ETV Bharat / bharat

ಶ್ರೀರಾಮಲಲ್ಲಾನ ಮುಡಿಗೇರಲಿದೆ 11 ಕೋಟಿ ರೂ. ಮೌಲ್ಯದ ವಜ್ರಖಚಿತ ಕಿರೀಟ

ಸೂರತ್​ನ ವಜ್ರದ ವ್ಯಾಪಾರಿಯೊಬ್ಬರು 11 ಕೋಟಿ ರೂಪಾಯಿ ಮೌಲ್ಯದ ವಜ್ರ ಖಚಿತ ಕಿರೀಟವೊಂದನ್ನು ರಾಮ ಲಲ್ಲಾನಿಗೆ ಅರ್ಪಿಸಿದ್ದಾರೆ.

A crown worth Rs 11 crore made diamonds waiting to be decorated on Ramlala head Ayodhya

author img

By ETV Bharat Karnataka Team

Published : Jan 28, 2024, 6:35 PM IST

ಅಯೋಧ್ಯೆ: ರಾಮನಗರಿ ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮ ಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ನಂತರ ಪ್ರತಿದಿನ ಲಕ್ಷಾಂತರ ಭಕ್ತರು ಶ್ರೀರಾಮನ ದರ್ಶನಕ್ಕೆ ಅಯೋಧ್ಯೆಗೆ ಆಗಮಿಸುತ್ತಿದ್ದಾರೆ. ಈ ಮಧ್ಯೆ ದೇಶ-ವಿದೇಶಗಳಿಂದ ಸಾವಿರಾರು ರಾಮ ಭಕ್ತರು ರಾಮ ಲಲ್ಲಾನಿಗೆ ಅನೇಕ ವಿಶೇಷ ಮತ್ತು ಅಮೂಲ್ಯ ಉಡುಗೊರೆಗಳನ್ನು ಕಳುಹಿಸಿದ್ದಾರೆ. ಇವುಗಳಲ್ಲಿ 11 ಕೋಟಿ ರೂಪಾಯಿ ಮೌಲ್ಯದ ವಜ್ರಗಳಿಂದ ಮಾಡಿದ ಕಿರೀಟವೂ ಸೇರಿದೆ. ಇದು ರಾಮ ಲಲ್ಲಾನ ಮುಡಿಗೇರಲು ಕಾಯುತ್ತಿದೆ. ಬಂದಿರುವ ಅಮೂಲ್ಯ ಉಡುಗೊರೆಗಳು ಎಷ್ಟಿವೆಯೆಂದರೆ ಅವನ್ನು ರಾಮ ಲಲ್ಲಾನಿಗೆ ಮುಡಿಸಲು ಮತ್ತು ಅಲಂಕರಿಸಲು ಪುರೋಹಿತರಿಗೆ ಸಮಯ ಸಾಕಾಗುತ್ತಿಲ್ಲ.

ಸೂರತ್​ನ ವಜ್ರದ ವ್ಯಾಪಾರಿ ನೀಡಿದ ವಿಶೇಷ ಉಡುಗೊರೆ: ರಾಮ ಲಲ್ಲಾ ಪ್ರತಿಷ್ಠಾಪನೆಗೂ ಮೊದಲಿನಿಂದಲೇ ಸಾವಿರಾರು ಉಡುಗೊರೆಗಳು ಹರಿದು ಬರುತ್ತಿದ್ದು, ಈಗಲೂ ಇದು ಮುಂದುವರೆದಿದೆ. ರಾಮ ಲಲ್ಲಾನಿಗಾಗಿ ಬಂದಿರುವ ವಿಶೇಷ ಬಟ್ಟೆಗಳು ಮತ್ತು ಆಭರಣಗಳ ರಾಶಿಯೇ ಸಂಗ್ರಹವಾಗಿದೆ. ಇವೆಲ್ಲವನ್ನೂ ಒಂದೇ ಬಾರಿಗೆ ದೇವರಿಗೆ ಅರ್ಪಿಸಲು ಸಾಧ್ಯವಿಲ್ಲ.

ಏತನ್ಮಧ್ಯೆ ಸೂರತ್​ನ ವಜ್ರದ ವ್ಯಾಪಾರಿ ಮತ್ತು ಗ್ರೀನ್ ಲ್ಯಾಬ್ ಡೈಮಂಡ್ ಕಂಪನಿಯ ಮಾಲೀಕ ಮುಖೇಶ್ ಪಟೇಲ್ ಅವರು ರಾಮ ಲಲ್ಲಾಗೆ ವಜ್ರ, ಚಿನ್ನ ಮತ್ತು ಬೆಳ್ಳಿ ಲೇಪಿತ ಕಿರೀಟವೊಂದನ್ನು ಮಾಡಿಸಿ ತಂದಿದ್ದು, ಅದನ್ನು ದೇವಾಲಯದ ಟ್ರಸ್ಟಿಗಳಿಗೆ ಹಸ್ತಾಂತರಿಸಿದ್ದಾರೆ. 6 ಕೆಜಿ ತೂಕದ ಈ ಕಿರೀಟದಲ್ಲಿ ನಾಲ್ಕೂವರೆ ಕೆಜಿ ಚಿನ್ನ ಬಳಸಲಾಗಿದೆ. ಸಣ್ಣ ಮತ್ತು ದೊಡ್ಡ ಗಾತ್ರದ ವಜ್ರಗಳು, ಮಾಣಿಕ್ಯ, ಮುತ್ತು, ನೀಲಮಣಿ ರತ್ನದ ಕಲ್ಲುಗಳನ್ನು ಸಹ ಈ ಕಿರೀಟದಲ್ಲಿ ಅಳವಡಿಸಲಾಗಿದೆ. ಕಿರೀಟವನ್ನು ಈಗಾಗಲೇ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ನೀಡಲಾಗಿದೆ. ಭಗವಾನ್ ಶ್ರೀ ರಾಮನ ತಲೆಯ ಮೇಲೆ ಈಗಾಗಲೇ ಬಹಳ ಸುಂದರ ಮತ್ತು ಅಮೂಲ್ಯವಾದ ಕಿರೀಟವಿದೆ. ಹೀಗಾಗಿ ಈ 11 ಕೋಟಿ ಮೌಲ್ಯದ ಕಿರೀಟ ರಾಮ ಲಲ್ಲಾನ ಮುಡಿಗೇರಲು ಇನ್ನೂ ಕಾಯುತ್ತಿದೆ.

ಪ್ರತಿದಿನ ಲಕ್ಷಾಂತರ ಭಕ್ತರ ಆಗಮನ: ಪ್ರತಿದಿನ ದರ್ಶನಕ್ಕಾಗಿ ಬರುವ ಭಕ್ತರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ರಾಮ ಲಲ್ಲಾಗೆ ಉಡುಗೊರೆಗಳನ್ನು ಸಮರ್ಪಿಸುತ್ತಿದ್ದಾರೆ. ಅಯೋಧ್ಯೆಗೆ ಸಂಪರ್ಕಿಸುವ ಎಲ್ಲಾ ಮಾರ್ಗಗಳಲ್ಲಿ ನಾಲ್ಕು ಚಕ್ರದ ವಾಹನಗಳ ಸಂಚಾರವನ್ನು ಇನ್ನೂ ನಿಷೇಧಿಸಲಾಗಿದೆ. ರೈಲು ಹಳಿಗಳು ದ್ವಿಪದೀಕರಣದ ಕಾರಣದಿಂದ ನಿಯಮಿತವಾಗಿ ರೈಲು ಸಂಚಾರ ಇನ್ನೂ ಆರಂಭವಾಗಿಲ್ಲ. ಇದರ ಹೊರತಾಗಿಯೂ ಅತ್ಯಧಿಕ ಸಂಖ್ಯೆಯ ಭಕ್ತರು ವಾಯು ಸಾರಿಗೆ ಮತ್ತು ಬಸ್​ಗಳ ಮೂಲಕ ಅಯೋಧ್ಯೆಯನ್ನು ತಲುಪುತ್ತಿದ್ದಾರೆ.

ಇದನ್ನೂ ಓದಿ : ಶ್ರೀರಾಮನ ಆಡಳಿತ ಸಂವಿಧಾನ ರಚನೆಗೆ ಸ್ಫೂರ್ತಿಯಾಗಿತ್ತು: ಮನ್ ಕಿ ಬಾತ್​ನಲ್ಲಿ ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.