ಹೈದರಾಬಾದ್: ಪ್ರೀತಿ ಮಾಡುವುದಕ್ಕಿಂತ ಹೆಚ್ಚಿನಮಟ್ಟಿಗೆ ಎದೆ ಢವಗುಡುವುದು ಆ ಪ್ರೀತಿಯನ್ನು ಪ್ರೀತಿಪಾತ್ರರಿಗೆ ಹೇಳುವಾಗ. ಅವರು ಹೌದು ಅನ್ನುತ್ತಾರೋ ಅಥವಾ ಇಲ್ಲ ಎನ್ನುತ್ತಾರೋ ಎಂಬ ಕಾತರತೆಯ ಕ್ಷಣ ನಿಜಕ್ಕೂ ಯುದ್ಧಕ್ಕೆ ಅಣಿಯಾದ ಸಂದರ್ಭದಂತೆ ಭಾಸವಾಗುತ್ತದೆ. ಇದಕ್ಕೆ ಸಾಕಷ್ಟು ಧೈರ್ಯ, ಯೋಜನೆ ಮತ್ತು ಸಿದ್ದತೆಯೂ ಬೇಕು. ಪ್ರೀತಿ ಪಾತ್ರರೊಂದಿಗೆ ಪೂರ್ತಿ ಜೀವನ ಕಳೆಯುವ ನಿಮ್ಮ ಪ್ರೀತಿ ಪ್ರಸ್ತಾಪಕ್ಕೆ ಸೂಕ್ತವಾದ ದಿನವೇ ಪ್ರಪೋಸ್ ಡೇ.
ವಾಲಟೈನ್ ವಾರದಲ್ಲಿ ಎರಡನೇ ದಿನವನ್ನು ಈ ಪ್ರೊಪೋಸ್ ಡೇ ಆಗಿ ಆಚರಿಸಲಾಗುವುದು. ಪ್ರತಿ ವರ್ಷ ಫೆಬ್ರವರಿ 8 ಪ್ರಪೋಸ್ ಡೇ ಆಚರಿಸಲಾಗುತ್ತದೆ. ಈ ದಿನ ನಿಮ್ಮ ಪ್ರೀತಿ ಪಾತ್ರರೊಂದಿಗೆ ನಿಮ್ಮ ಪ್ರೀತಿಯ ನಿವೇದನೆ ಮಾಡಲು ಅತ್ಯಂತ ಸೂಕ್ತ ದಿನವೂ ಆಗಿದೆ.
ರೋಸ್ ಡೇ ಆದ ಮರು ದಿನವೇ ಬರುವ ಈ ಪ್ರೊಫೋಸ್ ಡೇ ಪ್ರೀತಿಯ ನಡುವಿನ ಬಂಧನದ ಹೊಸ ಪ್ರಯಾಣಕ್ಕೆ ಇಬ್ಬರು ಅಣಿಯಾಗುವ ದಿನ ಎಂದರೂ ತಪ್ಪಲ್ಲ. ಪ್ರೀತಿ ವ್ಯಕ್ತಪಡಿಸಿ, ಪ್ರೇಮಿಯನ್ನು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಲು ಒಪ್ಪಿಗೆ ಬೇಡುವ ಈ ದಿನಕ್ಕೆ ಪ್ರೇಮಿಗಳ ವಾರದಲ್ಲಿ ವಿಶೇಷ ಮಹತ್ವವೂ ಇದೆ.
ಈ ದಿನ ಪ್ರೀತಿ ಪಾತ್ರರಿಗೆ ಪ್ರೊಪೋಸ್ ಮಾಡುವ ಮೂಲಕ ಅವರು ಎಷ್ಟರ ಮಟ್ಟಿಗೆ ನಿಮ್ಮನ್ನೂ ಪ್ರೀತಿಸುತ್ತಾರೆ ಎಂಬುದು ನಿರ್ಣಾಯಕವಾಗುತ್ತದೆ. ಈ ಪ್ರಪೋಸ್ ಡೇ ಅನ್ನು ಕೆಲವರು ವಿಶೇಷ ಉಡುಗೊರೆ ಅಥವಾ ಪತ್ರ ಅಥವಾ ಉತ್ತಮ ಸಮಯ ಕಳೆಯುವ ಮೂಲಕ ಪ್ರೀತಿ ಪ್ರಸ್ತಾಪ ಮಾಡಬಹುದು. ಕೆಲವು ಜೋಡಿಗಳು ಇದಕ್ಕಾಗಿ ವಿಶೇಷ ಕಾರ್ಯಕ್ರಮ, ಊಟದಂತಹ ಯೋಜನೆಯನ್ನು ಹೊಂದಿರಬಹುದು.
ಪ್ರಪೋಸ್ ಮಾಡುವುದಕ್ಕೆ ಉತ್ತಮ ಯೋಜನೆ ಯಾವುದು ಎಂದು ಯೋಚಿಸುತ್ತಿದ್ದರೆ, ಕ್ಯಾಂಡಲ್ ಲೈಟ್ ಡಿನ್ನರ್ ಅತ್ಯುತ್ತಮ ಆಯ್ಕೆಯಾಗಬಹುದು. ಇದಕ್ಕಾಗಿ ಟೇಬಲ್ ಬುಕ್ ಮಾಡಿ ಉತ್ತಮ ಆಹಾರದ ಮೂಲಕವೂ ಮನಸು ಕದಿಯಲು ಯೋಚಿಸಬಹುದು. ಈ ರೀತಿ ಟೇಬಲ್ ಬುಕ್ ಮಾಡುವಾಗ ಎಚ್ಚರ. ಈ ದಿನ ಇದೇ ರೀತಿಯ ಐಡಿಯಾ ಹೊಂದುವ ಮೂಲಕ ಹೆಚ್ಚಿನ ಮಟ್ಟದಲ್ಲಿ ಬುಕ್ಕಿಂಗ್ ಮಾಡಲು ಜನರು ಕಾದಿರುತ್ತಾರೆ. ಈ ಹಿನ್ನಲೆಯಲ್ಲಿ ಇದಕ್ಕಾಗಿ ಮುಂಚಿತವಾಗಿ ಸಿದ್ದತೆ ಮಾಡಿ. ಇಲ್ಲದೇ ಹೋದಲ್ಲಿ ಮನೆಯಲ್ಲಿ ಅಡುಗೆ ಮಾಡಿ, ಮನೆಯಲ್ಲಿಯೇ ಕ್ಯಾಂಡಲ್ ಲೈಟ್ ಡಿನ್ನರ್ಗೆ ವ್ಯವಸ್ಥೆ ಮಾಡಿಕೊಳ್ಳಬಹುದು. ವರ್ಷಗಳು ಕಳೆದಂತೆ ವಿಭಿನ್ನ ಐಡಿಯಾ ಮೂಲಕ ಜನರು ತಮ್ಮ ಪ್ರೀತಿಯವನ್ನು ವ್ಯಕ್ತಪಡಿಸಲು ಅನೇಕ ಮಾರ್ಗ ಹುಡುಕಿದ್ದಾರೆ. ಆದರೂ ಇದರಲ್ಲಿ ಕೆಂಪು ಗುಲಾಬಿ ಮತ್ತು ಕ್ಯಾಂಡಲ್ ಲೈಟ್ ಡಿನ್ನರ್ ಮಾತ್ರ ತಮ್ಮ ಕಳೆಯನ್ನು ಕುಂದಿಸಿಕೊಂಡಿಲ್ಲ.
ಅನೇಕ ಮಂದಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ತೊಳಲಾಡುತ್ತಿದ್ದರೆ, ಪ್ರಪೋಸ್ ಡೇ ಇದಕ್ಕೆ ಸರಿಯಾದ ದಿನವಾಗಿದೆ. ಹೆಚ್ಚು ತಡಮಾಡದೇ ನೀವು ಗುಟ್ಟಾಗಿ ಪ್ರೀತಿಸುತ್ತಿರುವವರ ಮುಂದೆ ನಮ್ಮ ಭಾವನೆ ವ್ಯಕ್ತಪಡಿಸಲು ಇದು ಸಕಾಲವಾಗಿದೆ.
ಇದನ್ನೂ ಓದಿ: ವ್ಯಾಲೆಂಟೈನ್ಸ್ ವೀಕ್ 2023: ರೋಸ್ ಡೇ ವಿವಿಧ ಬಣ್ಣದ ಗುಲಾಬಿಗಳ ಮಹತ್ವ ಮತ್ತು ಅರ್ಥ ಏನು?