ETV Bharat / bharat

ವಾರಾಣಸಿಯಲ್ಲಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ; ಬ್ರಾಹ್ಮಣ, ದಲಿತ ಮತ್ತು ಒಬಿಸಿ ವರ್ಗದವರು ಸೂಚಕರಾಗಿ ಸಹಿ - PM Modi Nomination

Modi Nomination : ಕಾಲಭೈರವನ ಆಶೀರ್ವಾದ ಪಡೆದು ಕಾಶಿಯಲ್ಲಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸಿದರು. ಬ್ರಾಹ್ಮಣ-ದಲಿತ ಮತ್ತು ಒಬಿಸಿ ವರ್ಗಕ್ಕೆ ಸೇರಿದ ಜನರು ಪ್ರಧಾನಿಯ ಸೂಚಕರಾಗಿದ್ದರು. ಈ ವೇಳೆ ಯುಪಿ ಸಿಎಂ ಯೋಗಿ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಹಿರಿಯ ನಾಯಕರು ಉಪಸ್ಥಿತರಿದ್ದರು..

PRIME MINISTER NARENDRA MODI  DASHASHWAMEDH GHAT  GANGA AND KAAL BHAIRAV TEMPLE
ವಾರಾಣಸಿಯಲ್ಲಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ (ETV Bharat)
author img

By PTI

Published : May 14, 2024, 12:34 PM IST

Updated : May 14, 2024, 2:38 PM IST

ವಾರಾಣಸಿಯಲ್ಲಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ (ಕೃಪೆ: ETV Bharat/ANI)

ವಾರಾಣಸಿ (ಉತ್ತರಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮೂರನೇ ಬಾರಿಗೆ ಅಭ್ಯರ್ಥಿಯಾಗಿ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಪ್ರಧಾನಿಯವರು ದಶಾಶ್ವಮೇಧ ಘಾಟ್‌ನಲ್ಲಿ ಐವರು ವೈದಿಕ ಆಚಾರ್ಯರ ಸಮ್ಮುಖದಲ್ಲಿ ಗಂಗಾಮಾತೆಗೆ ಪೂಜೆ ಸಲ್ಲಿಸಿದರು. ಇದಾದ ಬಳಿಕ ಪ್ರಧಾನಿ ಮೋದಿ ಕಾಲ ಭೈರವೇಶ್ವರ ದೇವಸ್ಥಾನದತ್ತ ತೆರಳಿದರು. ಕಾಲಭೈರವ ದೇಗುಲವನ್ನು ತಲುಪಿದ ನಂತರ ಪ್ರಧಾನಿ ಮೋದಿ ಪ್ರಾರ್ಥನೆ ಸಲ್ಲಿಸಿದರು. ಇಲ್ಲಿ ಪೂಜೆ ಸಲ್ಲಿಸಿದ ಬಳಿಕ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆಗಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ಬಳಿಕ ಅಲ್ಲಿ ನಾಮಪತ್ರ ಸಲ್ಲಿಸಿದರು.

ಗಣೇಶ್ವರ್ ಶಾಸ್ತ್ರಿ ದ್ರಾವಿಡ್ ಎರಡನೇ ಸೂಚಕರಾಗಿದ್ದಾರೆ. ಬ್ರಾಹ್ಮಣ ಸಮುದಾಯದಿಂದ ಬಂದ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಅವರು ರಾಮ ಮಂದಿರದ ಪ್ರತಿಷ್ಠಾಪನೆಗೆ ಮತ್ತು ವ್ಯಾಸ ಜೀ ಅವರ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ಶುಭ ಮುಹೂರ್ತವನ್ನು ನಿರ್ಧರಿಸಿದ್ದರು. ಅವರು ವಾರಣಾಸಿ ಲೋಕಸಭಾ ಕ್ಷೇತ್ರದ ದಕ್ಷಿಣ ವಿಧಾನಸಭೆಯಿಂದ ಬಂದವರು. ಲಾಲ್‌ಚಂದ್ ಕುಶ್ವಾಹ ಕ್ಯಾಂಟ್ ವಿಧಾನಸಭಾ ಕ್ಷೇತ್ರದಿಂದ ಬಂದು ಒಬಿಸಿ ಸಮುದಾಯಕ್ಕೆ ಸೇರಿದವರಾಗಿದ್ದರೆ, ದಲಿತ ಸಮುದಾಯದಿಂದ ಬಂದ ಸಂಜಯ್ ಸೋಂಕರ್ ಉತ್ತರ ವಿಧಾನಸಭಾ ಕ್ಷೇತ್ರದಿಂದ ಸೂಚಕರಾಗಿ ಬಂದಿದ್ದರು. ಅವರೂ ಪಕ್ಷದೊಂದಿಗೆ ಬಹಳ ಕಾಲದಿಂದ ನಂಟು ಹೊಂದಿದ್ದಾರೆ.

ಪ್ರಧಾನಮಂತ್ರಿಗಳ ಸೂಚಕರು ಬ್ರಾಹ್ಮಣ, ಒಬಿಸಿ ಮತ್ತು ದಲಿತ ವರ್ಗದವರಾಗಿದ್ದು, ಈ ಎಲ್ಲ ವರ್ಗದ ಮತದಾರರನ್ನು ಸೆಳೆಯುವ ಬಿಜೆಪಿಯ ಪ್ರಯತ್ನವಾಗಿಯೂ ನೋಡಲಾಗುತ್ತಿದೆ. ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಬ್ರಾಹ್ಮಣರು, 2.5 ಲಕ್ಷಕ್ಕೂ ಹೆಚ್ಚು ಒಬಿಸಿಗಳು, ಸುಮಾರು 1.25 ಲಕ್ಷ ದಲಿತ ಮತದಾರರಿರುವುದು ಗಮನಾರ್ಹ.

ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು ಪಡೆ ವಾರಾಣಸಿಯ ಬನಾರಸ್ ಲೋಕೋಮೋಟಿವ್ ವರ್ಕ್‌ಶಾಪ್ ಅತಿಥಿ ಗೃಹದಿಂದ ಬೆಳಗ್ಗೆ 8:30 ಕ್ಕೆ ಹೊರಟು ನಿಗದಿತ ಮಾರ್ಗದ ಮೂಲಕ ಗಂಗಾ ಪೂಜೆಗಾಗಿ ದಶಾಶ್ವಮೇಧ ಘಾಟ್‌ಗೆ ತಲುಪಿತು. ಇಲ್ಲಿ ಪ್ರಧಾನಿ ಮೋದಿ ಅವರು ಗಂಗಾ ಮಾತೆಗೆ ಪೂಜೆ ಸಲ್ಲಿಸಿದರು. ಗಂಗಾಮಾತೆಯ ಆಶೀರ್ವಾದ ಪಡೆದ ನಂತರ ಪ್ರಧಾನಿ ಮೋದಿ ಇಲ್ಲಿಂದ ವಿಹಾರದ ಮೂಲಕ ಕಾಲ ಭೈರವ ದೇವಾಲಯಕ್ಕೆ ತೆರಳಿದರು. ಅಲ್ಲಿ ಪ್ರಧಾನಿ ಅವರು ಕಾಲ ಭೈರವ ದೇವಾಲಯದಲ್ಲಿ ಭೈರವ ಅಷ್ಟಕದೊಂದಿಗೆ ಪೂಜೆ ಸಲ್ಲಿಸಿದ್ದರು. ಬಾಬಾ ಕಾಲ ಭೈರವನ ಆರತಿಯ ನಂತರ ಅವರು ನಾಮಪತ್ರ ಸಲ್ಲಿಸಲು ತೆರಳಿದ್ದರು. ಪ್ರಧಾನಿ ಮೋದಿ ಅವರು ಡಿಎಂ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಅವರ ಜೊತೆ ಅರ್ಚಕರೊಬ್ಬರಿದ್ದರು.

ಪುಷ್ಯ ನತ್ರಾಕ್ಷ ಮತ್ತು ಗಂಗಾ ಸಪ್ತಮಿಯ ಮಹತ್ವ ಈ ಕುರಿತು ಜ್ಯೋತಿಷಿ ಪಂಡಿತ್​ ರಿಷಿ ದ್ವಿವೇದಿ ಅವರು, ಪ್ರಧಾನಿ ನರೇಂದ್ರ ಮೋದಿಯವರು ಈ ದಿನವನ್ನು ಆಯ್ಕೆ ಮಾಡಿದ್ದಾರೆ. ಅದು ಗಂಗಾ ಸಪ್ತಮಿಯ ಪವಿತ್ರ ದಿನವನ್ನು ಗಂಗಾ ಮಾತೆಯ ಉಗಮದ ದಿನವೆಂದು ಪರಿಗಣಿಸಲಾಗಿದೆ. ಗಂಗಾಮಾತೆ ಸ್ವರ್ಗವನ್ನು ತೊರೆದು ಈ ದಿನ ಭೂಮಿಗೆ ಬಂದಳು ಮತ್ತು ಅವಳ ವೇಗವನ್ನು ನಿಯಂತ್ರಿಸಲು ಭಗವಾನ್ ಭೋಲೇನಾಥನು ತನ್ನ ಶಕ್ತಿಯಿಂದ ಅವಳನ್ನು ತಡೆದನು ಎಂದು ಮಾಹಿತಿ ನೀಡಿದರು.

ವೈಶಾಖ ಶುಕ್ಲ ಸಪ್ತಮಿಯನ್ನು ಸ್ವತಃ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಈ ದಿನವನ್ನು ಕಾಶಿಯಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ. ಈ ಬಾರಿ ನಕ್ಷತ್ರ ರಾಜ ಪುಷ್ಯ ಸಹಿತ ಸರ್ವಾರ್ಥ ಸಿದ್ಧಿ ಯೋಗದ ಕಾಕತಾಳೀಯ ಇದೆ. ಈ ಎಲ್ಲಾ ಶುಭ ಯೋಗಗಳ ಸಮಯ 11:40 ರಿಂದ 12:30ರ ವರೆಗೆ ಇದೆ. ಅದು ಅತ್ಯಂತ ಮಂಗಳಕರ ಸಮಯ. ಎಲ್ಲಾ ಕಾರ್ಯಗಳನ್ನು ಸಾಧಿಸಲು ಇದು ಶುಭ ಸಮಯ. ಆದ್ದರಿಂದ ಈ ಸಮಯದಲ್ಲಿ ಪ್ರಧಾನಿ ತಮ್ಮ ನಾಮಪತ್ರ ಸಲ್ಲಿಸಿದರು ಎಂದು ಹೇಳಿದರು.

12 ರಾಜ್ಯಗಳ ಮುಖ್ಯಮಂತ್ರಿಗಳೂ ಭಾಗಿ: ಪ್ರಧಾನಿ ಮೋದಿ ನಾಮಪತ್ರ ಸಲ್ಲಿಸುವ ವೇಳೆ 12 ರಾಜ್ಯಗಳ ಸಿಎಂಗಳು ಸೇರಿದ್ದರು. ಇವರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ರಾಜಸ್ಥಾನ, ಅಸ್ಸೋಂ, ಹರಿಯಾಣ, ಗೋವಾ, ಸಿಕ್ಕೀಂ, ತ್ರಿಪುರಾ ಮುಖ್ಯಮಂತ್ರಿಗಳು ಸಹ ಭಾಗಿಯಾಗಿದ್ದರು. ಚಿರಾಗ್ ಪಾಸ್ವಾನ್ ಸೇರಿದಂತೆ ಹಲವು ನಾಯಕರು ಪ್ರಧಾನಿಯವರೊಂದಿಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಾಣಸಿಯಲ್ಲಿ (ಏಳನೇ ಹಂತ) ಜೂನ್ 1 ರಂದು ಮತದಾನ ನಡೆಯಲಿದೆ. ಈ ಬಾರಿಯೂ ವಾರಾಣಸಿಯಿಂದ ಗೆದ್ದು ಹ್ಯಾಟ್ರಿಕ್ ಗೆಲುವು ಸಾಧಿಸುವ ಭರವಸೆಯನ್ನು ಪ್ರಧಾನಿ ಮೋದಿ ಹೊಂದಿದ್ದಾರೆ. ಈ ಕ್ರಮದಲ್ಲಿ ಪ್ರಧಾನಿ ಮೋದಿ ಪರವಾಗಿ ಬಿಜೆಪಿಯ ಪದಾಧಿಕಾರಿಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷವೂ ಪ್ರಧಾನಿ ಮೋದಿ ವಿರುದ್ಧ ಪ್ರಬಲ ಅಭ್ಯರ್ಥಿಯಾಗಿರುವ ಅಜಯ್ ರಾಯ್ ಅವರನ್ನು ಕಣಕ್ಕಿಳಿಸಿದೆ. ಹೇಗಾದರೂ ಮಾಡಿ ವಾರಾಣಸಿಯಲ್ಲಿ ತನ್ನ ಶಕ್ತಿ ತೋರಿಸಲು ಕೈ ಪಕ್ಷ ತೀವ್ರ ಪ್ರಯತ್ನ ನಡೆಸುತ್ತಿದೆ.

ಓದಿ: ಪರಿಷತ್‌ ಚುನಾವಣೆ: ಪಕ್ಷೇತರರಾಗಿ ಸ್ಪರ್ಧಿಸಲು ರಘುಪತಿ ಭಟ್ ನಿರ್ಧಾರ - Raghupathi Bhat

Last Updated : May 14, 2024, 2:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.