ETV Bharat / bharat

ಒಲಿಂಪಿಕ್​​ ಹಾಕಿ ಪಂದ್ಯ ವೀಕ್ಷಿಸಲು ಪ್ಯಾರಿಸ್​​ ಭೇಟಿಗೆ ಅನುಮತಿ ಕೋರಿದ ಪಂಜಾಬ್ ಸಿಎಂ; ನಿರಾಕರಿಸಿದ ಕೇಂದ್ರ - Punjab CM Mann

ಒಲಿಂಪಿಕ್​​ ಹಾಕಿ ಪಂದ್ಯ ವೀಕ್ಷಿಸಲು ಪ್ಯಾರಿಸ್​​ ಭೇಟಿಗೆ ಅನುಮತಿ ಕೋರಿದ್ದ ಪಂಜಾಬ್ ಸಿಎಂ ಭಗವಂತ್​ ಮಾನ್​ ಅವರಿಗೆ ನಿರಾಸೆಯಾಗಿದೆ. ಕೇಂದ್ರ ಸರ್ಕಾರ ಅವರಿಗೆ ಭದ್ರತಾ ಕಾರಣಕ್ಕಾಗಿ ಅವಕಾಶ ನಿರಾಕರಿಸಿದೆ.

ಪಂಜಾಬ್ ಸಿಎಂ ಭಗವಂತ್​ ಮಾನ್
ಪಂಜಾಬ್ ಸಿಎಂ ಭಗವಂತ್​ ಮಾನ್ (ETV Bharat)
author img

By PTI

Published : Aug 3, 2024, 9:41 PM IST

ಚಂಡೀಗಢ: ಪ್ರಸ್ತುತ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡವನ್ನು ಬೆಂಬಲಿಸಲು ಪ್ಯಾರಿಸ್‌ಗೆ ಭೇಟಿ ನೀಡಲು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಕೋರಿದ್ದ ಅನುಮತಿಯನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ. ಭದ್ರತಾ ಕಾರಣಗಳಿಗಾಗಿ ಪ್ಯಾರಿಸ್​ ಪ್ರವಾಸಕ್ಕೆ ರಾಜತಾಂತ್ರಿಕ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ರಾಜತಾಂತ್ರಿಕ ಪಾಸ್​​ಪೋರ್ಟ್​ ಹೊಂದಿರುವ ಪಂಜಾಬ್​ ಸಿಎಂ ಮಾನ್​ ಅವರು ಆಗಸ್ಟ್​ 3 ರಿಂದ 9 ರವರೆಗೆ ಪ್ಯಾರಿಸ್​ಗೆ ತೆರಳಲು ಮುಂದಾಗಿದ್ದರು. ಆಗಸ್ಟ್​ 4 ರಂದು ಭಾರತ ಹಾಕಿ ತಂಡದ ಕ್ವಾರ್ಟರ್​ಫೈನಲ್​ ಪಂದ್ಯವಿದ್ದು, ಅದನ್ನು ವೀಕ್ಷಿಸಲು ಬಯಸಿದ್ದರು. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಅನುಮತಿ ಕೋರಿದ್ದರು.

ಸಿಎಂ ಮಾನ್ ಅವರು ಝಡ್​ ಪ್ಲಸ್ ಭದ್ರತೆಯಲ್ಲಿರುವ ಕಾರಣ, ಕಡಿಮೆ ಸಮಯದಲ್ಲಿ ಇದನ್ನು ಹೊಂದಿಸಲು ಸಾಧ್ಯವಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಕಚೇರಿಗೆ ಕೇಂದ್ರ ಸರ್ಕಾರ ತಿಳಿಸಿದೆ. ಇದನ್ನು ಸಿಎಂ ಕಚೇರಿ ಕೂಡ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ನಾಯಕರ ವಿದೇಶ ಪ್ರವಾಸಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ರಾಜಕೀಯ ಅನುಮತಿ ಅಗತ್ಯವಿದೆ. ಕೇಂದ್ರ ಸರ್ಕಾರದಿಂದ ಮಾನ್​ ಅವರ ಪ್ಯಾರಿಸ್​ ಭೇಟಿಗೆ ಅನುಮತಿ ನೀಡಿಲ್ಲ ಎಂದು ಹೇಳಿದೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತೀಯ ಪುರುಷರ ಹಾಕಿ ತಂಡದ ನಾಯಕ ಪಂಜಾಬ್​ನ ಹರ್ಮನ್‌ಪ್ರೀತ್ ಸಿಂಗ್ ಅವರು 2 ಗೋಲು ಬಾರಿಸಿ ಜಯ ತಂದಿದ್ದರು. ಬಳಿಕ ಫೋನ್​ ಕರೆ ಮಾಡಿದ್ದ ಮಾನ್​, ಐತಿಹಾಸಿಕ ಗೆಲುವಿಗಾಗಿ ತಂಡವನ್ನು ಅಭಿನಂದಿಸಿದ್ದರು. ಜೊತೆಗೆ ಆಗಸ್ಟ್ 4 ರಂದು ನಡೆಯಲಿರುವ ಕ್ವಾರ್ಟರ್‌ಫೈನಲ್ ಪಂದ್ಯದ ವೀಕ್ಷಣೆಗೆ ಪ್ಯಾರಿಸ್​ಗೆ ಬರುವುದಾಗಿ ಭರವಸೆ ನೀಡಿದ್ದರು.

ಸ್ಪೀಕರ್​​ಗೂ ಇಲ್ಲ ಅವಕಾಶ: ಪಂಜಾಬ್ ವಿಧಾನಸಭೆ ಸ್ಪೀಕರ್ ಕುಲತಾರ್ ಸಿಂಗ್ ಸಂಧ್ವಾನ್ ಅವರಿಗೂ ಅಮೆರಿಕ ಪ್ರವಾಸಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ಆಗಸ್ಟ್ 4 ರಿಂದ ಆಗಸ್ಟ್ 7ರ ವರೆಗೆ ಅಲ್ಲಿ ನಡೆಯುವ ಸ್ಪೀಕರ್‌ಗಳ ಸಮ್ಮೇಳನದಲ್ಲಿ ಭಾಗವಹಿಸಲು ಪಂಜಾಬ್ ಸ್ಪೀಕರ್ ಕುಲತಾರ್ ಸಿಂಗ್ ಸಂಧ್ವಾನ್ ಅವರು ಅವಕಾಶ ಕೇಳಿದ್ದರು. ಆದರೆ, ಸರ್ಕಾರ ತಿರಸ್ಕರಿಸಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರತಿಪಕ್ಷಗಳ ಸ್ಪೀಕರ್​ಗಳಿಗೆ ಅವಕಾಶ ನಿರಾಕರಿಸಿದೆ. ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ಕೇರಳದ ಸ್ಪೀಕರ್‌ಗಳಿಗೂ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿಲ್ಲ. ಆದರೆ ಬಿಜೆಪಿ ಸರ್ಕಾರ ಇರುವ ಮೇಘಾಲಯದ ಸ್ಪೀಕರ್‌ಗೆ ಅನುಮತಿ ಕೊಟ್ಟಿದೆ. ಇದರಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದು ಪಂಜಾಬ್​ ಸ್ಪೀಕರ್​ ಆರೋಪಿಸಿದ್ದಾರೆ.

ಹಕ್ಕು ನಿರಾಕರಣೆ: ಸಿಎಂ ಮಾನ್​ ಅವರ ವಿದೇಶ ಪ್ರವಾಸಕ್ಕೆ ಅವಕಾಶ ನೀಡದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್​ ಆಪ್​​ ಟೀಕಿಸಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಫ್ರಾನ್ಸ್‌ಗೆ ಭೇಟಿ ನೀಡಲು ಸಿಎಂಗೆ ಅನುಮತಿ ನಿರಾಕರಿಸಿರುವುದು ಖಂಡನೀಯ. ಪಂಜಾಬ್‌ನ ಮೂರು ಕೋಟಿ ಜನರಿಗೆ ಅವಮಾನ ಮಾಡಿದೆ. ಭಾರತ ಹಾಕಿ ತಂಡದಲ್ಲಿ ಹೆಚ್ಚಿನ ಆಟಗಾರರು ಪಂಜಾಬ್‌ನವರಾಗಿದ್ದಾರೆ. ಸಾಂವಿಧಾನಿಕವಾಗಿ ಚುನಾಯಿತ ವ್ಯಕ್ತಿಯ ಮೂಲಭೂತ ಹಕ್ಕನ್ನು ಕಸಿದಂತಾಗಿದೆ ಎಂದು ಪಂಜಾಬ್ ಆಪ್​ ಪಕ್ಷದ ಪ್ರಧಾನ ಕಾರ್ಯದರ್ಶಿ ಹರ್ಚಂದ್ ಸಿಂಗ್ ಬರ್ಸತ್ ದೂರಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಒಂದೇ ವರ್ಷದಲ್ಲಿ ಆನೆಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳ! - Elephant census

ETV Bharat Logo

Copyright © 2024 Ushodaya Enterprises Pvt. Ltd., All Rights Reserved.