ETV Bharat / bharat

ದಟ್ಟ ಮಂಜಿನಲ್ಲಿ ರೈಲುಗಳ ಸುಗಮ ಸಂಚಾರಕ್ಕೆ ಸುರಕ್ಷತಾ ಕ್ರಮ ಕೈಗೊಂಡ ರೈಲ್ವೆ ಇಲಾಖೆ - SAFE TRAIN OPERATIONS IN WINTERA

ಪ್ರತಿ ವರ್ಷ ಮಂಜಿನಿಂದಾಗಿ ರೈಲುಗಳ ಕಾರ್ಯಾಚರಣೆ ನಿಗದಿತ ಸಮಯಕ್ಕಿಂತ ಅನೇಕ ಗಂಟೆಗಳ ಕಾಲ ವಿಳಂಬವಾಗುತ್ತಿದೆ. ವಿಶೇಷವಾಗಿ ಉತ್ತರ ಭಾರತದಲ್ಲಿ ಈ ಸಮಸ್ಯೆ ಹೆಚ್ಚು. ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

railways are implementing safety measures to ensure safe train operations in Winter
ಸಾಂದರ್ಭಿಕ ಚಿತ್ರ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Nov 11, 2024, 4:58 PM IST

ನವದೆಹಲಿ: ಚಳಿಗಾಲದಲ್ಲಿ ದಟ್ಟ ಮಂಜಿನಿಂದಾಗಿ ರೈಲುಗಳ ಪ್ರಯಾಣದಲ್ಲಿ ಭಾರಿ ವ್ಯತ್ಯಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಹೊಸ ಮುನ್ನೆಚ್ಚರಿಕೆಯೊಂದಿಗೆ ಸುರಕ್ಷತಾ ಕ್ರಮವನ್ನು ರೈಲ್ವೆ ಇಲಾಖೆ ಅಳವಡಿಸಿಕೊಂಡಿದೆ. ಕಳಪೆ ಗೋಚರತೆ ನಿವಾರಣೆ ಮತ್ತು ನಿಲ್ದಾಣಗಳ ಬಗ್ಗೆ ಮಾಹಿತಿ ಒದಗಿಸಲು ವಿಸಿಬಿಲಿಟಿ ಟೆಸ್ಟ್ ಆಬ್ಜೆಕ್ಟ್ (ವಿಟಿಒ) ಬಳಸಲು ಸ್ಟೇಷನ್ ಮಾಸ್ಟರ್‌ಗಳಿಗೆ ಸೂಚಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಇಲಾಖೆ ಕ್ರಮ ಕೈಗೊಂಡಿರುವ ಸುರಕ್ಷಿತಾ ಕ್ರಮದ ಕುರಿತು ಮಾತನಾಡಿರುವ ವಾಯುವ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಕ್ಯಾ ಶಶಿ ಕಿರಣ್​, ಕಳಪೆ ಗೋಚರತೆಯ ಸಂದರ್ಭದಲ್ಲಿ ರೈಲು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರೈಲುಗಳ ವೇಗವನ್ನು ಗಂಟೆಗೆ 60 ರಿಂದ 75 ಕಿಲೋಮೀಟರ್‌ಗಳ ನಡುವೆ ನಿರ್ವಹಿಸುಂತೆ ಲೋಕೋ ಪೈಲಟ್‌ಗಳಿಗೆ ಸೂಚನೆ ನೀಡಲಾಗಿದೆ. ಲೋಕೋ ಪೈಲೆಟ್​ಗಳಿಗೆ ಸಿಗ್ನಲ್ ಮಾಹಿತಿ ಫಲಕಗಳನ್ನು ಕಾಣುವಂತೆ ಮಾಡಲು ದುರಸ್ತಿಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ ಇವು ಪ್ರಕಾಶಮಾನವಾಗಿ ಕಾಣುವಂತಹ ಪಟ್ಟಿಗಳನ್ನು ಅಳವಡಿಸಲಾಗುತ್ತಿದೆ.

ಪ್ರತಿ ವರ್ಷ ಮಂಜಿನಿಂದಾಗಿ ರೈಲುಗಳ ಕಾರ್ಯಾಚರಣೆ ನಿಗದಿತ ಸಮಯಕ್ಕಿಂತ ಅನೇಕ ಗಂಟೆಗಳ ಕಾಲ ವಿಳಂಬವಾಗುತ್ತದೆ. ವಿಶೇಷವಾಗಿ ಉತ್ತರ ಭಾರತದಲ್ಲಿ ಈ ಸಮಸ್ಯೆ ಹೆಚ್ಚು. ಈ ಸುರಕ್ಷತಾ ಕ್ರಮದ ಹೊರತಾಗಿ ಟ್ರಾಕ್​ಮ್ಯಾನ್​ಗಳು ಸಿಗ್ನಲ್​ ಕುರಿತು ಎಚ್ಚರಿಕೆ ನೀಡಲು ಪಟಾಕಿಗಳನ್ನು ಬಳಕೆ ಮಾಡುವಂತೆ ಕೂಡ ಸೂಚಿಸಲಾಗಿದೆ. ಈ ಉದ್ದೇಶಕ್ಕಾಗಿ ಉತ್ತಮ ಗುಣಮಟ್ಟದ ಪಟಾಕಿಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.

ರೈಲ್ವೆ ಅಧಿಕಾರಿಗಳ ಪ್ರಕಾರ, ಕಡಿಮೆ ಪ್ರಯಾಣಿಕರನ್ನು ಹೊಂದಿದ್ದಲ್ಲಿ ಅಥವಾ ಮಂಜಿನಿಂದ ವಿಳಂಬವಾಗುವ ರೈಲುಗಳ ಬಗ್ಗೆ ಮಾಹಿತಿ ಪಡೆಯುವುದು ಮತ್ತು ಪರಿಶೀಲನೆ ಮಾಡಲಾಗುತ್ತದೆ. ಈ ರೈಲುಗಳನ್ನು ನಿರ್ದಿಷ್ಟ ಅವಧಿವರೆಗೂ ರದ್ದುಗೊಳಿಸಿ, ಈ ರೈಲು ಕೋಚ್‌ಗಳು ಮತ್ತು ಸಿಬ್ಬಂದಿಯನ್ನು ಇತರ ಸ್ಥಳಗಳಲ್ಲಿ ನಿಯೋಜಿಸಬಹುದಾಗಿದೆ.

ಮಂಜು ಸುರಕ್ಷಿತ ಸಾಧನ ಅಳವಡಿಕೆ: ರೈಲ್ವೆ ಇಲಾಖೆ ಲೋಕೋ ಪೈಲಟ್​​ಗಳಿಗೆ ಇಂಜಿನ್​ ಬಳಕೆಗೆ ಮಂಜು ಸುರಕ್ಷಿತ ಸಾಧನವನ್ನು ಒದಗಿಸಲಿದೆ. ಇವು ಮಂಜಿನ ದಿನಗಳಲ್ಲಿ ರೈಲು ಮಾರ್ಗಸೂಚಿಗೆ ಸಹಾಯ ಮಾಡಲಿದೆ. ಭಾರತೀಯ ರೈಲ್ವೆ ಈಗಾಗಲೇ ಸುಗಮ ಕಾರ್ಯಾಚರಣೆಗಾಗಿ 19,742 ಸಾಧನಗಳನ್ನು ಹೊಂದಿದೆ. ಇದು ರೈಲು ಸೇವೆಯ ಸುಧಾರಣೆಯಲ್ಲಿ ನಿರ್ಣಾಯಕ ಹೆಜ್ಜೆಯಾಗಿದ್ದು, ವಿಳಂಬವನ್ನು ತಪ್ಪಿಸಿ ಪ್ರಯಾಣಿಕರ ಸುರಕ್ಷತೆ ಕಾಪಾಡಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಪ್ರಯಾಣಿಕರ ಅನುಭವ: ಕಳೆದ ಕೆಲವು ವರ್ಷಗಳಲ್ಲಿ ಚಳಿಗಾಲದಲ್ಲಿ ದೇಶದ ಅನೇಕ ಪ್ರದೇಶದಲ್ಲಿ ದಟ್ಟ ಮಂಜು ಕವಿಯುವುದು ಸಾಮಾನ್ಯವಾಗಿದೆ. ಇದರಿಂದ ರೈಲು ಪ್ರಯಾಣದ ಭಾರಿ ವಿಳಂಬವಾಗಿ 6 ರಿಂದ 10 ಗಂಟೆಗಳ ಕಾಲ ಪ್ರಯಾಣ ತಡವಾಗುವ ಸಾಧ್ಯತೆ ಇದೆ. ಹೀಗಾಗಿ ರೈಲ್ವೆ ಇಲಾಖೆ ಇದರ ನಿವಾರಣೆಗೆ ಮುಂದಾಗಿದೆ.

ಇದನ್ನೂ ಓದಿ: ಅಂಗವಿಕಲ ಮೊಮ್ಮಗಳ ಕೊಂದ ಅಜ್ಜಿಗೆ ಜೀವಾವಧಿ ಶಿಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.