ಭಿಲ್ವಾರ (ರಾಜಸ್ಥಾನ): ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನದ ವೇಳೆ ಭಿಲ್ವಾರಾ ನಗರದ ಮತಗಟ್ಟೆಯೊಂದರಲ್ಲಿ ಮತದಾನ ಮಾಡಿದ ನಂತರ 80 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಪೊಲೀಸರು ವೃದ್ಧನ ಮೃತದೇಹವನ್ನು ಶವಾಗಾರದಲ್ಲಿ ಇರಿಸಿದ್ದಾರೆ. ವಯೋವೃದ್ಧನ ಸಾವಿಗೆ ಕಾರಣಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಿಳಿದುಬಂದಿಲ್ಲ.
ಬಿಜೆಪಿ ಮುಖಂಡ ಚೇತನ್ ಮಾತನಾಡಿ, ಪಟ್ಟಣದ ನಿವಾಸಿ 80 ವರ್ಷದ ಛಗನ್ ಬಗೇಲಾ ಅವರು ಭಿಲ್ವಾರಾ ನಗರದ ಬಳಿ ಇರುವ ಪುರ್ ಪಟ್ಟಣದ ಉಪನಗರವಾದ ಚಿಪಾದ ನೊಹ್ರಾ ಮತಗಟ್ಟೆ ಸಂಖ್ಯೆ 7 ಅನ್ನು ತಲುಪಿದ್ದರು. ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಬಳಿಕ ಮತಗಟ್ಟೆ ಆವರಣದಲ್ಲಿ ಏಕಾಏಕಿ ಕೆಳಗೆ ಬಿದ್ದರು ಎಂದು ಮಾಹಿತಿ ನೀಡಿದರು.
ಮತಗಟ್ಟೆಯಲ್ಲಿದ್ದ ಸಿಬ್ಬಂದಿ ವೃದ್ಧನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಿ ಆತನ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು. ಪೊಲೀಸರು ವೃದ್ಧನ ಪಾರ್ಥಿವ ಶರೀರವನ್ನು ವಶಕ್ಕೆ ಪಡೆದು ಶವಾಗಾರದಲ್ಲಿರಿಸಿದ್ದಾರೆ. ವೃದ್ಧ ಹೇಗೆ ಮತ್ತು ಯಾವ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ ಎಂದು ಬಿಜೆಪಿ ನಾಯಕ ಮಾಹಿತಿ ನೀಡಿದರು.
ಓದಿ: ಬೆಂಗಳೂರು: ಮತಗಟ್ಟೆ ಬಳಿ ಮಹಿಳೆಗೆ ಹೃದಯ ಸ್ತಂಭನ, ಮತದಾನಕ್ಕೆ ಬಂದ ವೈದ್ಯ ಉಳಿಸಿದ್ರು ಪ್ರಾಣ - CARDIAC ARREST