ಫರುಖಾಬಾದ್: ಬಿಜೆಪಿ ಸರ್ಕಾರದ ಅಡಿ ನ್ಯಾಯ ನಿರೀಕ್ಷಿಸುವುದು ಅಪರಾಧ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟೀಕಿಸಿದ್ದಾರೆ. ಉತ್ತರ ಪ್ರದೇಶದ ಫತೇಗಢ್ನಲ್ಲಿ ದಲಿತ ಬಾಲಕಿಯರಿಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಖಂಡಿಸಿ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
फ़र्रूख़ाबाद में दो बालिकाओं की संदिग्ध मौत के मामले में भाजपा सरकार की चुप्पी विचलित करनेवाली है। शायद इसकी दोहरी वजह है, एक तो भाजपा का स्त्री विरोधी कुविचार व रवैया और दूसरा उनका दलित होना।
— Akhilesh Yadav (@yadavakhilesh) August 28, 2024
समाजवादी पार्टी इस संदर्भ में एक प्रतिनिधिमंडल भेजकर सांत्वना के साथ-साथ इंसाफ़ के… pic.twitter.com/eU2Yz7TkQr
ಘಟನೆ ಸಂಬಂಧ ಎಕ್ಸ್ಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅಖಿಲೇಶ್ ಯಾದವ್, 'ಘಟನೆ ಕುರಿತು ಯೋಗಿ ಸರ್ಕಾರ ಮೌನವಹಿಸಿದೆ. ಫರೂಖಾಬಾದ್ನಲ್ಲಿ ಇಬ್ಬರು ದಲಿತ ಬಾಲಕಿಯರ ಅನುಮಾನಾಸ್ಪದ ಸಾವು ಕುರಿತು ಬಿಜೆಪಿ ಸರ್ಕಾರ ಮೌನವಹಿಸಿದೆ. ಇದಕ್ಕೆ ಎರಡು ಕಾರಣವಿರಬಹುದು. ಒಂದು ಬಿಜೆಪಿ ಮಹಿಳಾ ವಿರೋಧಿ ಆಲೋಚನೆ ಹಾಗೂ ವರ್ತನೆ ಮತ್ತು ಇನ್ನೊಂದು ಕಾರಣ ಮೃತರು ದಲಿತರಾಗಿರುವುದು. ಅಲ್ಲದೇ ಘಟನೆ ಕುರಿತು ಸಂತಾಪ ಮತ್ತು ಧ್ವನಿ ಎತ್ತಲು ಸಮಾಜವಾದಿ ಪಕ್ಷದಿಂದ ಅಲ್ಲಿಗೆ ನಿಯೋಗ ಕಳುಹಿಸುವುದಾಗಿ ತಿಳಿಸಿದ್ದಾರೆ.
ಇದೇ ಘಟನೆ ಕುರಿತು ರಾಹುಲ್ ಗಾಂಧಿ ಕೂಡ ಆತಂಕ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 'ಬಿಜೆಪಿ ಸರ್ಕಾರದ ಅಡಿ ನ್ಯಾಯ ನಿರೀಕ್ಷಿಸುವುದು ಅಪರಾಧವಾಗಿದೆ. ನ್ಯಾಯ ಆದ್ಯತೆ ಅಲ್ಲ ಎಂದು ಭಾವಿಸಿದವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ. ದುರ್ಬಲ ಮತ್ತು ವಂಚಿತರ ವಿರುದ್ಧದ ಬಹುತೇಕ ಗಂಭೀರ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
भाजपा सरकार में ‘न्याय की उम्मीद’ करना भी गुनाह है!
— Rahul Gandhi (@RahulGandhi) August 28, 2024
कमज़ोरों और वंचितों के खिलाफ गंभीर से गंभीर घटनाओं में भी जिनकी प्राथमिकता न्याय नहीं अपराध छिपाना हो, उनसे कोई क्या ही उम्मीद करे?
फ़र्रुख़ाबाद में हुई घटना बेहद दुर्भाग्यपूर्ण है, पीड़ित परिवार के साथ प्रशासन का ऐसा रवैया… pic.twitter.com/XEMX4IsIDs
ಯೋಗಿ ಸರ್ಕಾರ ಪತನವಾಗುತ್ತಿದೆ. ಜನರಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಯಾವುದೆ ಆಶಾಭಾವನೆ ಉಳಿದಿಲ್ಲ. ಬಿಜೆಪಿ ಯಾವಾಗಲೇ ಮಹಿಳೆಯರ ವಿಷಯಕ್ಕೆ ದನಿಯಾದರೆ ಅಲ್ಲಿ ಕೇವಲ ರಾಜಕೀಯವಿರುತ್ತದೆ. ಇದೇ ಕಾರಣಕ್ಕೆ ಬಿಜೆಪಿ ವಿರೋಧಿ ರಾಜ್ಯದಲ್ಲಿ ಮಾತ್ರ ಬಿಜೆಪಿ ಮಹಿಳಾ ವಿಚಾರದಲ್ಲಿ ಧ್ವನಿ ಎತ್ತುತ್ತಿದೆ. ಆದರೆ, ಬಿಜೆಪಿ ಆಡಳಿತ ರಾಜ್ಯದಲ್ಲಿ ಅದು ಬಾಯಿ, ಕಣ್ಣು , ಕಿವಿ ಹಾಗೂ ಪ್ರಕರಣದ ಎಲ್ಲಾ ನೈತಿಕತೆಯನ್ನು ಬಂದ್ ಮಾಡುತ್ತದೆ ಎಂದು ಅಖಿಲೇಶ್ ಯಾದವ್ ಪೋಸ್ಟ್ ಮಾಡಿದ್ದಾರೆ.
ಪ್ರಿಯಾಂಕಾ ಗಾಂಧಿ ಕೂಡ ಭಾರತದ ಎಲ್ಲಾ ಮಗಳಿಗೆ ಸುರಕ್ಷತೆ ಹಕ್ಕು ನೀಡಬೇಕಿದ್ದು, ಎಲ್ಲಾ ಸಂತ್ರಸ್ತರ ಕುಟುಂಬಕ್ಕೆ ನ್ಯಾಯ ನೀಡುವುದು ಹಕ್ಕಾಗಿದೆ. ಆಡಳಿತ ಯಾಕೆ ಹರಿಬಿರಿಯಲ್ಲಿ ಬಾಲಕಿಯರ ಅಂತ್ಯಕ್ರಿಯೆ ನಡೆಸಿತು ಎಂದು ಪ್ರಶ್ನಿಸಿದ್ದಾರೆ. ದೇಶದಲ್ಲಿನ ದಲಿತರ ಸ್ಥಿತಿ ಕುರಿತು ಮಾತನಾಡಿರುವ ಪ್ರಿಯಾಂಕಾಮ ಉನ್ನಾವೋ ಅಥವಾ ಫಾರುಖಾಬಾದ್, ಹತ್ರಾಸ್ ಎಲ್ಲಾದರಲ್ಲೂ ಅದೇ ಕ್ರೂರ ಘಟನೆಗಳು ಮರುಗಳಿಸಿವೆ. ದಲಿತರು, ಹಿಂದುಳಿದ ವರ್ಗದವರು, ವಂಚಿತರು, ಬಡವರು, ಹೆಣ್ಣುಮಕ್ಕಳು ಅಥವಾ ಯಾರೇ ದುರ್ಬಲರು ಇದೀಗ ನ್ಯಾಯದ ಭರವಸೆಯನ್ನು ಕಳೆದುಕೊಂಡಿದ್ದಾರೆ ಎಂದಿದ್ದಾರೆ.
ಘಟನೆ ಸಂಬಂಧ ಆಮ್ ಆದ್ಮಿ ಪಕ್ಷ ಕೂಡ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಏನಿದು ಘಟನೆ: ಮಂಗಳವಾರ ಬೆಳಗ್ಗೆ ಆಗಸ್ಟ್ 27ರಂದು 15 ಮತ್ತು 18 ವರ್ಷದ ಇಬ್ಬರು ದಲಿತ ಬಾಲಕಿಯರ ಮೃತದೇಹಗಳು ನೇಣು ಬಿಗಿದ ಸ್ಥಿತಿಯಲ್ಲಿ ಮರದಲ್ಲಿ ಪತ್ತೆಯಾಗಿದ್ದರು. ಕಯಂಗಂಜ್ನ ಮಾವಿನ ತೋಪಿನಲ್ಲಿ ಈ ಬಾಲಕಿಯರ ಶವಗಳು ಪತ್ತೆಯಾಗಿದ್ದರು ಎಂದು ಫಾರುಖಾಬಾದ್ ಎಸ್ಪಿ ಅಲೋಕ್ ಪ್ರಿಯದರ್ಶಿನಿ ತಿಳಿಸಿದ್ದರು. ತಮ್ಮ ಮಕ್ಕಳನ್ನು ಕೊಲೆ ಮಾಡಲಾಗಿದೆ ಎಂದು ಮೃತ ಬಾಲಕಿಯರ ತಂದೆ ಆರೋಪಿಸಿದ್ದರು. ಆದರೆ, ಪೊಲೀಸರು ಪ್ರಾಥಮಿಕ ಹಂತದಲ್ಲಿ ಇದು ಆತ್ಮಹತ್ಯೆಯಂತೆ ಕಂಡಿದ್ದು, ತನಿಖೆ ನಡೆಸಲಾಗುವುದು ಎಂದಿದ್ದರು.
ಇದನ್ನೂ ಓದಿ: ಭಾರಿ ಮಳೆಗೆ ನಲುಗಿದ ಗುಜರಾತ್: ಇದುವೆರೆಗೆ 28 ಜನರು ಸಾವು, 18,000ಕ್ಕೂ ಹೆಚ್ಚು ಸಂತ್ರಸ್ತರ ಸ್ಥಳಾಂತರ