ETV Bharat / bharat

ಚಂಡೀಗಢ ಗ್ರೆನೇಡ್​ ದಾಳಿ ಪ್ರಕರಣ; ಅಮೃತ್​ಸರ್​ನಲ್ಲಿ ಪ್ರಮುಖ ಆರೋಪಿ ಸೆರೆ - Chandigarh Explosion Case - CHANDIGARH EXPLOSION CASE

ಸೆಪ್ಟೆಂಬರ್​ 11ರಂದು ಚಂಡೀಗಢದ ಸೆಕ್ಟರ್​ 10ರ ಪ್ರದೇಶಕ್ಕೆ ಆಟೋ ರಿಕ್ಷಾದಲ್ಲಿದ್ದ ಇಬ್ಬರು ಗ್ರೆನೇಡ್ ಎಸೆದಿದ್ದರು.

Punjab Police Arrest Chandigarh Explosion Case Main Accused
ಬಂಧನ ವೇಳೆ ಆರೋಪಿಯಿಂದ ವಶಕ್ಕೆ ಪಡೆದ ಬಂದೂಕು, ಗುಂಡು (Punjab Police)
author img

By ETV Bharat Karnataka Team

Published : Sep 13, 2024, 2:06 PM IST

ಚಂಡೀಗಢ: ಇಲ್ಲಿನ ಸೆಕ್ಟರ್​ 10ರ ಪ್ರದೇಶದ ಮನೆಯಲ್ಲಿ ಕಡಿಮೆ ತೀವ್ರತೆಯ ಗ್ರೆನೇಡ್​​ ಸ್ಪೋಟ ನಡೆಸಿದ ಪ್ರಮುಖ ಆರೋಪಿಯನ್ನು ಪಂಜಾಬ್​ ಪೊಲೀಸರು ಬಂಧಿಸಿದ್ದಾರೆ.

ಬುಧವಾರ ಈ ಸ್ಪೋಟ ನಡೆದಿತ್ತು. ಆಟೋ ರಿಕ್ಷಾದಲ್ಲಿ ಬಂದಿದ್ದ ಇಬ್ಬರು ಗ್ರೆನೇಡ್ ಎಸೆದಿದ್ದಾರೆ ಎಂದು ಮನೆ ಮಾಲೀಕರು ತಿಳಿಸಿದ್ದರು. ಈ ಘಟನೆಯ ಆರೋಪಿಗಳಿಗೆ ಸುಳಿವು ನೀಡಿದರೆ 2 ಲಕ್ಷ ರೂ ಬಹುಮಾನ ನೀಡುವುದಾಗಿ ಗುರುವಾರ ಚಂಡೀಗಢ ಪೊಲೀಸರು ಘೋಷಿಸಿದ್ದರು.

ಇದೀಗ ಪ್ರಕರಣದ ಪ್ರಮುಖ ಆರೋಪಿಯನ್ನು ಕೇಂದ್ರ ತನಿಖಾ ಸಂಸ್ಥೆಯೊಂದಿಗಿನ ಕಾರ್ಯಾಚರಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಮೃತ್​ಸರ್​ ಗ್ರಾಮಾಂತರ ಪ್ರದೇಶದ ನಿವಾಸಿ ರೋಹನ್​ ಮಸಿಹ್ ಎಂಬಾತನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿಯನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಂಧನದ ವೇಳೆ ಪ್ರಮುಖ ಆರೋಪಿಯಿಂದ 9ಎಂಎಂ ಗ್ಲಾಕ್​ ಪಿಸ್ತೂಲ್​ ಜೊತೆ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪಿತೂರಿ ಪ್ರಕರಣ ಸಂಬಂಧ ಸಂಪೂರ್ಣ ತನಖೆಯನ್ನು ಚಂಡೀಗಢ ಪೊಲೀಸರೊಂದಿಗೆ ಜಂಟಿಯಾಗಿ ನಡೆಸಲಾಗುವುದು ಎಂದು ಪಂಜಾಬ್​ ಪೊಲೀಸರು ಹೇಳಿದ್ದಾರೆ.

ಸದ್ಯ ಆರೋಪಿಯನ್ನು ಅಮೃತಸರ ರಾಜ್ಯ ವಿಶೇಷ ಕಾರ್ಯಾಚರಣೆ ಕೋಶದ ವಶದಲ್ಲಿರಿಸಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ರೋಹನ್​ ಗ್ರೆನೇಡ್​ ಸ್ಪೋಟ ನಡೆಸಿರುವ ಕುರಿತು ಒಪ್ಪಿಕೊಂಡಿದ್ದಾನೆ.(ಐಎಎನ್​ಎಸ್​)

ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಹೈ ಕಮಿಷನ್​ ಮೇಲೆ ದಾಳಿ ಪ್ರಕರಣ: ಪಂಜಾಬ್​ನಲ್ಲಿ ಎನ್​ಐಎ ಶೋಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.