ETV Bharat / bharat

ಹೈದರಾಬಾದ್‌: ಜಾತಿ ಗಣತಿ ಸಮೀಕ್ಷೆ ಸಭೆಯಲ್ಲಿ ಪಾಲ್ಗೊಳ್ಳಲಿರುವ ರಾಹುಲ್​ ಗಾಂಧಿ

ತೆಲಂಗಾಣ ಸರ್ಕಾರ ಜಾತಿ ಗಣತಿ ಸಮೀಕ್ಷೆಗೆ ಮುಂದಾಗಿದ್ದು, ಈ ಕುರಿತು ಇಂದು ಕಾಂಗ್ರೆಸ್​ ಮಹತ್ವದ ಸಭೆ ಆಯೋಜಿಸಿದೆ.

Rahul Gandhi will attend a meeting organised by the partys Telangana unit
ರಾಹುಲ್​ ಗಾಂಧಿ (ANI)
author img

By ETV Bharat Karnataka Team

Published : Nov 5, 2024, 11:13 AM IST

ಹೈದರಾಬಾದ್​: ಕಾಂಗ್ರೆಸ್​ ನಾಯಕ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್​ ಗಾಂಧಿ ಇಂದು ಹೈದರಾಬಾದ್​ಗೆ ಆಗಮಿಸುತ್ತಿದ್ದು, ತೆಲಂಗಾಣ ಸರ್ಕಾರದ ಜಾತಿ ಗಣತಿ ಸಮೀಕ್ಷೆಗೆ ಸಂಬಂಧಿಸಿದಂತೆ ಕಾಂಗ್ರೆಸ್​ ಪಕ್ಷ ಆಯೋಜಿಸಿರುವ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

ತೆಲಂಗಾಣ ಪ್ರದೇಶ ಕಾಂಗ್ರೆಸ್​ ಸಮಿತಿ ನೀಡಿದ ಮಾಹಿತಿ ಪ್ರಕಾರ, ರಾಹುಲ್​ ಗಾಂಧಿ ಉತ್ತರ ಪ್ರದೇಶದ ಫುರ್ಸತ್‌ಗುಂಜ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಸಂಜೆ 4.45ಕ್ಕೆ ಹೈದರಾಬಾದ್​ಗೆ ಆಗಮಿಸುವರು.

ಬೋವೆನಪಲ್ಲಿಯಲ್ಲಿರುವ ಗಾಂಧಿ ಸಿದ್ಧಾಂತ ಕೇಂದ್ರಕ್ಕೆ ತೆರಳಿ ಸಂಜೆ 6.30ರವರೆಗೆ ಜಾತಿ ಗಣತಿ ಕುರಿತು ರಾಜ್ಯ ಮಟ್ಟದ ಸಮಾಲೋಚನೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ದೆಹಲಿಗೆ ವಿಶೇಷ ವಿಮಾನದ ಮೂಲಕ ಪ್ರಯಾಣ ಬೆಳೆಸಲಿದ್ದಾರೆ.

ಜಾತಿ ಸಮೀಕ್ಷೆ ಕುರಿತು ಮಧ್ಯಸ್ಥಗಾರರಿಂದ ಸಲಹೆಗಳನ್ನು ಪಡೆಯಲು ಕಾಂಗ್ರೆಸ್​ ಪಕ್ಷದ ರಾಜ್ಯ ಘಟಕ ಈ ಸಭೆ ಆಯೋಜಿಸಿದೆ ಎಂದು ಟಿಪಿಸಿಸಿ ಅಧ್ಯಕ್ಷ ಬಿ.ಮಹೇಶ್​ ಕುಮಾರ್​ ಗೌಡ್​ ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಉದ್ಯೋಗ, ರಾಜಕೀಯ ಹಾಗೂ ಜಾತಿ ಸಮೀಕ್ಷೆಯನ್ನು ನಡೆಸಲು ನಿರ್ಧರಿಸಿದೆ. ವಿಧಾನಸಭಾ ಚುನಾವಣೆಗೂ ಮುನ್ನವೇ ರಾಹುಲ್ ಗಾಂಧಿ ಕೂಡ ಈ ಕುರಿತು ಭರವಸೆ ನೀಡಿದ್ದರು. ಬುಧವಾರದಿಂದ ಸಮೀಕ್ಷೆ ಆರಂಭವಾಗಲಿದೆ. (ಪಿಟಿಐ)

ಇದನ್ನೂ ಓದಿ: ಧರ್ಮದ ಹೆಸರಿನಲ್ಲಿ ಕೇರಳ ಐಎಎಸ್​​ ಅಧಿಕಾರಿಗಳಿರುವ ವಾಟ್ಸ್​​ಆ್ಯಪ್​ ಗ್ರೂಪ್​ ರಚನೆ: ವಿವಾದ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.