ETV Bharat / bharat

ಹೊರಗೆ ಪೇಪರ್ ಸೋರಿಕೆ, ಸಂಸತ್ತಿನೊಳಗೆ ಮಳೆ ನೀರು ಸೋರಿಕೆ: ಕಾಂಗ್ರೆಸ್​ ಟೀಕೆ - Water Leakage In Parliament - WATER LEAKAGE IN PARLIAMENT

ದೆಹಲಿಯಲ್ಲಿ ಬುಧವಾರ ಸುರಿದ ಭಾರೀ ಮಳೆಗೆ ನೂತನ ಸಂಸತ್ ಕಟ್ಟಡದಲ್ಲಿ ನೀರು ಸೋರಿಕೆಯಾಗಿದೆ. ಇದನ್ನು ಕಾಂಗ್ರೆಸ್​ ಟೀಕಿಸಿದೆ.

ಹೊಸ ಸಂಸತ್​ ಭವನದ ಮೊಗಸಾಲೆಯಲ್ಲಿ ಮಳೆ ನೀರು ಸೋರಿಕೆ
ಹೊಸ ಸಂಸತ್​ ಭವನದ ಮೊಗಸಾಲೆಯಲ್ಲಿ ಮಳೆ ನೀರು ಸೋರಿಕೆ (X@manickamtagore)
author img

By ETV Bharat Karnataka Team

Published : Aug 1, 2024, 3:52 PM IST

ನವದೆಹಲಿ: ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಟ್ಟಿಸಿರುವ ನೂತನ ಭವ್ಯ ಸಂಸತ್​ ಭವನದ ಒಂದು ಭಾಗದಲ್ಲಿ ಮಳೆ ನೀರು ಸೋರಿಕೆಯಾಗುತ್ತಿದೆ. ಸಂಸತ್​ ಪ್ರವೇಶ ದ್ವಾರದ ಮುಂಭಾಗದ ಮೊಗಸಾಲೆಯ ಮಧ್ಯಭಾಗದಲ್ಲಿ ನೀರು ಜಿನುಗುತ್ತಿದೆ. ಇದರ ವಿಡಿಯೋವನ್ನು ಕಾಂಗ್ರೆಸ್​ ಸಂಸದ ಮಾಣಿಕ್ಕಂ ಠಾಗೋರ್ 'ಎಕ್ಸ್'​ ಖಾತೆಯಲ್ಲಿ ಹಂಚಿಕೊಂಡಿದ್ದು, ಅಧಿವೇಶನವನ್ನು ಮುಂದೂಡಬೇಕು ಎಂದು ನಿರ್ಣಯ ಮಂಡಿಸಿದ್ದಾರೆ.

ಸಂಸತ್​ ಪ್ರವೇಶದ ಬಳಿಕ ಬರುವ ದೊಡ್ಡ ಮೊಗಸಾಲೆಯ (ಲಾಬಿ) ಮಧ್ಯಭಾಗದಲ್ಲಿ ನೀರಿನ ಹನಿಗಳು ಬೀಳುತ್ತಿವೆ. ನೀರನ್ನು ಹಿಡಿಯಲು ಪ್ಲಾಸ್ಟಿಕ್​​ ಬಕೆಟ್​ ಇಡಲಾಗಿದೆ. ಸಂಸತ್​ ಭವನ ಉದ್ಘಾಟನೆಯಾಗಿ ಒಂದು ವರ್ಷ ಕಳೆಯುವ ಮೊದಲೇ ಸೋರುತ್ತಿದೆ ಎಂದು ಕಾಂಗ್ರೆಸ್​ ಟೀಕಿಸಿದೆ.

'ಹೊರಗೆ ಪೇಪರ್ ಸೋರಿಕೆ, ಸಂಸತ್ತಿನೊಳಗೆ ನೀರು ಸೋರಿಕೆ. ರಾಷ್ಟ್ರಪತಿಗಳು ಬರುವ ಸಂಸತ್ತಿನ ಮೊಗಸಾಲೆಯಲ್ಲಿ ಮಳೆ ನೀರು ಸೋರುತ್ತಿದೆ. ಹೊಸ ಸಂಸತ್​ ಕಟ್ಟಡದಲ್ಲಿ ತುರ್ತು ಹವಾಮಾನ ಎಚ್ಚರಿಕೆ ವಹಿಸಬೇಕಿದೆ. ಕಟ್ಟಡ ಉದ್ಘಾಟನೆಯಾದ ಒಂದು ವರ್ಷದಲ್ಲಿ ಇಂತಹ ಅಪಸವ್ಯ ಕಂಡುಬಂದಿದ್ದು, ಅಧಿವೇಶನ ಮುಂದೂಡುವ ಬಗ್ಗೆ ನಿರ್ಣಯ ಮಂಡಿಸಲಾಗುತ್ತಿದೆ' ಎಂದು ಮಾಣಿಕ್ಕಂ ಠಾಗೋರ್ ಬರೆದುಕೊಂಡಿದ್ದಾರೆ.

ಪರಿಶೀಲನಾ ಸಮಿತಿ ರಚಿಸಿ: ಭಾರೀ ಮಳೆಗೆ ದೇಶದ ದೇಗುಲ ಎಂದೇ ಕರೆಯಲಾಗುವ ಸಂಸತ್ತೇ ಸೋರುತ್ತಿರುವುದು ಕಳವಳಕಾರಿ. ಕಟ್ಟಡವನ್ನು ಸಂಪೂರ್ಣವಾಗಿ ಪರಿಶೀಲಿಸಲು ಎಲ್ಲಾ ಪಕ್ಷದ ಸಂಸದರನ್ನು ಒಳಗೊಂಡ ವಿಶೇಷ ಸಮಿತಿ ರಚಿಸಬೇಕು ಎಂದು ಠಾಗೋರ್‌ ಪ್ರಸ್ತಾಪಿಸಿದ್ದಾರೆ.

ಈ ಸಮಿತಿ ಸೋರಿಕೆಯ ಕಾರಣಗಳನ್ನು ಪತ್ತೆ ಮಾಡಿ, ಕಟ್ಟಡದ ವಿನ್ಯಾಸ ಮತ್ತು ಇದರ ಗುಣಮಟ್ಟದ ಬಗ್ಗೆ ಮೌಲ್ಯಮಾಪನ ಮಾಡುತ್ತದೆ. ಅಗತ್ಯ ದುರಸ್ತಿಗೆ ಶಿಫಾರಸು ಮಾಡುತ್ತದೆ. ಸಂಸತ್​​ ಕಟ್ಟಡದ ನಿರ್ವಹಣೆ ಬಗೆಗಿನ ಸತ್ಯಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಮೂಲಕ ಪಾರದರ್ಶಕತೆ ಕಾಪಾಡಬೇಕು ಎಂದು ಸಂಸತ್ತಿನಲ್ಲಿ ಮಂಡಿಸಿದ ನಿರ್ಣಯದ ನೋಟಿಸ್​​ನಲ್ಲಿ ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮೀಸಲಾತಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದಲ್ಲಿ ಉಪವರ್ಗೀಕರಣಕ್ಕೆ ಅನುಮತಿ ಇದೆ - ಸುಪ್ರೀಂ ಕೋರ್ಟ್​ ಮಹತ್ವದ ತೀರ್ಪು - Supreme Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.