂಭವನ್ನು ಸೂಚಿಸುತ್ತದೆ. "ಇಂದು ಸಂಜೆ ಜಮ್ಮು ಮತ್ತು ಕಾಶ್ಮೀರದಲ್ಲಿ ರಂಜಾನ್ ಚಂದ್ರನನ್ನು ನೋಡಲಾಗಿದೆ" ಎಂದು ಜಮ್ಮು ಮತ್ತು ಕಾಶ್ಮೀರದ ಗ್ರಾಂಡ್ ಮುಫ್ತಿ ನಾಸಿರ್ ಉಲ್ ಇಸ್ಲಾಂ ಫಾರೂಕಿ ಅವರು ತಿಳಿಸಿದ್ದಾರೆ.

ದೇಶಾದ್ಯಂತ ಉಪವಾಸ ಆಚರಣೆಗೆ ಸಿದ್ಧತೆ ನಡೆದಿದೆ. ರಂಜಾನ್​ಗೂ ಮೊದಲು ಚಂದ್ರನ ದರ್ಶನವು ಇಸ್ಲಾಂನ ಸಾಂಪ್ರದಾಯಿಕ ನಂಬಿಕೆಯಾಗಿದೆ. ಏಕೆಂದರೆ ಇದು ಪವಿತ್ರ ತಿಂಗಳ ಆರಂಭವನ್ನು ನಿರ್ಧರಿಸುತ್ತದೆ. ರಂಜಾನ್ ಉಪವಾಸವು ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ ಒಂದಾಗಿದೆ. ಈ ವೇಳೆ ಅವರು ಸೂರ್ಯೋದಯದ ನಂತರ, ಸೂರ್ಯಾಸ್ತದ ಮೊದಲು ಆಹಾರವನ್ನು ಸೇವಿಸುವುದನ್ನು ತ್ಯಜಿಸುತ್ತಾರೆ.

ವಿಶ್ವದ ದಕ್ಷಿಣದ ರಾಷ್ಟ್ರಗಳಲ್ಲಿನ ಮುಸ್ಲಿಮರು 12 ಗಂಟೆಗಳ ಕಾಲ ಉಪವಾಸ ಮಾಡುತ್ತಾರೆ. ವಿಶ್ವದ ಉತ್ತರದ ರಾಷ್ಟ್ರಗಳಲ್ಲಿರುವವರು 17 ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ಉಪವಾಸ ಮಾಡುತ್ತಾರೆ. ಭಾರತದಲ್ಲೂ ಈ ಉಪವಾಸದ ಸಮಯ ಸುಮಾರು 13 ರಿಂದ 14 ಗಂಟೆ ಎಂಬುದು ತಿಳಿದು ಬಂದಿದೆ.

ಈ ತಿಂಗಳಲ್ಲಿ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ರಂಜಾನ್ ಸಮಯದಲ್ಲಿ ಪ್ರವಾದಿ ಮೊಹಮ್ಮದ್ ಅವರು ಬೋಧಿಸಿದ ಸಂಪ್ರದಾಯವನ್ನು ಅನುಸರಿಸಿ, ಆಚರಿಸುವವರು ಸಾಮಾನ್ಯವಾಗಿ ಡೇಟ್ಸ್​ ಮತ್ತು ನೀರಿನಿಂದ ತಮ್ಮ ಉಪವಾಸವನ್ನು ಮುಗಿಸುತ್ತಾರೆ. ನಂತರ ಅವರು ಇಫ್ತಾರ್ ಅಥವಾ ಸಂಜೆ ದೊಡ್ಡ ಊಟವನ್ನು ಸವಿಯುತ್ತಾರೆ. ದಿನವಿಡೀ ಉಪವಾಸದ ಸಮಯದಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲು ಅವರು ಮುಂಜಾನೆ ಊಟ ಅಥವಾ ಸುಹೂರ್ ಅನ್ನು ಸೇವಿಸುತ್ತಾರೆ.

ರಂಜಾನ್ ಇಸ್ಲಾಮಿಕ್ ಕ್ಯಾಲೆಂಡರ್​ನ ಒಂಬತ್ತನೇ ತಿಂಗಳು. ಈ ವೇಳೆ ಮುಸ್ಲಿಮರು ಸಂಘರ್ಷವನ್ನು ತಪ್ಪಿಸಲು ಪ್ರಯತ್ನಿಸುತ್ತಾರೆ ಮತ್ತು ಪವಿತ್ರ ತಿಂಗಳಲ್ಲಿ ದಾನ ಕಾರ್ಯಗಳ ಮೇಲೆ ಕೇಂದ್ರೀಕರಿಸುತ್ತಾರೆ. ಇಂದು ಸಂಜೆ ಜಮ್ಮು ಮತ್ತು ಕಾಶ್ಮೀರದ ವಿವಿಧ ಭಾಗಗಳಲ್ಲಿ ರಂಜಾನ್ ಅರ್ಧ ಚಂದ್ರಾಕೃತಿ ಕಾಣಿಸಿಕೊಂಡಿದೆ ಮತ್ತು ನಾಳೆ ಉಪವಾಸದ ಮೊದಲ ದಿನದೊಂದಿಗೆ ಪವಿತ್ರ ತಿಂಗಳು ಪ್ರಾರಂಭವಾಗುತ್ತದೆ.

ಉಪವಾಸದ ಮಹತ್ವ: ರಂಜಾನ್ ದಿನಾಂಕಗಳು ಪ್ರತಿವರ್ಷ ಬದಲಾಗುತ್ತವೆ. ಏಕೆಂದರೆ ಅವು ಚಂದ್ರನ ಕ್ಯಾಲೆಂಡರ್ ಅನ್ನು ಅವಲಂಬಿಸಿರುತ್ತದೆ. ರಂಜಾನ್ ಅರೇಬಿಕ್ ಪದವಾದ 'ಅರ್ - ರಾಮದ್' ನಿಂದ ಹುಟ್ಟಿಕೊಂಡಿದೆ. ಇದರರ್ಥ ಶಾಖವನ್ನು ಸುಡುವುದು. ಈ ಅವಧಿಯಲ್ಲಿಯೇ ಗೇಬ್ರಿಯಲ್ ದೇವತೆ ಕುರಾನ್‌ನ ಮಾತುಗಳನ್ನು ಮೊಹಮ್ಮದ್‌ಗೆ ಬಹಿರಂಗಪಡಿಸಿದೆ ಎಂದು ನಂಬಲಾಗಿದೆ. ಇದನ್ನು ನಂಬುವವರು ಉಪವಾಸ ಮಾಡುತ್ತಾರೆ. ಉಪವಾಸವನ್ನು ಮಾಡುವಾಗ ಮುಸ್ಲಿಂರು ಆಧ್ಯಾತ್ಮಿಕ ಶುದ್ಧೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಈ ಸಮಯದಲ್ಲಿ ಬಡವರಿಗೆ ದಾನವನ್ನು ಹೆಚ್ಚಾಗಿ ಮಾಡುತ್ತಾರೆ.

ಇದನ್ನೂ ಓದಿ : ರಂಜಾನ್ ಮಾಸ ಆರಂಭ: ಪ್ರಧಾನಿ ಮೋದಿ ಶುಭಾಶಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.