ETV Bharat / bharat

ಲೋಕಸಭೆಗೆ ಇಂದು 4ನೇ ಹಂತದ ಮತದಾನ: ಕ್ಷೇತ್ರಗಳು, ಅಭ್ಯರ್ಥಿಗಳ ಪೂರ್ಣ ವಿವರ - Lok Sabha Election

ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಇಂದು ನಡೆಯಲಿದೆ. 1717 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಲೋಕಸಭೆಗೆ ನಾಳೆ 4ನೇ ಹಂತದ ಮತದಾನ
ಲೋಕಸಭೆಗೆ ನಾಳೆ 4ನೇ ಹಂತದ ಮತದಾನ (Etv Bharat)
author img

By ETV Bharat Karnataka Team

Published : May 12, 2024, 8:00 PM IST

Updated : May 13, 2024, 6:19 AM IST

ನವದೆಹಲಿ: ಲೋಕಸಭೆಗೆ ಇಂದು 4ನೇ ಹಂತದ ಮತದಾನ ನಡೆಯಲಿದೆ. ಎರಡು ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿ ಒಟ್ಟು 9 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶದ 96 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

Phase 4 Lok Sabha Election 2024: Battlefront Moves to Andhra, Telangana
ಹಂತ 4 ಲೋಕಸಭೆ ಚುನಾವಣೆ 2024 (ETV Bharat Graphics)

ಮೂರು ಹಂತಗಳ ಮತದಾನದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬೆನ್ನಲ್ಲೇ, ನಾಲ್ಕನೇ ಹಂತದ ಮತದಾನವೂ ನಿರೀಕ್ಷೆ ಹುಟ್ಟಿಸಿದೆ. ಕಣದಲ್ಲಿ 1717 ಅಭ್ಯರ್ಥಿಗಳು ಉಳಿದಿದ್ದು, ಎಲ್ಲರ ಹಣೆಬರಹವನ್ನು ಮತದಾರ ಬರೆಯಲಿದ್ದಾನೆ. ಇದರಲ್ಲಿ 1547 ಪುರುಷ, 170 ಮಹಿಳಾ ಅಭ್ಯರ್ಥಿಗಳಿದ್ದಾರೆ.

4ನೇ ಹಂತದ ಮತದಾನದಲ್ಲಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು ಇವರು:

ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷ: ಅಖಿಲೇಶ್ ಯಾದವ್ ಅವರು ಉತ್ತರಪ್ರದೇಶದ ಕನೌಜ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಬಿಜೆಪಿಯು ಸುಬ್ರತ್​ ಪಾಠಕ್​ ಅವರನ್ನು ಕಣಕ್ಕಿಳಿಸಿದೆ. ಈ ಸ್ಥಾನವು 1998 ರಿಂದ ಎಸ್​ಪಿಯ ಭದ್ರಕೋಟೆಯಾಗಿತ್ತು. 2019 ರಲ್ಲಿ ಅಖಿಲೇಶ್​ ಯಾದವ್​ ಅವರ ಪತ್ನಿ ಡಿಂಪಲ್​ ಯಾದವ್​ ಸೋಲು ಕಂಡಿದ್ದರು.

ಅಧೀರ್ ರಂಜನ್ ಚೌಧರಿ, ಪಶ್ವಿಮ ಬಂಗಾಳ ಕಾಂಗ್ರೆಸ್ ಮುಖ್ಯಸ್ಥ; ಪಶ್ಚಿಮಬಂಗಾಳ ಕಾಂಗ್ರೆಸ್​ ಮುಖ್ಯಸ್ಥ ಅಧೀರ್ ರಂಜನ್ ಚೌಧರಿ ಅವರು ಬಹರಂಪುರ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಇವರ ವಿರುದ್ಧ ಟಿಎಂಸಿಯು ಕ್ರಿಕೆಟಿಗ ಯೂಸುಫ್ ಪಠಾಣ್ ಅವರನ್ನು ಕಣಕ್ಕಿಳಿಸಿದೆ. ಬಿಜೆಪಿಯ ನಿರ್ಮಲ್ ಚಂದ್ರ ಸಹಾ ಕೂಡ ಎದುರಾಳಿಯಾಗಿದ್ದಾರೆ.

ಮಹುವಾ ಮೊಯಿತ್ರಾ, ಕೃಷ್ಣನಗರ: ಸಂಸತ್​ನಲ್ಲಿ ಪ್ರಶ್ನೆಗಾಗಿ ಹಣ ಪಡೆದ ಆರೋಪ ಹೊತ್ತಿರುವ ಸಂಸದೆ ಮಹುವಾ ಮೊಯಿತ್ರಾ ಅವರು ಕೃಷ್ಣನಗರ ಕ್ಷೇತ್ರದಿಂದ ಕಣದಲ್ಲಿದ್ದಾರೆ. ಟಿಎಂಸಿ ನಾಯಕಿ ವಿರುದ್ಧ ರಾಜ ಕುಟುಂಬದ ಅಮೃತಾ ರಾಯ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ಅಸಾದುದ್ದೀನ್ ಓವೈಸಿ, ಹೈದರಾಬಾದ್: 4ನೇ ಹಂತದಲ್ಲಿ ಗಮನಸೆಳೆದ ಕ್ಷೇತ್ರಗಳಲ್ಲಿ ಹೈದರಾಬಾದ್ ಲೋಕಸಭಾ ಕ್ಷೇತ್ರವೂ ಒಂದು. 2004 ರಿಂದ ಅಸಾದುದ್ದೀನ್ ಓವೈಸಿ ಇಲ್ಲಿಂದ ಗೆದ್ದು ಬರುತ್ತಿದ್ದಾರೆ. ಅದಕ್ಕೂ ಮೊದಲು ಅವರ ತಂದೆ ಸುಲ್ತಾನ್ ಸಲಾವುದ್ದೀನ್ ಓವೈಸಿ 1984 ರಿಂದ ಪ್ರತಿನಿಧಿಸಿದ್ದರು. ಬಿಜೆಪಿಯಿಂದ ಸಾಮಾಜಿಕ ಕಾರ್ಯಕರ್ತೆ, ಪ್ರಖರ ಹಿಂದುವಾದಿ ಮಾಧವಿ ಲತಾ ಅವರು ಕಣಕ್ಕಿಳಿದಿದ್ದಾರೆ.

ವೈಎಸ್ ಶರ್ಮಿಳಾ, ಕಡಪ: ಮಾಜಿ ಸಿಎಂ ವೈಎಸ್ ರಾಜಶೇಖರ್​ ರೆಡ್ಡಿ ಅವರ ಕುಟುಂಬದ ವೈಎಸ್​ ಶರ್ಮಿಳಾ ಕಡಪ ಲೋಕಸಭೆ ಕ್ಷೇತ್ರದಿಂದ ಸ್ಪರ್ಧೆಯಲ್ಲಿದ್ದಾರೆ. ಆಂಧ್ರಪ್ರದೇಶದ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆಯಾಗಿರುವ ಶರ್ಮಿಳಾ ರೆಡ್ಡಿ, ವೈಎಸ್‌ಆರ್‌ಸಿಪಿ ಸಂಸದ ವೈಎಸ್ ಅವಿನಾಶ್ ರೆಡ್ಡಿ ವಿರುದ್ಧ ಕಣಕ್ಕಿಳಿದಿದ್ದಾರೆ.

ಯಾವ ರಾಜ್ಯದಲ್ಲಿ ಎಷ್ಟು ಕ್ಷೇತ್ರಗಳಿಗೆ ಮತದಾನ:

ಆಂಧ್ರಪ್ರದೇಶ: 25 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. (ಅರಕು, ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣಂ, ಅನಕಾಪಲ್ಲಿ, ಕಾಕಿನಾಡ, ಅಮಲಾಪುರಂ, ರಾಜಮಂಡ್ರಿ, ನರಸಪುರಂ, ಏಲೂರು, ಮಚಲಿಪಟ್ಟಣಂ, ವಿಜಯವಾಡ, ಗುಂಟೂರು, ನರಸರಾವ್‌ಪೇಟೆ, ಬಾಪಟ್ಲ, ಓಂಗೋಲ್, ನಂದ್ಯಾಲ್, ಕರ್ನೂಲ್, ಅನಂತಪುರ, ಹಿಂದೂಪುರ, ಕಡಪ, ನೆಲ್ಲೂರು, ತಿರುಪತಿ, ರಾಜಂಪೇಟ್​, ಚಿತ್ತೂರ್)

ಬಿಹಾರ: 40 ಸ್ಥಾನಗಳಲ್ಲಿ ಐದಕ್ಕೆ ಮತದಾನ (ದರ್ಬಂಗಾ, ಉಜಿಯಾರ್ಪುರ್, ಸಮಸ್ತಿಪುರ್, ಬೇಗುಸರೈ, ಮುಂಗೇರ್)

ಜಾರ್ಖಂಡ್: 14 ಸ್ಥಾನಗಳಲ್ಲಿ 4ಕ್ಕೆ ಮತದಾನ (ಸಿಂಗಭುಂ, ಖುಂತಿ, ಲೋಹರ್ದಗಾ, ಪಲಮು)

ಮಧ್ಯಪ್ರದೇಶ: 29 ಸ್ಥಾನಗಳಲ್ಲಿ 8ಕ್ಕೆ ವೋಟಿಂಗ್​ (ದೇವಾಸ್, ಉಜ್ಜಯಿನಿ, ಮಂದಸೌರ್, ರತ್ಲಂ, ಧಾರ್, ಇಂದೋರ್, ಖಾರ್ಗೋನೆ, ಖಾಂಡ್ವಾ)

ಮಹಾರಾಷ್ಟ್ರ: 48 ಸ್ಥಾನಗಳಲ್ಲಿ 11ಕ್ಕೆ ಮತದಾನ (ನಂದೂರ್ಬಾರ್, ಜಲಗಾಂವ್, ರೇವರ್, ಜಲ್ನಾ, ಔರಂಗಾಬಾದ್, ಮಾವಲ್, ಪುಣೆ, ಶಿರೂರ್, ಅಹಮದ್ನಗರ, ಶಿರಡಿ, ಬೀಡ್)

ಒಡಿಶಾ: 21 ಕ್ಷೇತ್ರಗಳಲ್ಲಿ 4 ಕ್ಕೆ ವೋಟಿಂಗ್​ (ನಬರಂಗಪುರ, ಬೆರ್ಹಾಂಪುರ, ಕೊರಾಪುಟ್, ಕಲಹಂಡಿ)

ತೆಲಂಗಾಣ: ಎಲ್ಲ 17 ಸ್ಥಾನಗಳಲ್ಲಿ ಮತದಾನ (ಅದಿಲಾಬಾದ್, ಪೆದ್ದಪಲ್ಲೆ, ಕರೀಂನಗರ, ನಿಜಾಮಾಬಾದ್, ಜಹೀರಾಬಾದ್, ಮೇದಕ್, ಮಲ್ಕಾಜ್‌ಗಿರಿ, ಸಿಕಂದರಾಬಾದ್, ಹೈದರಾಬಾದ್, ಚೆವೆಲ್ಲಾ, ಮಹೆಬೂಬ್‌ನಗರ, ನಾಗರ್‌ಕರ್ನೂಲ್, ನಲ್ಗೊಂಡ, ಭೋಂಗಿರ್, ವಾರಂಗಲ್, ಮಹಬೂದಾಬಾದ್, ಖಮ್ಮಂ)

ಉತ್ತರ ಪ್ರದೇಶ: 80 ಸ್ಥಾನಗಳಲ್ಲಿ 13ಕ್ಕೆ ವೋಟಿಂಗ್​ (ಶಹಜಹಾನ್‌ಪುರ್, ಖೇರಿ, ಧೌರಾಹ್ರಾ, ಸೀತಾಪುರ್, ಹರ್ದೋಯಿ, ಮಿಶ್ರಿಖ್, ಉನ್ನಾವೋ, ಫರುಕಾಬಾದ್, ಇಟಾವಾ, ಕನೌಜ್, ಕಾನ್ಪುರ್, ಅಕ್ಬರ್‌ಪುರ್, ಬಹ್ರೈಚ್)

ಪಶ್ಚಿಮ ಬಂಗಾಳ: 42 ಸ್ಥಾನಗಳಲ್ಲಿ 8 (ಬಹರಂಪುರ, ಕೃಷ್ಣನಗರ, ರಾಣಾಘಾಟ್, ಬರ್ಧಮಾನ್ ಪುರ್ಬಾ, ಬುರ್ದ್ವಾನ್-ದುರ್ಗಾಪುರ, ಅಸನ್ಸೋಲ್, ಬೋಲ್ಪುರ್, ಬಿರ್ಭುಮ್)

ಜಮ್ಮು ಮತ್ತು ಕಾಶ್ಮೀರ: 5 ಸ್ಥಾನಗಳಲ್ಲಿ 1 ಕ್ಕೆ ಮತದಾನ (ಶ್ರೀನಗರ)

ಅತಿಹೆಚ್ಚು, ಕಡಿಮೆ ಅಭ್ಯರ್ಥಿಗಳಿರುವ ಕ್ಷೇತ್ರ: ತೆಲಂಗಾಣದ ಸಿಕಂದರಾಬಾದ್​ ಲೋಕಸಭಾ ಕ್ಷೇತ್ರದಲ್ಲಿ 45 ಅಭ್ಯರ್ಥಿಗಳು ಕಣದಲ್ಲಿದ್ದು, ಅತಿ ಹೆಚ್ಚು ಸ್ಪರ್ಧಿಗಳಿರುವ ಕ್ಷೇತ್ರವಾಗಿದೆ. ಒಡಿಶಾದ ನಬರಂಗಪುರ ಲೋಕಸಭಾ ಕ್ಷೇತ್ರದಲ್ಲಿ ಕಡಿಮೆ ಅಂದರೆ 4 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಇದನ್ನೂ ಓದಿ: ಮುಂದಿನ 5 ವರ್ಷ ಮೋದಿಯೇ ಪ್ರಧಾನಿ: ಕೇಜ್ರಿವಾಲ್​ '75ರ' ಹೇಳಿಕೆಗೆ ಅಮಿತ್​ ಶಾ ಸ್ಪಷ್ಟನೆ - Amit Shah

Last Updated : May 13, 2024, 6:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.