ಅಯೋಧ್ಯೆ(ಉತ್ತರ ಪ್ರದೇಶ): ರಾಮನಗರಿಯಲ್ಲಿಂದು ಐತಿಹಾಸಿಕ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಲಿದೆ. ಪ್ರಧಾನಿ ನರೇಂದ್ರ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಭಾಗವಹಿಸಿದ್ದಾರೆ. ಪ್ರಧಾನಿ ಆಗಮನ ಹಾಗೂ ಪ್ರಾಣ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಪ್ರಧಾನಿ ಮೋದಿ ಮಧ್ಯಾಹ್ನ 12:55ಕ್ಕೆ ಪೂಜಾ ಸ್ಥಳದಿಂದ ನಿರ್ಗಮಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸುವರು. ಈ ಕಾರ್ಯಕ್ರಮಕ್ಕಾಗಿ ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ವೇದಿಕೆ ಸಿದ್ಧಪಡಿಸಲಾಗಿದೆ. ಈ ವೇದಿಕೆಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡುವರು. ಇದಾದ ಬಳಿಕ ಎರಡು ಗಂಟೆಯವರೆಗೆ ಅಲ್ಲಿಯೇ ತಂಗಲಿದ್ದಾರೆ. ಮಧ್ಯಾಹ್ನ 2.10ಕ್ಕೆ ಕುಬೇರ್ ತಿಲಾ ದರ್ಶನಕ್ಕೆ ತೆರಳುವರು. ಮಧ್ಯಾಹ್ನ 3.30ಕ್ಕೆ ರಾಮನಗರಿಯಿಂದ ಹೊರಡುವ ನಿರೀಕ್ಷೆಯಿದೆ.
-
#WATCH | Prime Minister Narendra Modi arrives at Shri Ram Janmaboomi Temple in Ayodhya to participate in the Ram Temple Pran Pratishtha ceremony pic.twitter.com/XkLf1aV1hh
— ANI (@ANI) January 22, 2024 " class="align-text-top noRightClick twitterSection" data="
">#WATCH | Prime Minister Narendra Modi arrives at Shri Ram Janmaboomi Temple in Ayodhya to participate in the Ram Temple Pran Pratishtha ceremony pic.twitter.com/XkLf1aV1hh
— ANI (@ANI) January 22, 2024#WATCH | Prime Minister Narendra Modi arrives at Shri Ram Janmaboomi Temple in Ayodhya to participate in the Ram Temple Pran Pratishtha ceremony pic.twitter.com/XkLf1aV1hh
— ANI (@ANI) January 22, 2024
10 ಲಕ್ಷ ದೀಪಗಳಿಂದ ಬೆಳಗಲಿರುವ ಅಯೋಧ್ಯೆ: ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕಾಗಿ ರಾಮ ಮಂದಿರ ಸೇರಿದಂತೆ ಇಡೀ ರಾಮನಗರಿಯನ್ನು ಆಕರ್ಷಕವಾಗಿ ಅಲಂಕರಿಸಲಾಗಿದೆ. ಇಡೀ ರಾಮನಗರಿ ಸಂಜೆ 10 ಲಕ್ಷ ದೀಪಗಳಿಂದ ಬೆಳಗಲಿದೆ. 100 ಪ್ರಮುಖ ದೇವಾಲಯಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ದೀಪೋತ್ಸವ ಆಯೋಜಿಸಲಾಗಿದೆ.
ಪ್ರಾದೇಶಿಕ ಪ್ರವಾಸೋದ್ಯಮ ಅಧಿಕಾರಿ ಆರ್.ಪಿ.ಯಾದವ್ ಮಾತನಾಡಿ, "ದೀಪೋತ್ಸವ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ. ಇದಕ್ಕಾಗಿ ಕುಂಬಾರರಿಂದ ಸಾಕಷ್ಟು ದೀಪಗಳನ್ನು ಖರೀದಿಸಲಾಗಿದೆ" ಎಂದು ಹೇಳಿದರು.
ಇದನ್ನೂ ಓದಿ: ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆ ಮೊಳಗಲಿದೆ 50 ಸಂಗೀತ ವಾದ್ಯಗಳ 'ಮಂಗಳ ಧ್ವನಿ'