ETV Bharat / bharat

LOK RESULT LIVE UPDATE: ಜಡ್ಜ್​ಮೆಂಟ್​ ಡೇ: ಉತ್ತರಪ್ರದೇಶದಲ್ಲಿ 7 ಕೇಂದ್ರ ಸಚಿವರಿಗೆ ಸೋಲು - LOK SABHA ELECTION RESULTS 2024

author img

By ETV Bharat Karnataka Team

Published : Jun 4, 2024, 7:14 AM IST

Updated : Jun 4, 2024, 1:10 PM IST

ಲೋಕಸಭೆ ಚುನಾವಣೆ ಫಲಿತಾಂಶ
ಲೋಕಸಭೆ ಚುನಾವಣೆ ಫಲಿತಾಂಶ (ETV Bharat)
ನವದೆಹಲಿ: 18ನೇ ಲೋಕಸಭೆ ಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಯಿಂದ ದೇಶದ ವಿವಿಧೆಡೆಯ ಎಣಿಕೆ ಕೇಂದ್ರಗಳಲ್ಲಿ ಶುರುವಾಗಲಿದೆ. ಮತ ಎಣಿಕೆ ಕೇಂದ್ರಗಳಿಗೆ ಬಿಗಿ ಭದ್ರತೆ ನೀಡಲಾಗಿದೆ. ದಾಖಲೆಯ 64.2 ಕೋಟಿ ಮತದಾರರು ನೀಡಿರುವ ತೀರ್ಪು ಇಂದು ಸಂಜೆಯೊಳಗೆ ತಿಳಿಯಲಿದೆ.ಏಪ್ರಿಲ್‌ 19ರಿಂದ ಆರಂಭವಾಗಿದ್ದ ಲೋಕಸಭೆ ಚುನಾವಣೆಯ ಮತದಾನ ಜೂನ್ 1ರವರೆಗೂ ನಡೆದಿತ್ತು. ಹೀಗಾಗಿ ಸುದೀರ್ಘವಾಗಿ ನಡೆದ ಚುನಾವಣಾ ಪ್ರಕ್ರಿಯೆ ಎಂಬ ದಾಖಲೆಯನ್ನೂ ಬರೆದಿದೆ. ಹಲವು ಸವಾಲುಗಳ ಮಧ್ಯೆ ಕೇಂದ್ರ ಚುನಾವಣಾ ಆಯೋಗ ಯಶಸ್ವಿಯಾಗಿ ಚುನಾವಣಾ ಪ್ರಕ್ರಿಯೆ ಮುಗಿಸಿದ್ದು, ಇಂದಿನ ಮಹಾತೀರ್ಪಿನ ಮೂಲಕ ಸುಖಾಂತ್ಯ ಕಾಣಲಿದೆ.

LIVE FEED

1:08 PM, 4 Jun 2024 (IST)

ಉತ್ತಪ್ರದೇಶದಲ್ಲಿ ಏಳು ಕೇಂದ್ರ ಸಚಿವರಿಗೆ ಸೋಲು

ಉತ್ತರಪ್ರದೇಶದ ಬಿಜೆಪಿಗೆ ಭಾರೀ ಶಾಕ್​ 7 ಕೇಂದ್ರ ಸಚಿವರಿಗೆ ಹೀನಾಯ ಸೋಲು. ಗೆದ್ದು ಬೀಗಿದ ಸಮಾಜವಾದಿ ಪಕ್ಷ.

12:22 PM, 4 Jun 2024 (IST)

ಸ್ಮೃತಿ ಇರಾನಿಗೆ ಸೋಲಿನ ಭೀತಿ, ಕಾಂಗ್ರೆಸ್​ ಅಭ್ಯರ್ಥಿಗೆ ಸತತ ಮುನ್ನಡೆ

ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಸತತ ಹಿನ್ನಡೆ. ಕಾಂಗ್ರೆಸ್​ನ ಕಿಶೋರ್​ ಲಾಲ್​ ಶರ್ಮಾಗೆ 40 ಸಾವಿರ ಮತಗಳ ಅಂತರದ ಮುನ್ನಡೆ. ತಮಿಳುನಾಡಿನಲ್ಲಿ ಅಣ್ಣಾಮಲೈಗೆ ಹಿನ್ನಡೆ.

11:56 AM, 4 Jun 2024 (IST)

ಒಡಿಶಾಕ್ಕೆ ಕಮಲ ಅಧಿಪತ್ಯ ಖಚಿತ

ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಮುನ್ನಡೆ. ಕಮಲ ಪಕ್ಷಕ್ಕೆ 78 ಸ್ಥಾನ, ಆಡಳಿತಾರೂಢ ಬಿಜೆಡಿಗೆ 54, ಕಾಂಗ್ರೆಸ್​ಗೆ 11, ಇತರ 3 ಸ್ಥಾನಗಳಲ್ಲಿ ಮುನ್ನಡೆ. ಅಧಿಕಾರಕ್ಕೇರುವ ಸನಿಹದಲ್ಲಿ ಬಿಜೆಪಿ ಪಡೆ.

11:53 AM, 4 Jun 2024 (IST)

ಅಮಿತ್​ ಶಾ ದಾಖಲೆ ಲೀಡ್​

ಗೃಹ ಸಚಿವ ಅಮಿತ್​ ಶಾಗೆ ದಾಖಲೆಯ ಪ್ರಮಾಣದಲ್ಲಿ ಲೀಡ್​. 5.50 ಲಕ್ಷ ಮತಗಳಿಂದ ಮುಂದಿರುವ ಶಾ. ಕಾಂಗ್ರೆಸ್​ನ ಸೋನಲ್​ ರಮನ್​ಬಾಯಿ ಪಟೇಲ್​ಗೆ ಕೇವಲ 1 ಲಕ್ಷ ಮತ.

11:51 AM, 4 Jun 2024 (IST)

ಇಂದೋರ್​ನಲ್ಲಿ ಅಭ್ಯರ್ಥಿಗಿಂತ ನೋಟಾಗೆ ಹೆಚ್ಚು ಮತ

ಮಧ್ಯಪ್ರದೇಶದ ಇಂದೋರ್​ನಲ್ಲಿ ನೋಟಾಗೆ ವೋಟು, ಬಿಜೆಪಿ ಅಭ್ಯರ್ಥಿಗೆ 6.17 ಲಕ್ಷ ಮತಗಳು ಸಿಕ್ಕಿದ್ದರೆ, ನೋಟಾಗೆ 1 ಲಕ್ಷಕ್ಕೂ ಅಧಿಕ ಮತಗಳು ದಾಖಲಾಗಿವೆ. ಇದು ಕ್ಷೇತ್ರದಲ್ಲಿ ಎರಡನೇ ಅತ್ಯಧಿಕ ನೋಟಾ ವೋಟು ಆಗಿದೆ. ಎರಡನೇ ಅಭ್ಯರ್ಥಿಗೆ ಸಿಕ್ಕಿದ್ದು ಕೇವಲ 26 ಸಾವಿರ ಮತಗಳು

11:42 AM, 4 Jun 2024 (IST)

ತಮಿಳುನಾಡಿನಲ್ಲಿ ಬಿಜೆಪಿ ಶೂನ್ಯ ಸಾಧನೆ: ಅಣ್ಣಾಮಲೈಗೆ ಹಿನ್ನಡೆ

ತಮಿಳುನಾಡಿನಲ್ಲಿ ಸದ್ದು ಮಾಡದ ಕಮಲ. ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈಗೆ ಹಿನ್ನಡೆ. ಡಿಎಂಕೆ 21, ಕಾಂಗ್ರೆಸ್​ 8, ಇತರ 7 ಸ್ಥಾನಗಳಲ್ಲಿ ಮುನ್ನಡೆ.

11:35 AM, 4 Jun 2024 (IST)

ಆಂಧ್ರಪ್ರದೇಶದಲ್ಲಿ ಟಿಡಿಪಿ-ಜನಸೇನಾ- ಬಿಜೆಪಿ ಮೈತ್ರಿಗೆ ಭರ್ಜರಿ ಮುನ್ನಡೆ, ವೈಎಸ್​​ಆರ್​ಸಿಪಿಗೆ ಭಾರೀ ಹಿನ್ನಡೆ

ವಿಧಾನಸಭೆ ಚುನಾವಣೆ ಫಲಿತಾಂಶ: ಆಂಧ್ರಪ್ರದೇಶದಲ್ಲಿ ಟಿಡಿಪಿ-ಜನಸೇನಾ ಪಕ್ಷದ ಮೈತ್ರಿಗೆ ಭರ್ಜರಿ ಮುನ್ನಡೆ. ತೆಲುಗು ದೇಶಂ ಪಕ್ಷ 126, ಜನಸೇನಾ 18, ಬಿಜೆಪಿ 7 ಸ್ಥಾನಗಳಲ್ಲಿ ಮುಂದಿದೆ. ಆಡಳಿತಾರೂಢ ವೈಎಸ್​ಆರ್​ಸಿಪಿ ಕೇವಲ 22 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ. ಅಧಿಕಾರ ಹಿಡಿಯುವತ್ತ ಮುನ್ನುಗ್ಗುತ್ತಿರುವ ಟಿಡಿಪಿ.

11:28 AM, 4 Jun 2024 (IST)

ಮೂರು ರಾಜ್ಯಗಳಲ್ಲಿ ಕ್ಲೀನ್​ಸ್ವೀಪ್​ನತ್ತ ಬಿಜೆಪಿ

ಮೂರು ರಾಜ್ಯಗಳಲ್ಲಿ ಕ್ಲೀನ್​ಸ್ವೀಪ್​ ಮಾಡುವತ್ತ ಬಿಜೆಪಿ. ಮಧ್ಯಪ್ರದೇಶದಲ್ಲಿ 29, ಉತ್ತರಾಖಂಡದಲ್ಲಿ 5, ಹಿಮಾಚಲಪ್ರದೇಶದ ಎಲ್ಲ 4 ಸ್ಥಾನಗಳಲ್ಲಿ ಭರ್ಜರಿ ಮುನ್ನಡೆ. ಎಲ್ಲ ಬಿಜೆಪಿ ಅಭ್ಯರ್ಥಿಗಳು ಇಂಡಿಯಾ ಕೂಟದ ಅಭ್ಯರ್ಥಿಗಳಿಗಿಂತ ಮುಂದಿದ್ದಾರೆ.

11:16 AM, 4 Jun 2024 (IST)

I.N.D.I.A ಕೂಟಕ್ಕೆ ಹಲವು ರಾಜ್ಯಗಳಲ್ಲಿ ಹಿನ್ನಡೆ

ಕರ್ನಾಟಕ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಶ್ಚಿಮಬಂಗಾಳದಲ್ಲಿ ಇಂಡಿಯಾ ಮೈತ್ರಿಕೂಟಕ್ಕೆ ಭಾರೀ ಹಿನ್ನಡೆ. ನಿರೀಕ್ಷಿಸಿದಷ್ಟು ಸೀಟು ಪಡೆದುಕೊಳ್ಳಲು ಪರದಾಟ. ಎನ್​ಡಿಎ ಕೂಟ ಅಭ್ಯರ್ಥಿಗಳಿಂದ ಭರ್ಜರಿ ಮುನ್ನಡೆ.

11:13 AM, 4 Jun 2024 (IST)

ಪಶ್ಚಿಮಬಂಗಾಳದಲ್ಲಿ ಟಿಎಂಸಿಗೆ ಒನ್​ಸೈಡ್​ ಫಲಿತಾಂಶ

ಪಶ್ಚಿಮಬಂಗಾಳದಲ್ಲಿ ಇಂಡಿಯಾ ಕೂಟಕ್ಕೆ ಭಾರೀ ಮುಜುಗರ. ಟಿಎಂಸಿ 28, ಬಿಜೆಪಿ 10, ಕಾಂಗ್ರೆಸ್​ 2 ಕ್ಷೇತ್ರಗಳಲ್ಲಿ ಮುನ್ನಡೆ. ಟಿಎಂಸಿ ಜೊತೆ ಕಾಂಗ್ರೆಸ್​ ಮೈತ್ರಿ ಇಲ್ಲದೇ ಎದುರಿಸುತ್ತಿರುವ ಚುನಾವಣೆ ಇದಾಗಿದೆ.

11:01 AM, 4 Jun 2024 (IST)

ಮಧ್ಯಪ್ರದೇಶದ 29 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ: ಸಿಂಧಿಯಾ, ಶಿವರಾಜ್ ಮುಂದೆ, ದಿಗ್ವಿಜಯ, ನಕುಲ್ ನಾಥ್ ಹಿಂದೆ

ಆರಂಭಿಕ ಟ್ರೆಂಡ್‌ಗಳ ಪ್ರಕಾರ ಮಧ್ಯಪ್ರದೇಶದಲ್ಲಿ ಬಿಜೆಪಿ ಎಲ್ಲಾ 29 ಲೋಕಸಭಾ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಜ್ಯೋತಿರಾದಿತ್ಯ ಸಿಂಧಿಯಾ 87,000 ಮತ, ಶಿವರಾಜ್ ಸಿಂಗ್ ಚೌಹಾಣ್ 93,000 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ 10 ಸಾವಿರ ಮತಗಳಿಂದ ಹಿನ್ನಡೆಯಲ್ಲಿದ್ದರೆ, ಚಿಂದ್ವಾರದಿಂದ ಕಾಂಗ್ರೆಸ್ ಹಾಲಿ ಸಂಸದ ನಕುಲ್ ನಾಥ್ 3,800 ಮತಗಳಿಂದ ಹಿಂದೆ ಬಿದ್ದಿದ್ದಾರೆ.

10:56 AM, 4 Jun 2024 (IST)

ಎರಡೂ ಕ್ಷೇತ್ರಗಳಲ್ಲಿ ರಾಹುಲ್​ ಗಾಂಧಿ ಭರ್ಜರಿ ಮುನ್ನಡೆ

ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಭರ್ಜರಿ ಮುನ್ನಡೆ. ವಯನಾಡಿನಲ್ಲಿ ಕಮ್ಯುನಿಸ್ಟ್​ ಪಕ್ಷದ ಆ್ಯನಿ ರಾಜಾ ಅವರ ವಿರುದ್ಧ 1 ಲಕ್ಷಕ್ಕೂ ಅಧಿಕ ಮತಗಳಿಂದ ಮುನ್ನಡೆ. ರಾಯ್​ಬರೇಲಿಯಲ್ಲಿ ಬಿಜೆಪಿಯ ದಿನೇಶ್​ ಪ್ರತಾಪ್​ ಸಿಂಗ್​ ವಿರುದ್ಧ 60 ಮತಗಳಿಂದ ಮುಂದೆ.

10:52 AM, 4 Jun 2024 (IST)

ಕೇರಳದಲ್ಲಿ ಕಮಲ ಕಿಲಕಿಲ; ರಾಜೀವ್​ ಚಂದ್ರಶೇಖರ್​ಗೆ ಮುನ್ನಡೆ

ಕೇರಳದಲ್ಲಿ ಕಮಲ ಅರಳುವತ್ತ ದಾಪುಗಾಲು. ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್​ (77320) ಭರ್ಜರಿ ಮುನ್ನಡೆ. ಕಾಂಗ್ರೆಸ್​ನ ಶಶಿ ತರೂರ್​​ (71537) ವಿರುದ್ಧ 5 ಸಾವಿರ ಮತಗಳ ಅಂತರದ ಮುನ್ನಡೆ.

10:38 AM, 4 Jun 2024 (IST)

ಉತ್ತರಪ್ರದೇಶದಲ್ಲಿ ಎನ್​ಡಿಎಗೆ ಭಾರೀ ಹಿನ್ನಡೆ, ಚಿಗುರಿದ ಸಮಾಜವಾದಿ ಪಕ್ಷ

ಉತ್ತರ ಪ್ರದೇಶದಲ್ಲಿ ಎನ್​ಡಿಎಗೆ ಭಾರೀ ಹಿನ್ನಡೆ. ಬಿಜೆಪಿ 35, ಸಮಾಜವಾದಿ ಪಾರ್ಟಿ 34, ಕಾಂಗ್ರೆಸ್​ 8 ಸ್ಥಾನಗಳಲ್ಲಿ ಮುನ್ನಡೆ. ರಾಜ್ಯದ 80 ಸ್ಥಾನಗಳಲ್ಲಿ ಸಮಬಲ ಕಾಪಾಡಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳು. ಕಳೆದ ಬಾರಿಗೆ ಹೋಲಿಸಿದರೆ, ಬಿಜೆಪಿಗೆ ಭಾರಿ ಹಿನ್ನಡೆ.

9:54 AM, 4 Jun 2024 (IST)

ಜಮ್ಮು ಕಾಶ್ಮೀರದಲ್ಲಿ ಸಮ ಪ್ರಮಾಣದ ಫೈಟ್​​

ಜಮ್ಮು ಕಾಶ್ಮೀರದಲ್ಲಿ 5 ಕ್ಷೇತ್ರಗಳ ಪೈಕಿ 2 ರಲ್ಲಿ ಬಿಜೆಪಿ, ಜೆಕೆನ್​ ಪಕ್ಷ 2 ಕ್ಷೇತ್ರಗಳಲ್ಲಿ, ಓರ್ವ ಪಕ್ಷೇತರ ಮುನ್ನಡೆಯಲ್ಲಿದ್ದಾರೆ.

9:46 AM, 4 Jun 2024 (IST)

ಕೇರಳದಲ್ಲಿ ನಡೆಯದ ಬಿಜೆಪಿ ಆಟ, ಗುಜರಾತ್​ನಲ್ಲಿ ಭಾರೀ ಮುನ್ನಡೆ

ಕೇರಳದಲ್ಲಿ 13 ಕ್ಷೇತ್ರದಲ್ಲಿ ಕಾಂಗ್ರೆಸ್​, ಮುಸ್ಲಿಂ ಲೀಗ್​ 2, ಬಿಜೆಪಿ 1 ಕ್ಷೇತ್ರದಲ್ಲಿ ಮುನ್ನಡೆ. ಗುಜರಾತ್​ನಲ್ಲಿ 23 ಸ್ಥಾನಗಳಲ್ಲಿ ಬಿಜೆಪಿ, ಕಾಂಗ್ರೆಸ್​ 2 ಕ್ಷೇತ್ರದಲ್ಲಿ ಮುನ್ನಡೆ

9:36 AM, 4 Jun 2024 (IST)

ಫಲಿತಾಂಶದಲ್ಲಿ ಏರುಪೇರು; ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ

ನಿನ್ನೆ ಭಾರೀ ಏರಿಕೆ ಕಂಡಿದ್ದ ಸೆನ್ಸೆಕ್ಸ್​ ಇಂದು ಭಾರೀ ಕುಸಿತ. ಮುಂಬೈ ಷೇರುಪೇಟೆ 2 ಸಾವಿರಕ್ಕೂ ಅಧಿಕ ಇಳಿಕೆ. 650 ಪಾಯಿಂಟ್ಸ್​ ಕಳೆದುಕೊಂಡ ನಿಫ್ಟಿ. ಎನ್​ಡಿಎ ಕೂಟ 300 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಳ್ಳದ ಕಾರಣ ಮಾರುಕಟ್ಟೆಯಲ್ಲಿ ಭಾರೀ ತಲ್ಲಣ.

9:22 AM, 4 Jun 2024 (IST)

ದೆಹಲಿಯ 7 ಕ್ಷೇತ್ರಗಳಲ್ಲಿ ಎನ್​ಡಿಎ ಅಭ್ಯರ್ಥಿಗಳ ಮುನ್ನಡೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಲ್ಲ 7 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ ಎನ್​ಡಿಎ ಅಭ್ಯರ್ಥಿಗಳು. ಆಪ್​, ಕಾಂಗ್ರೆಸ್​ ಅಭ್ಯರ್ಥಿಗಳ ಹಿನ್ನಡೆ ಸಾಧಿಸುತ್ತಿದ್ದಾರೆ.

9:16 AM, 4 Jun 2024 (IST)

200 ಸೀಟುಗಳಲ್ಲಿ ಮುನ್ನಡೆ ಸಾಧಿಸಿದ I.N.D.I.A ಕೂಟ

ಇಂಡಿಯಾ ಮೈತ್ರಿಕೂಟ 200 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎಕ್ಸಿಟ್​ ಪೋಲ್​ನ ಭವಿಷ್ಯ ದಾಟಿ ಮುಂದೆ ಸಾಗಿದ ವಿಪಕ್ಷಗಳ ಕೂಟ. ಎನ್​ಡಿಎ ಕೂಟಕ್ಕೆ 270 ಸೀಟುಗಳಲ್ಲಿ ಮುನ್ನಡೆ

9:10 AM, 4 Jun 2024 (IST)

ಮಹಾರಾಷ್ಟ್ರದಲ್ಲಿ ಎನ್​ಡಿಎಗೆ ಮುನ್ನಡೆ, ಸಿಕ್ಕಿಂನಲ್ಲಿ ಎಸ್​ಕೆಎಂ ಮುಂದೆ

ಮಹಾರಾಷ್ಟ್ರದಲ್ಲಿ ಎನ್​ಡಿಎ ಒಕ್ಕೂಟ ಮುನ್ನಡೆ ಸಾಧಿಸುತ್ತಿದೆ. ಬಿಜೆಪಿ ಮತ್ತು ಸಿಎಂ ಏಕನಾಥ್​ ಶಿಂಧೆ ನೇತೃತ್ವದ ಶಿವಸೇನಾ ಅಭ್ಯರ್ಥಿಗಳ ಮುನ್ನಡೆ. ಸಿಕ್ಕಿಂನಲ್ಲಿನ ಏಕೈಕ ಲೋಕಸಭಾ ಕ್ಷೇತ್ರದಲ್ಲಿ ಸಿಕ್ಕಿಂತ ಕ್ರಾಂತಿಕಾರಿ ಮೋರ್ಚಾ ಮುನ್ನಡೆ ಸಾಧಿಸಿದೆ. ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿದಿದೆ.

9:00 AM, 4 Jun 2024 (IST)

ಉತ್ತರಪ್ರದೇಶದಲ್ಲಿ ಎನ್​ಡಿಎಗೆ ಭರ್ಜರಿ ಮುನ್ನಡೆ

ಉತ್ತರಪ್ರದೇಶದಲ್ಲಿ 53 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ, ಬಿಹಾರದಲ್ಲಿ ಎನ್​ಡಿಎ ಅಭ್ಯರ್ಥಿಗಳಿಗೆ ಮುನ್ನಡೆ, ನವದೆಹಲಿಯಲ್ಲಿ ಬಿಜೆಪಿ ಬಾನ್ಸುರಿ ಸ್ವರಾಜ್​ ಅವರು ಆರಂಭಿಕ ಹಿನ್ನಡೆ ಉಂಟಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿಗೆ ಅಲ್ಪ ಹಿನ್ನಡೆ.

8:37 AM, 4 Jun 2024 (IST)

ಲೋಕಸಭಾ ಚುನಾವಣಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು

ಲೋಕಸಭೆ ಚುನಾವಣಾ ಕಣದಲ್ಲಿ ಅನುಭವಿಗಳು, ಮೊದಲ ಬಾರಿಗೆ ಸ್ಪರ್ಧಿಸಿದವರು ಇರುವುದು ಎಲ್ಲರ ಗಮನ ಸೆಳೆದಿದೆ. ಇಂದಿನ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಗಮನಹರಿಸಬೇಕಾದ ಕೆಲವು ಪ್ರಮುಖ ಸ್ಪರ್ಧಿಗಳು ಮಾಹಿತಿ ಇಲ್ಲಿದೆ.

ವಾರಾಣಸಿಯಲ್ಲಿ ನರೇಂದ್ರ ಮೋದಿ VS ಅಜಯ್ ರೈ

ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ Vs ದಿನೇಶ್ ಪ್ರತಾಪ್ ಸಿಂಗ್

ವಯನಾಡಿನಲ್ಲಿ ರಾಹುಲ್ ಗಾಂಧಿ Vs ಅನ್ನಿ ರಾಜಾ

ಅಮೇಥಿಯಲ್ಲಿ ಸ್ಮೃತಿ ಇರಾನಿ Vs ಕಿಶೋರಿ ಲಾಲ್ ಶರ್ಮಾ

ತಿರುವನಂತಪುರಂನಲ್ಲಿ ಶಶಿ ತರೂರ್ Vs ರಾಜೀವ್ ಚಂದ್ರಶೇಖರ್

ಬಹರಂಪುರದಲ್ಲಿ ಅಧೀರ್ ರಂಜನ್ ಚೌಧರಿ Vs ಯೂಸುಫ್ ಪಠಾಣ್

ನವದೆಹಲಿಯಲ್ಲಿ ಬಾನ್ಸುರಿ ಸ್ವರಾಜ್ Vs ಸೋಮನಾಥ್ ಭಾರತಿ

ರಾಜನಂದಗಾಂವ್‌ನಲ್ಲಿ ಭೂಪೇಶ್ ಬಾಘೇಲ್ Vs ಸಂತೋಷ್ ಪಾಂಡೆ

ಚುರುನಲ್ಲಿ ರಾಹುಲ್ ಕಸ್ವಾನ್ Vs ದೇವೇಂದ್ರ ಜಜಾರಿಯಾ

ಛಿಂದ್ವಾರಾದಲ್ಲಿ ನಕುಲ್ ನಾಥ್ Vs ವಿಜಯ್ ಕುಮಾರ್ ಸಾಹು

ಶಿವಮೊಗ್ಗದಲ್ಲಿ ಬಿ ವೈ ರಾಘವೇಂದ್ರ Vs ಕೆ ಈಶ್ವರಪ್ಪ

8:22 AM, 4 Jun 2024 (IST)

ಹಲವು ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ

ದೇಶದಲ್ಲಿ ಬಿಜೆಪಿ 56, ಕಾಂಗ್ರೆಸ್​ 27, ಇತರ 18 ಅಭ್ಯರ್ಥಿಗಳು ಆರಂಭಿಕ ಮುನ್ನಡೆ ಸಾಧಿಸಿದ್ದಾರೆ. ಹಿಮಾಚಲಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ರಣಾವತ್​, ಅಮೇಠಿಯಲ್ಲಿ ಸ್ಮೃತಿ ಇರಾನಿ ಮುನ್ನಡೆ ಸಾಧಿಸಿದ್ದಾರೆ.

8:04 AM, 4 Jun 2024 (IST)

ದೇವರೇ ಕಾಪಾಡು!! ಅಭ್ಯರ್ಥಿಗಳಿಂದ ಟೆಂಪಲ್​ ರನ್​

ಮತ ಎಣಿಕೆ ಆರಂಭಕ್ಕೂ ಮೊದಲು ವಿವಿಧ ಪಕ್ಷಗಳ ಮುಖಂಡರಿಂದ ದೇವರ ಮೊರೆ. ಮಧ್ಯಪ್ರದೇಶ ಬಿಜೆಪಿ ಅಧ್ಯಕ್ಷ ಮತ್ತು ಖಜುರಾಹೊ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಡಿ ಶರ್ಮಾ ಅವರು ಮತ ಎಣಿಕೆಗೆ ಮುನ್ನ ಪನ್ನಾದಲ್ಲಿರುವ ಜುಗಲ್ ಕಿಶೋರ್ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕಾರೈಕುಡಿಯಲ್ಲಿರುವ ಕಾಳಿ ಅಮ್ಮನ್ ದೇವಸ್ಥಾನದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಕಾರ್ತಿ ಚಿದಂಬರಂ ಅವರು ಪೂಜೆ ಸಲ್ಲಿಸಿದರು.

7:56 AM, 4 Jun 2024 (IST)

ವಿವಿಧೆಡೆ ಸ್ಟ್ರಾಂಗ್ ರೂಂ ತೆರೆದ ಎಣಿಕೆ ಅಧಿಕಾರಿಗಳು

ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಆರಂಭವಾಗಲಿದ್ದು, ಎಣಿಕೆ ಅಧಿಕಾರಿಗಳು ಮತಯಂತ್ರಗಳನ್ನು ಇಡಲಾದ ಸ್ಟ್ರಾಂಗ್​ ರೂಮ್​ಗಳ ಬಾಗಿಲುಗಳನ್ನು ತೆರೆಯುತ್ತಿದ್ದಾರೆ. ಕ್ಷೇತ್ರದಲ್ಲಿ ಮತದಾನ ಮುಗಿದ ನಂತರ ಗುರುತಿಸಲಾದ ಕೇಂದ್ರದಲ್ಲಿ ಇವಿಎಂಗಳನ್ನು (ವಿವಿಪ್ಯಾಟ್‌ಗಳ ಜೊತೆಗೆ) ಇರಿಸಲಾಗಿದೆ. ಕೊಠಡಿಗಳನ್ನು ಎರಡು ಬೀಗಗಳಿಂದ ಭದ್ರವಾಗಿ ಮುಚ್ಚಲಾಗಿದೆ. ಸ್ಟ್ರಾಂಗ್​ ರೂಮ್​​ಗೆ ಸಿಸಿಟಿವಿ ಕಣ್ಗಾವಲು ಹಾಕಲಾಗಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು 24X7 ಭದ್ರತೆಯನ್ನು ಹೊಂದಿವೆ.

Last Updated : Jun 4, 2024, 1:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.