ETV Bharat / bharat

ಧರ್ಮ ಮರೆಮಾಚಿ ಪ್ರೀತಿಯ ನಾಟಕವಾಡಿ ಅತ್ಯಾಚಾರ ಆರೋಪ: ಯುವತಿಯಿಂದ ದೂರು - PILIBHIT GIRL RAPE CASE

ಧರ್ಮ ಮರೆಮಾಚಿ ಪ್ರೀತಿಯ ನಾಟಕವಾಡಿ ಯುವತಿಯ ಮೇಲೆ ಅತ್ಯಾಚಾರವೆಸಗಿದ ಆರೋಪ ಉತ್ತರ ಪ್ರದೇಶದ ಫಿಲಿಬಿತ್​ನಲ್ಲಿ ಕೇಳಿಬಂದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Oct 18, 2024, 5:18 PM IST

ಪಿಲಿಭಿತ್(ಉತ್ತರ ಪ್ರದೇಶ): ಯುವಕನೊಬ್ಬ ತನ್ನ ಧರ್ಮದ ಬಗ್ಗೆ ಸುಳ್ಳು ಹೇಳಿ ಯುವತಿಯೊಂದಿಗೆ ಪ್ರೀತಿಯ ನಾಟಕವಾಡಿ, ಅತ್ಯಾಚಾರ ಎಸಗಿರುವ ಆರೋಪ ಉತ್ತರ ಪ್ರದೇಶದ ಪಿಲಿಭಿಟ್ ಜಿಲ್ಲೆಯಲ್ಲಿ ಕೇಳಿಬಂದಿದೆ. ಯುವತಿಯ ದೂರಿನ ಆಧಾರದ ಮೇಲೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಇಂಥ ಘಟನೆಗಳು ಪದೇ ಪದೆ ನಡೆಯುತ್ತಿರುವುದು ಆತಂಕ ಮೂಡಿಸಿದೆ.

ಪ್ರಕರಣದ ಪೂರ್ಣ ವಿವರ: ಸುನಗಢಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರ ನಿವಾಸಿಯಾಗಿರುವ ಯುವತಿಯು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ- 'ರಾಹುಲ್' ಎಂಬ ಯುವಕ ಆಕೆಗೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದಾನೆ. ನಂತರ ಹೋಳಿ ಹಬ್ಬದ ಸಂದರ್ಭದಲ್ಲಿ ಯುವತಿಯನ್ನು ಭೇಟಿಯಾಗಲು ಆತ ಫಿಲಿಬಿತ್​ಗೆ ಆಗಮಿಸಿದ್ದಾನೆ.

ಸುನಗಢಿ ಪೊಲೀಸ್ ಠಾಣೆ
ಸುನಗಢಿ ಪೊಲೀಸ್ ಠಾಣೆ (ETV Bharat)

ಈ ಸಂದರ್ಭದಲ್ಲಿ ಕೆಫೆಯೊಂದಕ್ಕೆ ಕರೆದೊಯ್ದು ಯುವಕ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಹಾಗೂ ಈ ಸಂದರ್ಭದಲ್ಲಿ ವೀಡಿಯೊ ಕೂಡ ಮಾಡಿಕೊಂಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ನಡೆದದ್ದನ್ನು ಯಾರಿಗಾದರೂ ಹೇಳಿದರೆ ವೀಡಿಯೊ ವೈರಲ್ ಮಾಡುವುದಾಗಿ ಯುವತಿಗೆ ಆತ ಬೆದರಿಕೆ ಹಾಕಿದ್ದಾನೆ.

ಇದರ ನಂತರ ಅನೇಕ ಬಾರಿ ಆತ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಕ್ಟೋಬರ್ 13ರಂದು ಯುವಕ ಮತ್ತೊಮ್ಮೆ ಯುವತಿಯನ್ನು ಭೇಟಿಯಾಗಲು ಬಂದಿದ್ದಾನೆ. ಈ ಸಂದರ್ಭದಲ್ಲಿ ಅತ್ಯಾಚಾರಕ್ಕೆ ಪ್ರತಿರೋಧ ಒಡ್ಡಿದಾಗ ಆತ ಯುವತಿಗೆ ಹೊಡೆದಿದ್ದಾನೆ. ಅಲ್ಲದೆ ಕುತ್ತಿಗೆ ಹಿಸುಕುವ ಪ್ರಯತ್ನವನ್ನೂ ಮಾಡಿದ್ದಾನೆ. ಈ ಸಂದರ್ಭದಲ್ಲಿ ಆತ ತನ್ನ ನಿಜ ಹೆಸರು 'ಜಾವೇದ್' ಎಂದು ಹೇಳಿರುವುದಾಗಿ ತಿಳಿಸಿರುವ ಯುವತಿ, ತನ್ನನ್ನು ಧರ್ಮಪರಿವರ್ತನೆಯಾಗುವಂತೆಯೂ ಒತ್ತಾಯಿಸಿದ್ದಾನೆ ಎಂದು ಆರೋಪಿಸಿದ್ದಾಳೆ. ಧರ್ಮಪರಿವರ್ತನೆ ಆಗದಿದ್ದರೆ ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.

ಇಷ್ಟೆಲ್ಲ ಆದ ನಂತರ ಯುವತಿಯು ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಶೀಘ್ರದಲ್ಲೇ ಯುವಕನನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಸುನಗಢಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಪವನ ಕುಮಾರ ಪಾಂಡೆ ತಿಳಿಸಿದ್ದಾರೆ.

ಇದನ್ನೂ ಓದಿ: ವೈಯಕ್ತಿಕ ಕಾನೂನುಗಳು ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.