ಕರೌಲಿ (ರಾಜಸ್ಥಾನ) : ಕರೌಲಿ - ಮಂಡ್ರಾಯಲ್ ರಸ್ತೆಯಲ್ಲಿ ಬೊಲೆರೋ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದು, 4 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಕರೌಲಿ ಮತ್ತು ಮಧ್ಯಪ್ರದೇಶದ ಮಂಡ್ರಾಯಲ್ ಪ್ರದೇಶದ ನಿವಾಸಿಗಳು ಎಂಬುದಾಗಿ ತಿಳಿದು ಬಂದಿದೆ.
ಅಪಘಾತದ ಬಗ್ಗೆ ಮಾಹಿತಿ ಪಡೆದ ಕರೌಲಿ ಜಿಲ್ಲಾಧಿಕಾರಿ ನೀಲಭ್ ಸಕ್ಸೇನಾ, ಎಸ್ಪಿ ಬ್ರಿಜೇಶ್ ಜ್ಯೋತಿ ಉಪಾಧ್ಯಾಯ, ಹೆಚ್ಚುವರಿ ಜಿಲ್ಲಾಧಿಕಾರಿ ರಾಜವೀರ್ ಸಿಂಗ್ ಚೌಧರಿ, ಕರೌಲಿ ಕೊತ್ವಾಲಿ ಪೊಲೀಸ್ ಠಾಣಾಧಿಕಾರಿ ಸುನಿಲ್ ಸಿಂಗ್ ಮತ್ತು ವೈದ್ಯಕೀಯ ಇಲಾಖೆ ಮತ್ತು ಆಡಳಿತದ ಉನ್ನತ ಅಧಿಕಾರಿಗಳು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಮೃತರ ಶವಗಳನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮಾಹಿತಿ ಪ್ರಕಾರ ಅಪಘಾತದಲ್ಲಿ ಗಾಯಗೊಂಡಿರುವ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಬೊಲೆರೋ ಸವಾರರೆಲ್ಲರೂ ಕೈಲಾದೇವಿ ಮಾತೆಯ ದರ್ಶನಕ್ಕೆ ಹೋಗುತ್ತಿದ್ದರು ಎಂಬುದು ತಿಳಿದು ಬಂದಿದೆ.