ETV Bharat / bharat

ಗಸ್ತು ತಿರುಗುತ್ತಿದ್ದ ಪೊಲೀಸ್​​ ಜೀಪ್​​​​​ ಕದ್ದ ಭೂಪ.. ಮುಂದೇನಾಯ್ತು? - POLICE JEEP STOLEN - POLICE JEEP STOLEN

ಉತ್ತರಪ್ರದೇಶದಲ್ಲಿ ಪೊಲೀಸ್​ ಜೀಪ್​​ ಕದ್ದಿರುವ ಘಟನೆ ಬೆಳಕಿಗೆ ಬಂದಿದೆ. ವಾಹನ ನಿಲ್ಲಿಸಿ ಟೀ ಕುಡಿಯಲು ಹೋಗಿದ್ದ ಪೊಲೀಸರು ಹಿಂತಿರುಗಿದಾಗ ವಾಹನ ನಾಪತ್ತೆಯಾಗಿತ್ತು. ಈ ವಿಚಾರ ತಿಳಿದು ಪೊಲೀಸರೇ ಒಂದು ಕ್ಷಣ ಅವಾಕ್ಕಾಗಿದ್ದರು. ಬಳಿಕ ಆ ಜೀಪ್​ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊಲೀಸ್​ ಜೀಪ್​ ಕಳ್ಳತನ
ಪೊಲೀಸ್​ ಜೀಪ್​ ಕಳ್ಳತನ (ETV Bharat)
author img

By ETV Bharat Karnataka Team

Published : Jun 18, 2024, 10:45 AM IST

ರಾಂಪುರ, ಉತ್ತರಪ್ರದೇಶ: ಉತ್ತರಪ್ರದೇಶದ ರಾಮ್​ಪುರ ಜಿಲ್ಲೆಯಲ್ಲಿ ಕಳ್ಳನೊಬ್ಬ ಯುಪಿ ಪೊಲೀಸ್​ ವಾಹನವನ್ನು ಕದ್ದುಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ವಾಹನ ನಿಲ್ಲಿಸಿ ಟೀ ಕುಡಿಯಲು ಹೋಗಿದ್ದ ಪೊಲೀಸರು ಹಿಂತಿರುಗಿದಾಗ ವಾಹನ ನಾಪತ್ತೆಯಾಗಿತ್ತು. ಇದು ಒಂದು ಕ್ಷಣ ಪೊಲೀಸರನ್ನೇ ಬೆಚ್ಚಿ ಬೀಳಿಸಿತ್ತು. ಕೂಡಲೇ ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ಗಸ್ತು ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ತೀವ್ರ ಹುಡುಕಾಟ ನಡಸಿ ನಂತರ ವಾಹನವನ್ನು ಪತ್ತೆಹಚ್ಚಿದ್ದಾರೆ.

ಈ ಘಟನೆ ಜೂನ್ 16 ರಂದು ನಡೆದಿದೆ ಎನ್ನಲಾಗಿದೆ. ವಾಸ್ತವವಾಗಿ ಘಟನೆ ದಿನ ರಾತ್ರಿ ಯುಪಿ 112 ಪೊಲೀಸ್​ ತಂಡವು ರಾಂಪುರ ಪೊಲೀಸ್ ಠಾಣೆಯ ಕ್ಯಾಮ್ರಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿತ್ತು. ಈ ವೇಳೆ ಪೊಲೀಸ್ ಸಿಬ್ಬಂದಿ ಈದ್ಗಾ ಎಂಬ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿ ಚಹಾ ಸೇವಿಸಲು ತೆರಳಿದ್ದಾರೆ. ಚಹಾ ಕುಡಿದ ಬಳಿಕ ಹಿಂತಿರುಗಿದಾಗ 112 ವಾಹನ ಕಾಣೆಯಾಗಿದೆ. ಇದನ್ನು ಕಂಡು ಗಾಬರಿಗೊಂಡ ಪೊಲೀಸರು ಆ ಪ್ರದೇಶದಲ್ಲಿ ತೀವ್ರ ಹುಡುಕಾಟ ನಡೆಸಿದ್ದಾರೆ. ವಾಹನ ಸಿಗದೇ ಇದ್ದ ವೇಳೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಬಳಿಕ ಸುಮಾರು 2 ರಿಂದ 3 ಗಂಟೆಗಳ ಕಾಲ ಹುಡುಕಾಟ ನಡೆಸಿದ ಪೊಲೀಸರು ಅಂತಿಮವಾಗಿ ಸಮೀಪದ ಕೆಮ್ರಿ ಸ್ವರ್ ಖುರ್ದ್ ಎಂಬ ಪ್ರದೇಶದಲ್ಲಿ ವಾಹನವನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆತ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಪೊಲೀಸ್​​ ಜೀಪನ್ನೇ ಕದ್ದ ಭೂಪ: ಕಾರಣ ಕೇಳಿದರೆ ಅಚ್ಚರಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.