ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಕಾಶ್ಮೀರದ ಮೊಟ್ಟ ಮೊದಲ ಅಂತಾರಾಷ್ಟ್ರೀಯ ಮ್ಯಾರಥಾನ್‌ಗೆ ಇಂದು ಬೆಳಗ್ಗೆ ಸಿಎಂ ಒಮರ್ ಅಬ್ದುಲ್ಲಾ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಜೊತೆಗಿದ್ದರು. ದೇಶ, ವಿದೇಶಗಳ ಅಂದಾಜು 2000 ಅಥ್ಲೀಟ್‌ಗಳು ಮ್ಯಾರಥಾನ್‌ನಲ್ಲಿ ಭಾಗಿಯಾಗಿದ್ದಾರೆ.
ಮ್ಯಾರಥಾನ್‌ನಲ್ಲಿ ಪಾಲ್ಗೊಂಡವರ ಪೈಕಿ ಭಾರತ, ಏಷ್ಯಾ ಚಿನ್ನದ ಪದಕ ವಿಜೇತರು ಮತ್ತು ಯುರೋಪ್ ಹಾಗು ಆಫ್ರಿಕಾದ ಪ್ರಮುಖ ದೂರ ಓಟಗಾರರು ಪಾಲ್ಗೊಂಡಿರುವುದು ಗಮನಾರ್ಹ.
#WATCH | Jammu & Kashmir CM, Omar Abdullah and actor Suniel Shetty flag off Kashmir's first-ever International Marathon from Polo Stadium, Srinagar. pic.twitter.com/8CyhGH5s5E
— ANI (@ANI) October 20, 2024
42 ಕಿಲೋ ಮೀಟರ್‌ಗಳ ಪೂರ್ಣ ಮ್ಯಾರಥಾನ್ ಮತ್ತು 21 ಕಿಲೋ ಮೀಟರ್‌ಗಳ ಅರ್ಧ ಮ್ಯಾರಥಾನ್ ಎಂಬೆರಡು ವಿಭಾಗಗಳಲ್ಲಿ ಇಂದು ಓಟದ ಸ್ಪರ್ಧೆ ನಡೆಯುತ್ತಿದೆ.
ರಾಜ್ಯದ ಪ್ರವಾಸೋದ್ಯಮ ಇಲಾಖೆ ಮ್ಯಾರಥಾನ್ ಆಯೋಜಿಸಿದೆ. ಕಣಿವೆ ನಾಡಿನಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂಬುದನ್ನು ಜಗತ್ತಿಗೆ ತೋರಿಸುವುದು ಈ ಸ್ಪರ್ಧೆಯ ಆಯೋಜನೆಯ ಹಿಂದಿರುವ ಉದ್ದೇಶ.
#WATCH | Actor Suniel Shetty says, " people want to come to kashmir, and an event like this gives a message to the entire world that the people from all over the world are coming here to participate and it's a big thing... it's (j&k) a paradise for the world." https://t.co/MjsyRn1riD pic.twitter.com/Qa1EHH2BRp
— ANI (@ANI) October 20, 2024
"ಕಾಶ್ಮೀರ ಎಲ್ಲರಿಗೂ ಮುಕ್ತವಾಗಿದೆ. ನಾವು ಜಗತ್ತಿನ ವಿವಿಧೆಡೆಯ ಪ್ರವಾಸಿಗರನ್ನು ಸ್ವಾಗತಿಸುತ್ತಿದ್ದೇವೆ. ಒಬ್ಬ ಅಥ್ಲೀಟ್ ಇಲ್ಲಿ 42 ಕಿಲೋ ಮೀಟರ್ ದೂರದ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿದೆ ಎಂದರೆ ಕಾಶ್ಮೀರ ಶಾಂತಿಯುತವಾಗಿದೆ ಎಂಬುದೇ ಇದರ ಅರ್ಥ" ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಜಾ ಯಾಕೂಬ್ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಹೇಳಿದರು.
"ಈ ಓಟದ ಸ್ಪರ್ಧೆಯೊಂದಿಗೆ ನಾವು ನಮ್ಮ ಪರಂಪರೆ, ಸ್ಥಳೀಯ ವಸ್ತುಗಳು, ಕರಕುಶಲ ಸಾಮಗ್ರಿ ಹಾಗು ತಿನಿಸುಗಳನ್ನು ವಿಶ್ವಕ್ಕೆ ಪರಿಚಯಿಸುತ್ತಿದ್ದೇವೆ. ಸ್ಪರ್ಧೆಯಲ್ಲಿ ಭಾಗಿಯಾಗುತ್ತಿರುವ ಸ್ಪರ್ಧಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವಾದ್ಯಂತ ಮಿಲಿಯನ್‌ಗಟ್ಟಲೆ ಫಾಲೋವರ್ಸ್ ಇದ್ದಾರೆ. ಹಾಗಾಗಿ ನಮಗೆ ಅವರು ಬ್ರ್ಯಾಂಡ್ ಅಂಬಾಸಿಡರ್ಸ್" ಎಂದು ಅವರು ತಿಳಿಸಿದರು.
ಇದನ್ನೂ ಓದಿ: 'RCB ತಂಡಕ್ಕೆ ಬನ್ನಿ' ಎಂದ ಅಭಿಮಾನಿಗಳಿಗೆ ರೋಹಿತ್ ಶರ್ಮಾ ಕೊಟ್ಟ ಉತ್ತರ ಏನು ಗೊತ್ತಾ? ವಿಡಿಯೋ ವೈರಲ್