ETV Bharat / bharat

ಇಸ್ರೇಲ್​ಗೆ ಶಸ್ತ್ರಾಸ್ತ್ರ ರಫ್ತು ಮಾಡುವ ಕಂಪನಿಗಳ ಲೈಸೆನ್ಸ್​ ರದ್ದು ಕೋರಿದ್ದ ಪಿಐಎಲ್​ ವಜಾ - Arms Export To Israel - ARMS EXPORT TO ISRAEL

ಇಸ್ರೇಲ್​ಗೆ ಶಸ್ತ್ರಾಸ್ತ್ರ ಪೂರೈಸುವ ಕಂಪನಿಗಳ ಲೈಸೆನ್ಸ್​ ರದ್ದು ಮಾಡುವಂತೆ ಕೋರಿದ್ದ ಪಿಐಎಲ್​ ಅನ್ನು ಸುಪ್ರೀಂ ಕೋರ್ಟ್ ಇಂದು​ ವಜಾ ಮಾಡಿದೆ.

ಭಾರತದ ಸುಪ್ರೀಂ ಕೋರ್ಟ್
ಭಾರತದ ಸುಪ್ರೀಂ ಕೋರ್ಟ್ (IANS)
author img

By ETV Bharat Karnataka Team

Published : Sep 9, 2024, 4:08 PM IST

ನವದೆಹಲಿ: ಇಸ್ರೇಲ್​ಗೆ ಶಸ್ತ್ರಾಸ್ತ್ರ ಮತ್ತು ಇತರ ಮಿಲಿಟರಿ ಸಲಕರಣೆಗಳನ್ನು ರಫ್ತು ಮಾಡುವ ಭಾರತದಲ್ಲಿನ ಕಂಪನಿಗಳ ಲೈಸೆನ್ಸ್​ ರದ್ದುಪಡಿಸುವಂತೆ ಮತ್ತು ಅಂಥ ಕಂಪನಿಗಳಿಗೆ ಹೊಸ ಪರವಾನಿಗೆಗಳನ್ನು ನೀಡದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿತು.

ಸಂವಿಧಾನದ ಪ್ರಕಾರ ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳನ್ನು ನಡೆಸುವ ನ್ಯಾಯವಾಪ್ತಿ ಮತ್ತು ಅಧಿಕಾರ ಕೇಂದ್ರ ಸರ್ಕಾರಕ್ಕಿದೆ ಎಂದು ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಹೇಳಿದೆ.

ಸಂವಿಧಾನದ 162ನೇ ವಿಧಿಯ ಹೊರತಾಗಿ, ಸಂವಿಧಾನದ 253ನೇ ವಿಧಿಯ ನಿಬಂಧನೆಗಳ ಪ್ರಕಾರ ಯಾವುದೇ ಅಂತಾರಾಷ್ಟ್ರೀಯ ಒಪ್ಪಂದ ಅಥವಾ ಒಡಂಬಡಿಕೆಯನ್ನು ಭಾರತ ಒಕ್ಕೂಟದ ಸಂಪೂರ್ಣ ಅಥವಾ ಭಾಗಕ್ಕೆ ಸಂಬಂಧಿಸಿದಂತೆ ಜಾರಿಗೆ ತರಲು ಯಾವುದೇ ಕಾನೂನು ಮಾಡುವ ಅಧಿಕಾರ ಸಂಸತ್ತಿಗೆ ಇದೆ ಎಂದು ನ್ಯಾಯಮೂರ್ತಿಗಳಾದ ಜೆ.ಬಿ.ಪರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೂ ಒಳಗೊಂಡ ನ್ಯಾಯಪೀಠ ಹೇಳಿದೆ.

"ಯಾವುದೋ ಒಂದು ದೇಶಕ್ಕೆ ದೇಶಕ್ಕೆ ಮಿಲಿಟರಿ ಸಲಕರಣೆಗಳನ್ನು ರಫ್ತು ಮಾಡಬಾರದು ಅಥವಾ ನಿರ್ದಿಷ್ಟ ಕಂಪನಿಗೆ ರಫ್ತು ಮಾಡುವ ಎಲ್ಲಾ ಕಂಪನಿಗಳ ಪರವಾನಗಿಯನ್ನು ರದ್ದುಗೊಳಿಸಿ ಎಂದು ಕೇಂದ್ರ ಸರ್ಕಾರಕ್ಕೆ ನಾವು ಆದೇಶಿಸಲು ಸಾಧ್ಯವಿಲ್ಲ. ಇದು ರಾಷ್ಟ್ರೀಯ ನೀತಿಯ ವಿಷಯವಾಗಿದೆ" ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.

ಇದಲ್ಲದೆ, ಅರ್ಜಿಯಲ್ಲಿ ಕೋರಲಾದಂತೆ ಪ್ರತಿಬಂಧಕಾತ್ಮಕ ತೀರ್ಪು ನೀಡಿದರೆ, ಅದು ಅಂತರರಾಷ್ಟ್ರೀಯ ಒಪ್ಪಂದಗಳು ಮತ್ತು ಒಡಂಬಡಿಕೆಗಳನ್ನು ಉಲ್ಲಂಘಿಸುವಂತೆ ನ್ಯಾಯಾಲಯವೇ ಆದೇಶಿಸಿದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಆದಾಗ್ಯೂ ತನ್ನ ಈ ಅವಲೋಕನಗಳು ಕೇಂದ್ರ ಸರ್ಕಾರ ಅಥವಾ ಯಾವುದೇ ಇತರ ಸಾರ್ವಭೌಮ ರಾಷ್ಟ್ರದ ವಿದೇಶಾಂಗ ನೀತಿಯ ನಡವಳಿಕೆಯ ಬಗ್ಗೆ ಯಾವುದೇ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನರಮೇಧದ ಅಪರಾಧ ತಡೆಗಟ್ಟುವಿಕೆ ಮತ್ತು ಶಿಕ್ಷೆಯ ಕಾನೂನುಗಳ ಅಡಿಯಲ್ಲಿ ಗಾಜಾ ಪಟ್ಟಿಯಲ್ಲಿ ಕಾನೂನು ಉಲ್ಲಂಘಿಸಿದ್ದಕ್ಕಾಗಿ ಇಸ್ರೇಲ್ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳನ್ನು ಆದೇಶಿಸಿದ್ದ ಅಂತರರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಇತ್ತೀಚಿನ ನಿರ್ಧಾರವನ್ನು ಪಿಐಎಲ್​ನಲ್ಲಿ ಉಲ್ಲೇಖಿಸಲಾಗಿದೆ.

"ಯುದ್ಧ ಅಪರಾಧಗಳಲ್ಲಿ ಭಾಗಿಯಾದ ತಪ್ಪಿತಸ್ಥ ದೇಶಗಳಿಗೆ ಮಿಲಿಟರಿ ಶಸ್ತ್ರಾಸ್ತ್ರಗಳನ್ನು ಪೂರೈಸದಂತೆ ಭಾರತವನ್ನು ನಿರ್ಬಂಧಿಸುವ ವಿವಿಧ ಅಂತರರಾಷ್ಟ್ರೀಯ ಕಾನೂನುಗಳು ಮತ್ತು ಒಪ್ಪಂದಗಳಿಗೆ ಭಾರತ ಬದ್ಧವಾಗಿದೆ. ಏಕೆಂದರೆ ಹೀಗೆ ರಫ್ತು ಮಾಡಲಾದ ಶಸ್ತ್ರಾಸ್ತ್ರಗಳ ಬಳಕೆಯಿಂದ ಮಾನವೀಯ ಕಾನೂನುಗಳ ಗಂಭೀರ ಉಲ್ಲಂಘನೆಯಾಗಬಹುದು" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಭಾರತವು ಇಸ್ರೇಲ್​ಗೆ ತನ್ನ ಸಹಾಯವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಮತ್ತು ಈಗಾಗಲೇ ಇಸ್ರೇಲ್​ಗೆ ತಲುಪಿಸಲಾದ ಶಸ್ತ್ರಾಸ್ತ್ರಗಳನ್ನು ನರಮೇಧದ ಕೃತ್ಯಗಳಲ್ಲಿ ಬಳಸುವುದಿಲ್ಲ ಎಂದು ಅಥವಾ ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸುವ ರೀತಿಯಲ್ಲಿ ಬಳಸಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ತಕ್ಷಣವೇ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಇದನ್ನೂ ಓದಿ: ಎನ್​​ಎಸ್​ಎ ಅಜಿತ್​ ದೋವಲ್ ಇದೇ ವಾರ ಮಾಸ್ಕೋಗೆ ಭೇಟಿ: ರಷ್ಯಾ-ಉಕ್ರೇನ್ ಯುದ್ಧ ಕೊನೆಗಾಣಿಸಲು ಚರ್ಚೆ ಸಾಧ್ಯತೆ - Ajit Doval to visit Moscow

ETV Bharat Logo

Copyright © 2025 Ushodaya Enterprises Pvt. Ltd., All Rights Reserved.