ETV Bharat / bharat

ನಡು ರಸ್ತೆಯಲ್ಲೇ ಯುವತಿಗೆ ಕಿಸ್ ಕೊಟ್ಟ ಯುವಕನಿಗೆ ಚಪ್ಪಲಿಯಿಂದ ಹೊಡೆದುಕೊಳ್ಳುವ ಶಿಕ್ಷೆ - Molestations case

author img

By ETV Bharat Karnataka Team

Published : Apr 13, 2024, 8:20 PM IST

Updated : Apr 13, 2024, 10:18 PM IST

ಯುವತಿಗೆ ಕಿರುಕುಳ ನೀಡಿದ ಯುವಕನಿಗೆ ತನ್ನ ಚಪ್ಪಲಿಯಿಂದ ತಾನೇ ಹೊಡೆದುಕೊಳ್ಳುವ ಶಿಕ್ಷೆ ವಿಧಿಸಿದ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.

slipper slap
slipper slap
ಕಿರುಕುಳ ಕೊಟ್ಟ ಯುವಕನಿಗೆ ಚಪ್ಪಲಿಯಿಂದ ಹೊಡೆದುಕೊಳ್ಳುವ ಶಿಕ್ಷೆ

ಮಥುರಾ (ಉತ್ತರ ಪ್ರದೇಶ): ರಸ್ತೆಯಲ್ಲಿ ಚಿಕ್ಕ ಮಕ್ಕಳ ಜೊತೆ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿರುಕುಳ ನೀಡಿದ ಯುವಕನಿಗೆ ಚಪ್ಪಲಿಯಿಂದ 10 ಬಾರಿ ಹೊಡೆದುಕೊಳ್ಳುವ ಶಿಕ್ಷೆ ವಿಧಿಸಿದ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ಕಿರುಕುಳ ನೀಡಿದ ಆರೋಪಿಗೆ ತನ್ನ ತಪ್ಪಿನ ಅರಿವಾಗಲು ತನ್ನದೇ ಚಪ್ಪಲಿಯಿಂದ ಹೊಡೆದುಕೊಳ್ಳುವ ಶಿಕ್ಷೆಯನ್ನು ಪಂಚಾಯಿತಿ ವಿಧಿಸಿದೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಂಗ್ಲಾದೇಶದ ಯುವತಿಯು ಕುಟುಂಬ ಸಮೇತ ಮಥುರಾದ ಗೋವರ್ಧನಕ್ಕೆ ದರ್ಶನಕ್ಕೆಂದು ಬಂದಿದ್ದರು. ಈ ವೇಳೆ ತಮ್ಮ ಕುಟುಂಬದ ಚಿಕ್ಕ ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ನಡೆದುಕೊಂಡು ಹೋಗುತ್ತಿದ್ದಾಗ, ಏಕಾಏಕಿ ಯುವಕ ಓಡಿ ಬಂದಿದ್ದಾನೆ. ಯುವತಿಗೆ ಒತ್ತಾಯಪೂರ್ವಕವಾಗಿ ಕಿಸ್ ಕೊಟ್ಟು ಓಡಿಹೋಗಿದ್ದಾನೆ. ಏಪ್ರಿಲ್ 11ರಂದು ಘಟನೆ ನಡೆದಿದ್ದು, ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಇದು ಸೆರೆಯಾಗಿತ್ತು.

ಯುವತಿಯು ಮನೆಗೆ ತೆರಳಿದ ನಂತರ ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಆ ಬಳಿಕ ಕುಟುಂಬಸ್ಥರು ಹಾಗೂ ಸ್ಥಳೀಯರು ಸಿಸಿಟಿವಿ ಆಧರಿಸಿ ಯುವಕನನ್ನು ಹಿಡಿದು ಪಂಚಾಯಿತಿ ಸೇರಿಸಿದ್ದಾರೆ. ಆ ವೇಳೆ ತನ್ನ ಚಪ್ಪಲಿಯಿಂದ ತಾನೇ ಹೊಡೆದುಕೊಳ್ಳುವಂತೆ ಯುವಕನಿಗೆ ಪಂಚಾಯಿತಿಯು ವಿಚಿತ್ರ ಶಿಕ್ಷೆ ವಿಧಿಸಿದೆ. ಅದರಂತೆ ಯುವಕ ತನಗೇ ತಾನೇ 10 ಬಾರಿ ತನ್ನ ಚಪ್ಪಲಿಯಿಂದ ಹೊಡೆದುಕೊಂಡಿದ್ದಾನೆ. ಜೊತೆಗೆ ಕೈ ಮುಗಿದು ಕ್ಷಮೆ ಕೇಳಿದ್ದಾನೆ. ಇದನ್ನು ಅಲ್ಲೇ ಇದ್ದ ಓರ್ವ ವಿಡಿಯೋ ಮಾಡಿಕೊಂಡಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಪತಿಯ ಕ್ರಿಕೆಟ್​​ ಬೆಟ್ಟಿಂಗ್​ನಿಂದ ಸಾಲಗಾರರ ಕಿರುಕುಳ ಆರೋಪ: ಮನನೊಂದು ಪತ್ನಿ ಆತ್ಮಹತ್ಯೆ - Cricket Betting

ಘಟನೆ ಬಗ್ಗೆ ಪೊಲೀಸರು ಪ್ರತಿಕ್ರಿಯೆ ನೀಡಿದ್ದು, ಸಿಸಿಟಿವಿ ಆಧರಿಸಿ ಆರೋಪಿ ಯುವಕನ ಬಂಧನಕ್ಕೆ ಬಲೆ ಬೀಸಿದ್ದೇವೆ. ಜೊತೆಗೆ ಪಂಚಾಯಿತಿಯು ಆತನಿಗೆ ನೀಡಿದ ಶಿಕ್ಷೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಈ ಕುರಿತು ಕ್ರಮ ಕೈಗೊಳ್ಳುತ್ತೇವೆ. ಇನ್ನು ಯುವತಿಯು ತಮ್ಮ ಮೂಲ ನಿವಾಸಕ್ಕೆ ಈಗಾಗಲೇ ತೆರಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: ಬೆಂಗಳೂರು: ಮಹಿಳೆಯ ಕಾರು ಹಿಂಬಾಲಿಸಿ ಕಿರುಕುಳ; ಇಬ್ಬರು ಪೊಲೀಸರ​ ವಶಕ್ಕೆ - Harassing Case

Last Updated : Apr 13, 2024, 10:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.