ತಾಪಿ(ಗುಜರಾತ್): ಮಣಿಪುರದಿಂದ ಮುಂಬೈವರೆಗಿನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆಯ ಗುಜರಾತ್ ಭಾಗ ಇಂದು ಮುಕ್ತಾಯವಾಯಿತು. ಇದರ ಪ್ರಯುಕ್ತ ಸೂರತ್ನಲ್ಲಿ ಸ್ವರಾಜ್ ಆಶ್ರಮಕ್ಕೆ ಭೇಟಿ ನೀಡಿದ ರಾಹುಲ್, ದೇಶದ ಮೊದಲ ಉಪಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಗೌರವ ನಮನ ಸಲ್ಲಿಸಿದರು.
ಗುಜರಾತ್‌ನಲ್ಲಿ ಕಳೆದ ನಾಲ್ಕು ದಿನಗಳ ಕಾಲ ಏಳು ಜಿಲ್ಲೆಗಳಲ್ಲಿ 400 ಕಿಲೋ ಮೀಟರ್‌ಗಳನ್ನು ಯಾತ್ರೆ ಸಂಚರಿಸಿದೆ. ಇಂದು ರಾಜ್ಯದಲ್ಲಿ ಮುಕ್ತಾಯವಾದ ನಂತರ ರಾಹುಲ್, ತಾಪಿ ಜಿಲ್ಲೆಯ ವ್ಯಾರಾದಿಂದ ನವದೆಹಲಿಗೆ ತೆರಳಿದರು. ಸೋಮವಾರ ಒಂದು ದಿನದ ವಿರಾಮ ಇರಲಿದೆ. ನಂತರ ಮಂಗಳವಾರ ಯಾತ್ರೆ ಮಹಾರಾಷ್ಟ್ರ ಪ್ರವೇಶಿಸಲಿದೆ. ಇಲ್ಲಿನ ನಂದೂರ್‌ಬಾರ್ ಜಿಲ್ಲೆಯಿಂದ ಯಾತ್ರೆ ಪುನಾರಂಭವಾಗಲಿದ್ದು, ಮುಂಬೈಗೆ ತಲುಪಿದ ನಂತರ ಯಾತ್ರೆ ಪೂರ್ಣಗೊಳ್ಳುತ್ತದೆ.
-
आज 'भारत जोड़ो न्याय यात्रा' के दौरान @RahulGandhi जी बारडोली स्थित स्वराज आश्रम पहुंचे।
— Congress (@INCIndia) March 10, 2024
यहां उन्होंने लौह पुरुष सरदार वल्लभभाई पटेल जी से जुड़ी स्मृतियों को याद कर उन्हें नमन किया।
देश की एकता और अखंडता के नायक सरदार वल्लभभाई पटेल जी हमेशा हमें प्रेरणा देते रहेंगे।
भारत… pic.twitter.com/NJa3MMl59F
''ಇಂದು ಸೂರತ್ ಜಿಲ್ಲೆಯ ಬಾರ್ಡೋಲಿಯಲ್ಲಿರುವ ಸ್ವರಾಜ್ ಆಶ್ರಮಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಗೌರವ ಸಲ್ಲಿಸಿದರು. 1922ರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಈ ಆಶ್ರಮ ಸ್ಥಾಪಿಸಿದ್ದರು. ದೆಹಲಿ-ಹರಿಯಾಣ ಗಡಿಯಲ್ಲಿ ಸೇರಿರುವ ದೇಶದ ರೈತರಿಗೆ ಆಗಿರುವ ಅನ್ಯಾಯವಾಗಿದೆ. ಇದರ ಮಧ್ಯೆ ಸ್ವರಾಜ್ ಆಶ್ರಮಕ್ಕೆ ಭೇಟಿ ಕೊಟ್ಟಿದ್ದು ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಸ್ಫೂರ್ತಿಯ ಕ್ಷಣವಾಗಿತ್ತು'' ಎಂದು ಪಕ್ಷದ ಹಿರಿಯ ನಾಯಕ ಜೈರಾಮ್ ರಮೇಶ್ ತಿಳಿಸಿದರು.
ಸ್ವರಾಜ್ ಆಶ್ರಮವನ್ನು ಸರ್ದಾರ್ ಪಟೇಲ್ ಅವರು ತಮ್ಮ ನಿವಾಸವಾಗಿ ನಿರ್ಮಿಸಿದ್ದರು. ಆಗಿನ ಬ್ರಿಟಿಷ್ ವಸಾಹತುಶಾಹಿ ಸರ್ಕಾರದಿಂದ ರೈತರ ಮೇಲೆ ಹೆಚ್ಚಿನ ತೆರಿಗೆಯ ವಿರುದ್ಧ ರೈತರ ಆಂದೋಲನ, ರಾಷ್ಟ್ರೀಯತಾವಾದಿ ಆಂದೋಲನವಾದ ಬಾರ್ಡೋಲಿ ಸತ್ಯಾಗ್ರಹಕ್ಕೆ ಇದು ಕೇಂದ್ರ ನೆಲೆಯಾಗಿತ್ತು. ಮಹಾತ್ಮಾ ಗಾಂಧಿ 1936 ಮತ್ತು 1941ರಲ್ಲಿ ಈ ಆಶ್ರಮದಲ್ಲಿ ಸ್ವಲ್ಪ ಸಮಯ ತಂಗಿದ್ದರು.
''ನಾವು ಆರ್‌ಎಸ್‌ಎಸ್ ಸಿದ್ಧಾಂತದ ವಿರುದ್ಧ ಹೋರಾಟ ನಡೆಸುತ್ತಿದ್ದು, ದೀರ್ಘಕಾಲದವರೆಗೆ ಮುಂದುವರಿಸುತ್ತೇವೆ. ಚುನಾವಣೆ ಎದುರಿಸುತ್ತೇವೆ. ಸೋಲು-ಗೆಲುವು ಇರುತ್ತದೆ. ಆದರೆ, ನಮ್ಮ ಸಿದ್ಧಾಂತವನ್ನು ಬಲಪಡಿಸಲು ಮತ್ತು ಅದನ್ನು ಸಾರ್ವಜನಿಕರ ಬಳಿಗೆ ಕೊಂಡೊಯ್ಯಲು ರಾಹುಲ್ ಗಾಂಧಿ ಕಾಂಗ್ರೆಸ್‌ಗೆ ಈ ಯಾತ್ರೆ ಮಾರ್ಗ ತೋರಿಸಿದ್ದಾರೆ. ನಾಳೆ ಯಾತ್ರೆಗೆ ವಿಶ್ರಾಂತಿಯ ದಿನ. ಮಾರ್ಚ್ 12ರಂದು ಮಧ್ಯಾಹ್ನ 2 ಗಂಟೆಗೆ ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯಲ್ಲಿ ಬುಡಕಟ್ಟು ಸಮ್ಮೇಳನವನ್ನು ಆಯೋಜಿಸಲಾಗಿದೆ. ಮಾರ್ಚ್ 13ರಂದು ರಾಹುಲ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಧುಲೆಯಲ್ಲಿ ಬುಡಕಟ್ಟು ಮಹಿಳೆಯರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಭೆಯಲ್ಲಿ 'ಮಹಿಳಾ ನ್ಯಾಯ' ಎಂಬ ಪಕ್ಷದ ಗ್ಯಾರಂಟಿಯನ್ನು ಘೋಷಿಸಲಿದ್ದಾರೆ'' ಎಂದು ಜೈರಾಮ್ ರಮೇಶ್ ಮಾಹಿತಿ ನೀಡಿದರು.
ಇದನ್ನೂ ಓದಿ: ಹಿಸಾರ್ ಸಂಸದ, ಮಾಜಿ ಐಎಎಸ್ ಅಧಿಕಾರಿ ಬ್ರಿಜೇಂದ್ರ ಸಿಂಗ್ ಬಿಜೆಪಿಗೆ ರಾಜೀನಾಮೆ; ಕಾಂಗ್ರೆಸ್ ಸೇರ್ಪಡೆ