ETV Bharat / bharat

ಇಂದು ಮೋದಿ 'ಪರೀಕ್ಷಾ ಪೇ ಚರ್ಚಾ': 2.25 ಕೋಟಿ ವಿದ್ಯಾರ್ಥಿಗಳ ನೋಂದಣಿ

author img

By PTI

Published : Jan 29, 2024, 8:36 AM IST

ವಿದ್ಯಾರ್ಥಿಗಳಿಗೆ ಪರೀಕ್ಷೆ ಬಗ್ಗೆ ಸಲಹೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರಿಂದ 2024ರ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮ ಇಂದು (ಜನವರಿ 29ರಂದು) ಬೆಳಿಗ್ಗೆ 11ಕ್ಕೆ ನಡೆಯಲಿದೆ.

Pariksha Pe Charcha 2024  ವಿದ್ಯಾರ್ಥಿಗಳ 2 ಕೋಟಿಗೂ ಹೆಚ್ಚು ನೋಂದಣಿ  ಪರೀಕ್ಷಾ ಪೇ ಚರ್ಚಾ  ಪರೀಕ್ಷಾ ಪೇ ಚರ್ಚಾ 2024  ಪ್ರಧಾನಿ ನರೇಂದ್ರ ಮೋದಿ  Prime Minister Narendra Modi
'ಪರೀಕ್ಷಾ ಪೇ ಚರ್ಚಾ 2024' ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳ 2.25 ಕೋಟಿ ನೋಂದಣಿ: ಪ್ರಧಾನಿ ಮೋದಿ

ನವದೆಹಲಿ: ದೇಶಾದ್ಯಂತ 10 ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷಾ ಒತ್ತಡ ಕಡಿಮೆ ಮಾಡಲು ಪ್ರಧಾನಿ ನರೇಂದ್ರ ಮೋದಿ 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇಂದು ಬೆಳಿಗ್ಗೆ ದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಪ್ರಧಾನಿ ಸಂವಾದ ನಡೆಸಲಿದ್ದಾರೆ. ಇದು 7ನೇ 'ಪರೀಕ್ಷೆ ಪೇ ಚರ್ಚಾ' ಕಾರ್ಯಕ್ರಮವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ, 'ನಾನು ಪರೀಕ್ಷಾ ಪೇ ಚರ್ಚೆಗಾಗಿ ತುಂಬಾ ಉತ್ಸುಕನಾಗಿದ್ದೇನೆ. ಜನವರಿ 29ರಂದು ಬೆಳಿಗ್ಗೆ 11 ಗಂಟೆಗೆ ಪರೀಕ್ಷೆಯ ಒತ್ತಡ ನಿವಾರಿಸುವ ಮಾರ್ಗಗಳ ಕುರಿತು ನಡೆಯುವ ಸಂವಾದವನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ. ಪರೀಕ್ಷೆಯ ನಿರಾಸೆಗಳನ್ನು ಅವಕಾಶಗಳ ಕಿಟಿಕಿಗಳಾಗಿ ಪರಿವರ್ತಿಸೋಣ' ಎಂದು ಬರೆದುಕೊಂಡಿದ್ದಾರೆ.

  • 29th January 11 AM!

    I am eagerly looking forward to the most memorable gathering of #ExamWarriors, 'Pariksha Pe Charcha', to collectively strategise on ways to beat exam stress.

    Let's turn those exam blues into a window of opportunities… https://t.co/FfUWNAYvPB

    — Narendra Modi (@narendramodi) January 27, 2024 " class="align-text-top noRightClick twitterSection" data=" ">

ಇದರ ಜೊತೆಗೆ, ಇನ್‌ಸ್ಟಾಗ್ರಾಮ್‌ನಲ್ಲಿ ಲಿಂಕ್ ಹಂಚಿಕೊಂಡಿದ್ದು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗೆ ವಿವಿಧ ಪ್ರಮುಖ ಸಲಹೆಗಳನ್ನು ನೀಡಲಾಗಿದೆ. ಲಿಂಕ್ ಕ್ಲಿಕ್ ಮಾಡಿದರೆ https://www.narendramodi.in/parikshapecharcha ವೆಬ್‌ಸೈಟ್ ತೆರೆಯುತ್ತದೆ. ವೆಬ್​ಸೈಟ್​ನ ಮುಖಪುಟದಲ್ಲಿ ವಿಡಿಯೋ, ಫೋಟೋ ಮತ್ತು ಪಠ್ಯದ ಮೂಲಕ ಸಲಹೆಗಳನ್ನು ನೀಡಲಾಗಿದೆ.

ಪರೀಕ್ಷಾ ಪೇ ಚರ್ಚಾ- ವೀಕ್ಷಿಸುವುದು ಹೇಗೆ?: ಕಾರ್ಯಕ್ರಮವನ್ನು ಡಿಡಿ ನ್ಯಾಷನಲ್, ಡಿಡಿ ನ್ಯೂಸ್, ಡಿಡಿ ಇಂಡಿಯಾ, ಪ್ರಮುಖ ಖಾಸಗಿ ವಾಹಿನಿಗಳು ಹಾಗೂ ಪ್ರಧಾನಿ ಮೋದಿಯವರ ಯೂಟ್ಯೂಬ್ ಚಾನೆಲ್ @Narendra Modiನಲ್ಲಿ ಬೆಳಿಗ್ಗೆ 11ಕ್ಕೆ ನೇರಪ್ರಸಾರದಲ್ಲಿ ವೀಕ್ಷಿಸಬಹುದು.

ಪ್ರಸ್ತುತ 7ನೇ ಆವೃತ್ತಿಯಲ್ಲಿ MyGov ಪೋರ್ಟಲ್‌ನಲ್ಲಿ 2.25 ಕೋಟಿ ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಹೊರತಾಗಿ, 14.93 ಲಕ್ಷ ಶಿಕ್ಷಕರು ಮತ್ತು 5.69 ಲಕ್ಷ ಪೋಷಕರು ಈ ಕಾರ್ಯಕ್ರಮಕ್ಕಾಗಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿದ್ದಾರೆ.

ಇದನ್ನೂ ಓದಿ: ಶ್ರೀರಾಮನ ಆಡಳಿತ ಸಂವಿಧಾನ ರಚನೆಗೆ ಸ್ಫೂರ್ತಿಯಾಗಿತ್ತು: ಮನ್ ಕಿ ಬಾತ್​ನಲ್ಲಿ ಪ್ರಧಾನಿ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.