ETV Bharat / bharat

ರಷ್ಯಾದಲ್ಲಿ ಏರ್​ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ; ಪರ್ಯಾಯ ಫ್ಲೈಟ್ ಮೂಲಕ ಅಮೆರಿಕಕ್ಕೆ ಪ್ರಯಾಣಿಕರು - Air India - AIR INDIA

ರಷ್ಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ದೆಹಲಿ-ಸ್ಯಾನ್ ಫ್ರಾನ್ಸಿಸ್ಕೋ ನಡುವಿನ ಏರ್​ ಇಂಡಿಯಾದ ವಿಮಾನದ ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದೆ.

Air India
ಏರ್​ ಇಂಡಿಯಾ (ANI Photo)
author img

By ANI

Published : Jul 20, 2024, 7:36 AM IST

ನವದೆಹಲಿ: ತಾಂತ್ರಿಕ ದೋಷದಿಂದ ರಷ್ಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಏರ್​ ಇಂಡಿಯಾದ ವಿಮಾನದ ಪ್ರಯಾಣಿಕರನ್ನು ಪರ್ಯಾಯ ವಿಮಾನದ ಮೂಲಕ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ಕರೆದೊಯ್ಯಲಾಗಿದೆ ಎಂದು ಏರ್​ ಇಂಡಿಯಾ ವಿಮಾನಯಾನ ಸಂಸ್ಥೆ ತಿಳಿಸಿದೆ.

ಜುಲೈ 19ರಂದು ದೆಹಲಿಯಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ಹಾರಾಟ ಮಾಡಿದ್ದ ಏರ್​ ಇಂಡಿಯಾದ ಎಐ-183 ವಿಮಾನವು ತಾಂತ್ರಿಕ ಸಮಸ್ಯೆಯಿಂದಾಗಿ ಮಾರ್ಗ ಬದಲಿಸಿ ರಷ್ಯಾದ ಕ್ರಾಸ್ನೊಯಾರ್ಸ್ಕ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​​ ಮಾಡಿತ್ತು. ಇದರಿಂದ ತೊಂದರೆಗೆ ಒಳಗಾಗಿದ್ದ ಪ್ರಯಾಣಿಕರನ್ನು ಸ್ಯಾನ್ ಫ್ರಾನ್ಸಿಸ್ಕೋಗೆ ಕರೆದೊಯ್ಯಲು ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದೆ. ಈ ಪರ್ಯಾಯ ವಿಮಾನವು ಮುಂಬೈನಿಂದ ಹೊರಟಿತ್ತು.

ಇದೀಗ ಎಲ್ಲ ಪ್ರಯಾಣಿಕರನ್ನು ಹೊತ್ತು ರಷ್ಯಾದ ವಿಮಾನ ನಿಲ್ದಾಣದಿಂದ ಪರ್ಯಾಯ ಫ್ಲೈಟ್ ಹೊರಟಿದೆ ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಪೋಸ್ಟ್‌ ಮಾಡಿದೆ. ಎಐ-183ರ ವಿಮಾನದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತ ಎಐ-1179 ವಿಮಾನವು ಜುಲೈ 20ರಂದು ಕ್ರಾಸ್ನೊಯಾರ್ಸ್ಕ್​​ನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹಾರಾಟ ಮಾಡಿದೆ. ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ಎಲ್ಲ ಪ್ರಯಾಣಿಕರಿಗೆ ಅಗತ್ಯವಿರುವ ನೆರವು ಒದಗಿಸಲು ತಂಡ ಸಿದ್ಧವಾಗಿದೆ ಎಂದು ತಿಳಿಸಿದೆ.

ಮತ್ತೊಂದೆಡೆ, ವಿಮಾನ ಟೇಕ್ ಆಫ್ ಆದ ನಂತರ ಮಾಸ್ಕೋದಲ್ಲಿರುವ ಭಾರತದ ರಾಯಭಾರ ಕಚೇರಿಯು ರಷ್ಯಾದ ವಿದೇಶಾಂಗ ಸಚಿವಾಲಯಕ್ಕೆ ಧನ್ಯವಾದ ಸಲ್ಲಿಸಿದೆ. ಎಐ-183ರ ಪ್ರಯಾಣಿಕರೊಂದಿಗೆ ಏರ್ ಇಂಡಿಯಾದ ಐಎ-1179 ವಿಮಾನವು ಸ್ಯಾನ್ ಫ್ರಾನ್ಸಿಸ್ಕೋಗೆ ಕ್ರಾಸ್ನೊಯಾರ್ಸ್ಕ್‌ನಿಂದ ಹೊರಟಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಯಾಣಿಕರಿಗೆ ಮತ್ತು ರಾಯಭಾರ ಕಚೇರಿಯ ತಂಡಕ್ಕೆ ಸಮನ್ವಯ ಸಾಧಿಸಲು ಮಾಡಿದ ಸಹಾಯಕ್ಕಾಗಿ ರಷ್ಯಾದ ವಿದೇಶಾಂಗ ಸಚಿವಾಲಯ, ಕ್ರಾಸ್ನೊಯಾರ್ಸ್ಕ್‌ನಲ್ಲಿರುವ ಅದರ ಪ್ರತಿನಿಧಿ ಕಚೇರಿ, ವಾಯು ಸಾರಿಗೆಯ ರಷ್ಯಾದ ಫೆಡರಲ್ ಏಜೆನ್ಸಿ, ಕ್ರಾಸ್ನೊಯಾರ್ಸ್ಕ್ ಕ್ರೈ ಸರ್ಕಾರ, ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಭದ್ರತಾ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ಮಾಸ್ಕೋದಲ್ಲಿರುವ ಭಾರತದ ರಾಯಭಾರ ಕಚೇರಿಯು ಪೋಸ್ಟ್​ ಮಾಡಿದೆ.

ಗುರುವಾರ ವಿಮಾನ ತುರ್ತು ಲ್ಯಾಂಡಿಂಗ್ ಮಾಡಿದ ಬೆನ್ನಲ್ಲೇ ಪ್ರಯಾಣಿಕರಿಗೆ ಸಹಾಯ ಮಾಡಲು ರಾಯಭಾರ ಕಚೇರಿಯು ಮೂವರು ಹಿರಿಯ ಅಧಿಕಾರಿಗಳನ್ನು ನಿಯೋಜಿಸಿತ್ತು. ಮಾಸ್ಕೋದಿಂದ ಭಾರತೀಯ ಕಾನ್ಸುಲೇಟ್‌ನ ಪ್ರತಿನಿಧಿಗಳು ರಾತ್ರಿಯಿಡೀ ಪ್ರಯಾಣಿಸಿ, ಪ್ರಯಾಣಿಕರನ್ನು ಹೋಟೆಲ್‌ಗಳಿಗೆ ತಲುಪಿಸುವ ಕೆಲಸ ಮಾಡಿದ್ದರು. ಅಲ್ಲದೇ, ಎಲ್ಲ ಪ್ರಯಾಣಿಕರಿಗೆ ಊಟವನ್ನು ಒದಗಿಸಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿತ್ತು.

ಇದನ್ನೂ ಓದಿ: ಲಖನೌಗೆ ಬರಬೇಕಿದ್ದ ಏರ್ ಇಂಡಿಯಾ ವಿಮಾನ ದುಬೈನಲ್ಲಿ ತುರ್ತು ಭೂಸ್ಪರ್ಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.