ETV Bharat / bharat

4 ರಾಜ್ಯಗಳ ಜಿಲ್ಲೆ ಸೇರಿಸಿ 'ಭಿಲ್ ಪ್ರದೇಶ' ಹೊಸ ರಾಜ್ಯಕ್ಕೆ ಒತ್ತಾಯ: ರಾಜಸ್ಥಾನ ಬುಡಕಟ್ಟು ಸಮುದಾಯದ ಆಂದೋಲನ - new state demand

4 ರಾಜ್ಯಗಳ ಜಿಲ್ಲೆಗಳನ್ನು ಹೊಸ ರಾಜ್ಯ ಸ್ಥಾಪಿಸುವಂತೆ ರಾಜಸ್ಥಾನದ ಬುಡಕಟ್ಟು ಸಮುದಾಯ ಬೇಡಿಕೆ ಇಟ್ಟಿದೆ.

author img

By ETV Bharat Karnataka Team

Published : Jul 18, 2024, 4:37 PM IST

ಭಿಲ್ ಪ್ರದೇಶ ರಾಜ್ಯಕ್ಕಾಗಿ ಒತ್ತಾಯಿಸಿ ಬುಡಕಟ್ಟು ಜನರ ಸಭೆ
ಭಿಲ್ ಪ್ರದೇಶ ರಾಜ್ಯಕ್ಕಾಗಿ ಒತ್ತಾಯಿಸಿ ಬುಡಕಟ್ಟು ಜನರ ಸಭೆ (IANS)

ಜೈಪುರ : ರಾಜಸ್ಥಾನ ಸೇರಿದಂತೆ 4 ರಾಜ್ಯಗಳ ಜಿಲ್ಲೆಗಳನ್ನು ಸೇರಿಸಿ ಹೊಸ ರಾಜ್ಯ ರಚನೆಯ ಬೇಡಿಕೆಗಾಗಿ ಇಂದು ರಾಜಸ್ಥಾನದ ಬುಡಕಟ್ಟು ಸಮುದಾಯ ಸಭೆ ಕರೆದಿದೆ. 'ಭಿಲ್ ಪ್ರದೇಶ' ಹೆಸರಿನ ಹೊಸ ರಾಜ್ಯ ರಚನೆಗೆ ಬುಡಕಟ್ಟು ಸಮುದಾಯ ಒತ್ತಾಯಿಸಿದೆ. ಆದರೆ, ಈ ಬೇಡಿಕೆಯನ್ನು ರಾಜ್ಯ ಸರ್ಕಾರ ಈಗಾಗಲೇ ತಿರಸ್ಕರಿಸಿದೆ.

ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್ ಮತ್ತು ಮಧ್ಯಪ್ರದೇಶದ 49 ಜಿಲ್ಲೆಗಳನ್ನು ಒಟ್ಟುಗೂಡಿಸಿ ಹೊಸ ರಾಜ್ಯವನ್ನು ರಚಿಸಬೇಕು ಎಂದು ಬುಡಕಟ್ಟು ಸಮಾಜ ಒತ್ತಾಯಿಸಿದೆ. ರಾಜಸ್ಥಾನದ ಹಳೆಯ 33 ಜಿಲ್ಲೆಗಳ ಪೈಕಿ 12 ಜಿಲ್ಲೆಗಳನ್ನು ಹೊಸ ರಾಜ್ಯಕ್ಕೆ ಸೇರಿಸಬೇಕು ಎಂಬ ಬೇಡಿಕೆಯನ್ನು ಮುಂದಿಡಲಾಗಿದೆ.

ಬನ್ಸ್​ವಾರಾದ ಮಂಗರ್ ಧಾಮ್​ನಲ್ಲಿ ನಡೆಯಲಿರುವ ಸಭೆಯಲ್ಲಿ ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರದ ಸಾವಿರಾರು ಬುಡಕಟ್ಟು ಜನರು ಭಾಗವಹಿಸಲಿದ್ದಾರೆ ಎಂದು ಬುಡಕಟ್ಟು ಮುಖಂಡರೊಬ್ಬರು ತಿಳಿಸಿದ್ದಾರೆ. ಸಭೆಗೂ ಮುನ್ನ ಮಂಗರ್​ ಧಾಮ್ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್​ ಏರ್ಪಡಿಸಲಾಗಿದ್ದು, ಈ ಪ್ರದೇಶದಲ್ಲಿ ಇಂಟರ್ ನೆಟ್ ಅನ್ನು ಸಹ ಕಡಿತಗೊಳಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಬುಡಕಟ್ಟು ಪ್ರಾದೇಶಿಕ ಅಭಿವೃದ್ಧಿ ಸಚಿವ ಬಾಬುಲಾಲ್ ಖರಾಡಿ, ಜಾತಿಯ ಆಧಾರದ ಮೇಲೆ ರಾಜ್ಯ ರಚಿಸಲು ಸಾಧ್ಯವಿಲ್ಲ ಎಂದು ಹೇಳಿದರು. "ಜಾತಿಯ ಆಧಾರದ ಮೇಲೆ ರಾಜ್ಯ ರಚಿಸಿದರೆ ಇತರ ಜನ ಸಹ ಇಂಥದೇ ಬೇಡಿಕೆಗಳನ್ನು ಇಡುತ್ತಾರೆ. ಈ ವಿಷಯದಲ್ಲಿ ನಾವು ಕೇಂದ್ರಕ್ಕೆ ಪ್ರಸ್ತಾವನೆಯನ್ನು ಕಳುಹಿಸುತ್ತಿಲ್ಲ. ಧರ್ಮ ಬದಲಿಸಿಕೊಂಡವರು ಬುಡಕಟ್ಟು ಮೀಸಲಾತಿ ಪ್ರಯೋಜನವನ್ನು ಪಡೆಯಬಾರದು" ಎಂದು ಅವರು ತಿಳಿಸಿದರು.

ಆದಾಗ್ಯೂ, ಹೊಸ ಬುಡಕಟ್ಟು ಪಕ್ಷವಾದ ಬಿಎಪಿ ಪ್ರತ್ಯೇಕ ಬುಡಕಟ್ಟು ರಾಜ್ಯಕ್ಕಾಗಿ ತನ್ನ ಆಂದೋಲನವನ್ನು ತೀವ್ರಗೊಳಿಸಿದೆ. ಇತರ ಜಿಲ್ಲೆಗಳು ಮತ್ತು ರಾಜ್ಯಗಳಿಂದ ಬುಡಕಟ್ಟು ಜನರನ್ನು ಸಭೆಗೆ ಕರೆದೊಯ್ಯುವ ಮೂಲಕ ಸಂಘಟನೆ ಬಲಪಡಿಸಲು ಅದು ಯತ್ನಿಸುತ್ತಿದೆ.

ಈ ಬಗ್ಗೆ ಮಾತನಾಡಿದ ಬಿಎಪಿ ಪಕ್ಷದಿಂದ ಬನ್ಸ್​ವಾರಾ ಸಂಸದರಾಗಿರುವ ರಾಜಕುಮಾರ್ ರೋಟ್​, 'ಭಿಲ್ ಪ್ರದೇಶ'ದ ಬೇಡಿಕೆ ಹೊಸದಲ್ಲ ಮತ್ತು ಬಿಎಪಿ ಈ ಬೇಡಿಕೆಯನ್ನು ಬಹು ಹಿಂದಿನಿಂದಲೂ ಪ್ರತಿಪಾದಿಸಿಕೊಂಡು ಎಂದು ಹೇಳಿದರು. ಪ್ರತ್ಯೇಕ ರಾಜ್ಯ ಬೇಡಿಕೆಯ ಆಂದೋಲನವನ್ನು ದೇಶಾದ್ಯಂತ ಭಿಲ್ ಸಮುದಾಯದ 35 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲಿಸಿವೆ ಎಂದು ಅವರು ಹೇಳಿದರು. ಭಿಲ್ ಪ್ರದೇಶದ ಬನ್ಸ್​ವಾರಾ, ಡುಂಗರಪುರ, ಬಾರ್ಮರ್, ಜಲೋರ್, ಸಿರೋಹಿ, ಉದಯಪುರ, ಝಾಲಾವರ್, ರಾಜ್ ಸಮಂದ್, ಚಿತ್ತೋರ್ ಗಢ, ಕೋಟಾ, ಬರಾನ್, ಪಾಲಿಯನ್ನು ಹೊಸ ರಾಜ್ಯಕ್ಕೆ ಸೇರಿಸಬೇಕೆಂದು ಬುಡಕಟ್ಟು ಜನರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : 'ಸರ್ಕಾರಕ್ಕಿಂತ ಪಕ್ಷ ದೊಡ್ಡದು': ಯುಪಿ ಬಿಜೆಪಿಯಲ್ಲಿ ಭುಗಿಲೆದ್ದ ಬೇಗುದಿ, ಮೋದಿಗೆ ದೂರು - UP BJP Rift

ETV Bharat Logo

Copyright © 2024 Ushodaya Enterprises Pvt. Ltd., All Rights Reserved.