ETV Bharat / bharat

ಕೊಳವೆ ಬಾವಿಗೆ ಬಿದ್ದ ಮಹಿಳೆ: ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಕೊಳವೆ ಬಾವಿಗೆ ಮಹಿಳೆಯೊಬ್ಬರು ಬಿದ್ದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ರಕ್ಷಣಾ ತಂಡಗಳಿಂದ ಕಾರ್ಯಾಚರಣೆ ಮುಂದುವರಿದಿದೆ.

ಕೊಳವೆ ಬಾವಿ ಬಿದ್ದ ಮಹಿಳೆ
ಕೊಳವೆ ಬಾವಿ ಬಿದ್ದ ಮಹಿಳೆ
author img

By ETV Bharat Karnataka Team

Published : Feb 8, 2024, 11:28 AM IST

ಗಂಗಾಪುರ (ರಾಜಸ್ಥಾನ) : ಗಂಗಾಪುರ ನಗರ ಜಿಲ್ಲೆಯ ರಾಮನಗರ ಧೋಸಿ ಗ್ರಾಮದಲ್ಲಿ ಮಹಿಳೆಯೊಬ್ಬರು ಬುಧವಾರ ಕೊಳವೆ ಬಾವಿಯೊಳಗೆ ಸಿಲುಕಿಕೊಂಡಿದ್ದಾರೆ. ಬಾವಿಗೆ ಬಿದ್ದ ಮಹಿಳೆಯನ್ನು ಗ್ರಾಮದ ಸುರೇಶ ಬೈರವೋ ಎಂಬವರ ಪತ್ನಿ ಮೋನಿಕಾ (24) ಎಂದು ಗುರುತಿಸಲಾಗಿದೆ. ಜಿಲ್ಲಾಧಿಕಾರಿ ಡಾ.ಗೌರವ್ ಸೈನಿ ಆದೇಶದ ಮೇರೆಗೆ ಎನ್‌ಡಿಆರ್‌ಎಫ್​ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಮಹಿಳೆಯ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿವೆ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಗೌರವ್ ಸೈನಿ, ಉಪ ಪೊಲೀಸ್ ವರಿಷ್ಠಾಧಿಕಾರಿ ಸಂತ್ರಾಂ ಸೇರಿದಂತೆ ಅಧಿಕಾರಿಗಳು ಆಗಮಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಬುಧವಾರ ತಡರಾತ್ರಿಯವರೆಗೂ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಮಹಿಳೆಯನ್ನು ರಕ್ಷಿಸಿಸಲು ಸಾಧ್ಯವಾಗದ ಕಾರಣ ಗುರುವಾರ ಮತ್ತೆ ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳೊಂದಿಗೆ ತಜ್ಞರ ತಂಡ ಕೂಡ ಅತ್ಯುತ್ತಮ ತಂತ್ರಜ್ಞಾನವನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸುತ್ತಿದೆ. ಕೊಳವೆ ಬಾವಿಯೊಳಗೆ ಆಮ್ಲಜನಕವನ್ನು ಸರಬರಾಜು ಮಾಡಲಾಗುತ್ತಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು? : ಈ ಘಟನೆ ಬಗ್ಗೆ ಜಿಲ್ಲಾಧಿಕಾರಿಗಳು ಮಾತನಾಡಿದ್ದಾರೆ. ಗುಡ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಗರ ಧೋಸಿ ಎಂಬಲ್ಲಿ ಮೋನಿಕಾ(24) ಎಂಬುವರು ಬುಧವಾರ ಮಧ್ಯಾಹ್ನ ವೇಳೆ ಕಾಣಿಯಾಗಿದ್ದರು. ಬೋರ್​ವೆಲ್​ ಬಳಿ ಮಹಿಳೆಯ ಚಪ್ಪಲಿ ಪತ್ತೆಯಾಗಿರುವುದರಿಂದ ಕೊಳವೆ ಬಾವಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿತ್ತು. ಕೊಳವೆ ಬಾವಿ ಸುಮಾರು 95 ರಿಂದ 100 ಅಡಿ ಆಳ ಹೊಂದಿದೆ ಎಂದು ಅಂದಾಜಿಸಲಾಗಿದೆ. ಮಹಿಳೆಯನ್ನು ರಕ್ಷಿಸಲು ಜಿಲ್ಲಾಡಳಿತದಿಂದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಗೌರವ ಸೈನಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಎನ್‌ಡಿಆರ್‌ಎಫ್ ವಿಭಾಗೀಯ ಭರತ್‌ಪುರ ಮತ್ತು ಎಸ್‌ಡಿಆರ್‌ಎಫ್ ಪ್ರಧಾನ ಕಚೇರಿ ಜೈಪುರದ ರಕ್ಷಣಾ ತಂಡಗಳು ಕೂಡ ಈಗಾಗಲೇ ಘಟನಾ ಸ್ಥಳಕ್ಕೆ ತಲುಪಿವೆ. ಜಿಲ್ಲಾಧಿಕಾರಿಗಳು ಮೊದಲನೇ ಹಂತದಲ್ಲಿ ಬಿಸಿಎಂಒ ಡಾ. ನಂದಕಿಶೋರ್ ಮೀನಾ ಮತ್ತು ಅವರ ವೈದ್ಯಕೀಯ ತಂಡವನ್ನು ಸ್ಥಳದಲ್ಲಿ ನಿಯೋಜಿಸುವ ಮೂಲಕ ಬೋರ್‌ವೆಲ್‌ಯೊಳಗೆ ಆಮ್ಲಜನಕದ ಕಳುಹಿಸುವ ಸಕಲ ವ್ಯವಸ್ಥೆಯನ್ನೂ ಮಾಡಿದ್ದಾರೆ. ಪೊಲೀಸ್ ಉಪಾಧೀಕ್ಷಕ ಸಂತ್ರಮ್ ಮೀನಾ ನೇತೃತ್ವದಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಸದ್ಯ ಜಿಲ್ಲಾಧಿಕಾರಿ ಡಾ.ಗೌರವ್ ಸೈನಿ, ಹೆಚ್ಚುವರಿ ಜಿಲ್ಲಾಧಿಕಾರಿ ಹರಿರಾಮ್ ಮೀನಾ, ಜಿಲ್ಲಾಡಳಿತದ ಉನ್ನತ ಅಧಿಕಾರಿಗಳು ಹಾಗೂ ರಕ್ಷಣಾ ತಂಡಗಳ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಮಹಿಳೆಯನ್ನು ಜೀವಂತವಾಗಿ ಮೇಲಕ್ಕೆ ತರಲು ಎಲ್ಲ ಪ್ರಯತ್ನಗಳನ್ನು ಜಿಲ್ಲಾಡಳಿತ ಮಾಡುತ್ತಿದೆ.

ಇದನ್ನೂ ಓದಿ :ಆಟವಾಡುವ ವೇಳೆ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗುವಿನ ರಕ್ಷಣೆ - ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.