ETV Bharat / bharat

ಕಾಶ್ಮೀರಕ್ಕೆ ಇಂದು ರಾಹುಲ್, ಖರ್ಗೆ ಭೇಟಿ; ಎನ್​ಸಿ ಜೊತೆ ಚುನಾವಣಾ ಪೂರ್ವ ಮೈತ್ರಿ ಚರ್ಚೆ - Jammu and Kashmir Assembly election

ಎನ್​ಸಿ ನಾಯಕ ಮತ್ತು ಮಾಜಿ ಜಮ್ಮು ಮತ್ತು ಕಾಶ್ಮೀರ ಸಿಎಂ ಓಮರ್​ ಅಬ್ದುಲ್ಲಾ ಇತ್ತೀಚಿಗೆ ಕಾಂಗ್ರೆನ್​ನ ಪ್ರಮುಖ ನಾಯಕರ ಸಂಪರ್ಕದಲ್ಲಿದ್ದಾರೆ.

rahul-gandhi-mallikarjun-kharge-in-kashmir-today-alliance-with-national-conference-jk-assembly-polls-2024
ರಾಹುಲ್​ ಗಾಂಧಿ- ಮಲ್ಲಿಕಾರ್ಜುನ ಖರ್ಗೆ (ಈಟಿವಿ ಭಾರತ್​​)
author img

By ETV Bharat Karnataka Team

Published : Aug 21, 2024, 12:43 PM IST

ಶ್ರೀನಗರ: ಕಣಿವೆ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಚುನಾವಣಾಪೂರ್ವ ಮೈತ್ರಿಗೆ ಕಾಂಗ್ರೆಸ್​ ಸಜ್ಜಾಗಿದೆ. ಈ ಸಂಬಂಧ ನ್ಯಾಷನಲ್​ ಕಾನ್ಫರೆನ್ಸ್​​ ಜೊತೆಗೆ ಮಾತುಕತೆ ನಡೆಸಲು ಲೋಕಸಭೆಯ ವಿಪಕ್ಷ ನಾಯಕ ರಾಹುಲ್​ ಗಾಂಧಿ ಹಾಗೂ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಇಂದು ಜಮ್ಮು ಮತ್ತು ಕಾಶ್ಮೀರಕ್ಕೆ ಬಂದಿಳಿದಿದ್ದಾರೆ. ಎರಡು ದಿನ ಅವರು ಈ ಕುರಿತು ವಿವಿಧ ಪಕ್ಷಗಳ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ.

ಸೀಟು ಹಂಚಿಕೆ ಚರ್ಚೆ: ಈ ಇಬ್ಬರು ನಾಯಕರು ಸೀಟು ಹಂಚಿಕೆ ಸಂಬಂಧ ಶ್ರೀನಗರದಲ್ಲಿ ಸ್ಥಳೀಯ ಪಕ್ಷಗಳ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಗುರುವಾರ ಜಮ್ಮುವಿಗೆ ತೆರಳಿ ಅಲ್ಲಿನ ರಾಜಕೀಯ ಪಕ್ಷ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ಭೇಟಿಯು ಕಾಂಗ್ರೆಸ್​ ಮತ್ತು ನ್ಯಾಷನಲ್​ ಕಾನ್ಫರೆನ್ಸ್​ಗೆ (ಎನ್​ಸಿ) ಮಹತ್ವವಾಗಿದ್ದು, ಅದರಲ್ಲೂ ಜಮ್ಮುವಿನಲ್ಲಿ ಚುನಾವಣಾ ಪೂರ್ವ ಮೈತ್ರಿ ಹಲವು ತಂತ್ರಗಾರಿಕೆಯಿಂದ ಕೂಡಿರಲಿದೆ. ಇಲ್ಲಿ ಬಿಜೆಪಿ ಬಹುಮತ ಪಡೆಯುವ ವಿಶ್ವಾಸವನ್ನು ಹೊಂದಿದೆ.

ಎನ್​ಸಿ ನಾಯಕ ಮತ್ತು ಮಾಜಿ ಜಮ್ಮು ಮತ್ತು ಕಾಶ್ಮೀರ ಸಿಎಂ ಓಮರ್​ ಅಬ್ದುಲ್ಲಾ ಇತ್ತೀಚಿಗೆ ಕಾಂಗ್ರೆನ್​ನ ಪ್ರಮುಖ ನಾಯಕರ ಸಂಪರ್ಕದಲ್ಲಿದ್ದಾರೆ. ಜೊತೆಗೆ ಇತ್ತೀಚೆಗೆ ನೇಮಕವಾಗಿದ್ದ ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್​ ಅಧ್ಯಕ್ಷ ತರೀಖ್​ ಹಮೀದ್​ ಕರ್ರಾ, ತಾವು ಸಮಾನ ಮನಸ್ಕರ ಜೊತೆಗೆ ಚರ್ಚೆಗೆ ಮುಕ್ತವಾಗಿದ್ದೇವೆ ಎಂದಿದ್ದರು.

ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಹರಿಯಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್​ ಹಾಗೂ ಜಮ್ಮು ಮತ್ತು ಕಾಶ್ಮೀರದ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ಮುಖ್ಯಸ್ಥರು ಮತ್ತು ಸ್ಕ್ರೀನಿಂಗ್​ ಸಮಿತಿ ಸದಸ್ಯರ ಜೊತೆಗಿನ ಚರ್ಚೆ ಬಳಿಕ ಈ ಸಭೆಗಳು ನಡೆಸಲಾಗುತ್ತಿದೆ.

ಜೋಡೋ ಯಾತ್ರೆ ಬಳಿಕ ಬೆಂಬಲ: ಪಕ್ಷದ ಮೂಲಗಳ ಪ್ರಕಾರ ಕಳೆದ ವರ್ಷ ಜನವರಿಯಲ್ಲಿ ಕಾಶ್ಮೀರದಲ್ಲಿ ಮುಕ್ತಾಯವಾದ ರಾಹುಲ್​ ಗಾಂಧಿ ಅವರ ಭಾರತ್​​ ಜೋಡೋ ಯಾತ್ರೆ ಬಳಿಕ ಕಣಿವೆ ರಾಜ್ಯದಲ್ಲಿ ಅವರಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದೆಲ್ಲೆಡೆ ಕಾಂಗ್ರೆಸ್​ ಪಕ್ಷ ಒಂದೇ ಉಪಸ್ಥಿತಿಯಲ್ಲಿದೆ. ಇದು ರಾಷ್ಟ್ರೀಯ ದೂರದೃಷ್ಟಿ ಮತ್ತು ಸಣ್ಣ ರಾಜಕೀಯ ಲಾಭಕ್ಕಾಗಿ ದೆಹಲಿಯಲ್ಲಿ ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ನಮ್ಮ ನಾಯಕರ ಭೇಟಿಯು ಮತದಾರರಿಗೆ ಮತ್ತು ಕಾರ್ಯಕರ್ತರಿಗೆ ಸಂದೇಶ ನೀಡುತ್ತಾರೆ ಎಂದು ಎಐಸಿಸಿ ಕಾರ್ಯನಿರ್ವಹಣಾಧಿಕಾರಿ ಗುಲಾಮ್​ ಅಹಮದ್​ ಮಿರ್​ ಈಟಿವಿ ಭಾರತ್​​ಗೆ ತಿಳಿಸಿದ್ದಾರೆ.

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿಯೂ ಕೂಡ ಕಾಂಗ್ರೆಸ್​ ಎನ್​ಸಿ ಜೊತೆ ಮೈತ್ರಿ ನಡೆಸಿತ್ತು. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಈ ಕುರಿತು ಅಂತಿಮ ತೀರ್ಮಾನವಾಗಬೇಕಿದೆ. ಈ ಮೊದಲು ಬಿಜೆಪಿ ಹಣಿಸಲು ಎನ್​ಸಿ ಮತ್ತು ಪಿಡಿಪಿ ಮೈತ್ರಿ ಮಾಡಿಕೊಳ್ಳುವ ಸಂಬಂಧ ಮಾತುಕತೆ ನಡೆಸಲಾಗಿತ್ತು ಎಂದಿದ್ದರು. ಈ ವಿಷಯ ಇನ್ನು ಅಂತಿಮವಾಗಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿದೆ.

ಇದನ್ನೂ ಓದಿ: ಜಮ್ಮು ಕಾಶ್ಮೀರ, ಹರಿಯಾಣ ವಿಧಾನಸಭೆ ಚುನಾವಣೆ: ಭದ್ರತೆಗೆ ಅರೆಸೇನಾಪಡೆ ತುಕಡಿಗಳ ನಿಯೋಜನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.