ಲಕ್ನೋ: ಯೂಟ್ಯೂಬ್ ನೋಡಿಕೊಂಡು 500 ರೂ. ಮುಖಬೆಲೆಯ ನಕಲಿ ನೋಟ್ಗಳನ್ನು ಪ್ರಿಂಟ್ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಬಂಧಿತರಿಂದ 10 ಸಾವಿರ ರೂ. ಮೌಲ್ಯದ ನೋಟುಗಳನ್ನು ಹಾಗೂ 27 ಸ್ಟಾಂಪ್ ಪೇಪರ್ ವಶಕ್ಕೆ ಪಡೆಯಲಾಗಿದೆ.
ರಾಬರ್ಟ್ಸ್‌ಗಂಜ್‌ನ ಚುರುಕ್ ಬಜಾರ್‌ನ ನಿವಾಸಿ ಪ್ರಮೋದ್ ಮಿಶ್ರಾ ಮತ್ತು ಮಿರ್ಜಾಪುರದ ಚುನಾರ್‌ನ ಸತೀಶ್ ರೈ ಬಂಧಿತರು. ಕೋನ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಜ್‌ಗಢ ಬಜಾರ್‌ನಿಂದ ಮಾಹಿತಿದಾರ ನೀಡಿದ ಸುಳಿವಿನ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ.
ಪ್ರಕರಣ ಕುರಿತು ಮಾತನಾಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಲು ಸಿಂಗ್, ಆರೋಪಿಗಳು ಯೂಟ್ಯೂಬ್ ವಿಡಿಯೋ ನೋಡಿಕೊಂಡು ಸ್ಟಾಂಪ್ ಪೇಪರ್ ಬಳಕೆ ಮಾಡಿಕೊಂಡು 500 ರೂ ಮುಖ ಬೆಲೆಯ ನೋಟುಗಳನ್ನು ಮುದ್ರಿಸುತ್ತಿದ್ದರು. ಹಾಗೇ 10 ರೂ.ನ ಸ್ಟಾಂಪ್ ಪೇಪರ್ಗಳ ಮುದ್ರಿಸಿದ್ದು, ಇವು ನೈಜ ಹಣದ ಪೇಪರ್ ರೀತಿಯೇ ಇದೆ ಎಂದರು.
ಸ್ಟಾಂಪ್ ಪೇಪರ್ನಲ್ಲಿ 500ರೂ. ನೋಟಿಗಳ ನಕಲಿ ವಿನ್ಯಾಸ ಬಳಕೆಗೆ ಇವರು ಸ್ಕ್ಯಾನರ್ ಮತ್ತು ಪ್ರಿಂಟರ್ ಬಳಕೆ ಮಾಡುತ್ತಿದ್ದರು. ಇವರು ಮುದ್ರಿಸಿದ ನೋಟು ನಕಲಿ ಎನ್ನಲು ಸಾಧ್ಯವಿಲ್ಲ ಎನ್ನುವಂತೆ ತಯಾರಿಸಿದ್ದಾರೆ.
ಈ ಇಬ್ಬರು ಇಲ್ಲಿಯವರೆಗ 30 ಸಾವಿರ ರೂಪಾಯಿ ಮೌಲ್ಯದ ನಕಲಿ ಹಣವನ್ನು ಮುದ್ರಿಸಿದ್ದು, ಸದ್ಯ ಇದೀಗ 10 ಸಾವಿರ ಮೌಲ್ಯದ ನಕಲಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಈ ಇಬ್ಬರ ಗ್ಯಾಂಗ್ನಲ್ಲಿ ಇತರೆ ಸದಸ್ಯರು ಇದ್ದರೆ ಎಂಬ ಕುರಿತು ಅವರು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ.
ಇದರ ಜೊತೆಗೆ ಪೊಲೀಸರು ಆರೋಪಿಗಳ ನಕಲಿ ನೋಟು ಸಾಗಣೆಗೆ ಬಳಕೆ ಮಾಡಿದ್ದ ಆಲ್ಟೋ ಕಾರ್ ಅನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಇಬ್ಬರನ್ನು ಬಂಧಿಸಲಾಗಿದ್ದು, ಇದರ ಹಿಂದೆ ದೊಡ್ಡ ನೆಟ್ವರ್ಕ್ ಕಾರ್ಯಾಚರಣೆ ಮಾಡುತ್ತಿದ್ಯಾ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ಐವರು ಸಾವು