ETV Bharat / bharat

ಭಾರತಕ್ಕೆ ಅಮೆರಿಕ, ಜರ್ಮನಿಯ ಪಾಠದ ಅಗತ್ಯವಿಲ್ಲ: ಉಪರಾಷ್ಟ್ರಪತಿ ಜಗದೀಪ್ ಧನಕರ್ - JAGDEEP DHANKHAR

''ಭಾರತವು ದೃಢವಾದ ನ್ಯಾಯಾಂಗ ವ್ಯವಸ್ಥೆ ಹೊಂದಿರುವ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಯಾವುದೇ ವ್ಯಕ್ತಿ ಅಥವಾ ಯಾವುದೇ ಗುಂಪಿನ ಜತೆ, ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಭಾರತದ ಪ್ರಜಾಪ್ರಭುತ್ವ ಅನನ್ಯವಾಗಿದ್ದು, ಭಾರತಕ್ಕೆ ಕಾನೂನಿನ ಪಾಠದ ಅಗತ್ಯವಿಲ್ಲ'' ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದ್ದಾರೆ.

JAGDEEP DHANKHAR  RULE OF LAW  ARVIND KEJRIWAL ARREST
ಕಾನೂನಿನ ಆಳ್ವಿಕೆಯಲ್ಲಿ ಭಾರತಕ್ಕೆ ಅಮರಿಕ, ಜರ್ಮನಿಯ ಪಾಠದ ಅಗತ್ಯವಿಲ್ಲ: ಉಪರಾಷ್ಟ್ರಪತಿ ಜಗದೀಪ್ ಧನಕರ್
author img

By ETV Bharat Karnataka Team

Published : Mar 30, 2024, 3:38 PM IST

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಬಂಧನದ ಕುರಿತು ಅಮೆರಿಕ ಮತ್ತು ಜರ್ಮನಿ ಇತ್ತೀಚೆಗೆ ನೀಡಿರುವ ಹೇಳಿಕೆಗಳಿಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ''ಭಾರತ ಒಂದು ವಿಶಿಷ್ಟ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಕಾನೂನಿನ ನಿಯಮದ ಕುರಿತು ಭಾರತಕ್ಕೆ ಯಾರಿಂದಲೂ ಪಾಠದ ಅಗತ್ಯವಿಲ್ಲ'' ಎಂದು ತಿಳಿಸಿದ್ದಾರೆ.

ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉಪರಾಷ್ಟ್ರಪತಿ ಜಗದೀಪ್ ಧಂಖರ್, "ಭಾರತವು ಬಲಿಷ್ಠ ನ್ಯಾಯಾಂಗ ವ್ಯವಸ್ಥೆ ಹೊಂದಿರುವ ಪ್ರಜಾಪ್ರಭುತ್ವವಾಗಿದೆ. ಇದು ಯಾವುದೇ ವ್ಯಕ್ತಿ ಅಥವಾ ಯಾವುದೇ ಗುಂಪಿನೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಭಾರತವು ಕಾನೂನಿನ ನಿಯಮದ ಬಗ್ಗೆ ಯಾರಿಂದಲೂ ಪಾಠಗಳನ್ನು ಕಲಿತುಕೊಳ್ಳುವ ಅಗತ್ಯವಿಲ್ಲ" ಎಂದರು.

''ಭಾರತದಲ್ಲಿ ಕಾನೂನಿನ ಮುಂದೆ ಎಲ್ಲರೂ ಸಮಾನರು. ಕಾನೂನು ಮೀರಿ ನಡೆದರೆ, ಅಂತಹವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ'' ಎಂದರು.

ಅರವಿಂದ್ ಕೇಜ್ರಿವಾಲ್ ಬಂಧನದ ವಿರುದ್ಧ ಆಮ್ ಆದ್ಮಿ ಪಕ್ಷ (ಎಎಪಿ) ಭಾನುವಾರ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿಭಾಟನಾ ಮೆರವಣಿಗೆ ಆಯೋಜಿಸಲು ಉದ್ದೇಶಿಸಿದೆ. ಪ್ರತಿಪಕ್ಷ ಇಂಡಿಯಾ ಒಕ್ಕೂಟದ ಹಲವು ನಾಯಕರು ಇದರಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಉಪರಾಷ್ಟ್ರಪತಿ, ''ಕಾನೂನು ತನ್ನ ಕೆಲಸವನ್ನು ಪ್ರಾರಂಭಿಸಿದಾಗ, ಅವರು ಬೀದಿಗೆ ಬರುತ್ತಾರೆ, ಜೋರಾಗಿ ವಾದಿಸುತ್ತಾರೆ. ಮಾನವ ಹಕ್ಕುಗಳ ಕೆಟ್ಟ ಸ್ವಭಾವದ ಆರೋಪಿಗಳನ್ನು ಮರೆಮಾಡುತ್ತಾರೆ. ಇದು ನಮ್ಮ ಮೂಗಿನ ನೇರಕ್ಕೆ ನಡೆಯುತ್ತಿದೆ. ಭಾರತೀಯ ನ್ಯಾಯಾಂಗ ವ್ಯವಸ್ಥೆ ಬಲಿಷ್ಠ, ಸ್ವತಂತ್ರ ಮತ್ತು ಜನಪರ ಆಗಿದೆ. ಕಾನೂನು ಜಾರಿಯಾದಾಗ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಬೀದಿಗಿಳಿದು ಸಮರ್ಥನೆ ನೀಡಿದರೆ ಏನು ಪ್ರಯೋಜನವಿದೆ ಎಂದು ಪ್ರಶ್ನಿಸಿದರು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್​ನ (ಐಐಪಿಎ)70ನೇ ಸಂಸ್ಥಾಪನಾ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಅವರು, ''ಭ್ರಷ್ಟಾಚಾರವು ಇನ್ನು ಮುಂದೆ ಅವಕಾಶ, ಉದ್ಯೋಗ ಅಥವಾ ಒಪ್ಪಂದಗಳಿಗೆ ದಾರಿ ಮಾಡಿಕೊಡುವುದಿಲ್ಲ. ಬದಲಾಗಿ ಅದು ಜೈಲಿನ ಹಾದಿಯಾಗಿದೆ. ವ್ಯವಸ್ಥೆಯು ದೇಶವನ್ನು ಭದ್ರಪಡಿಸುತ್ತಿದೆ. ಜೊತೆಗೆ ಭ್ರಷ್ಟರ ವಿರುದ್ಧ ವ್ಯವಹರಿಸಬಾರದು ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಉಪರಾಷ್ಟ್ರಪತಿಯುವರು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್​ನ (ಐಐಪಿಎ) ನವೀಕರಿಸಿದ ಆವರಣವನ್ನು ಉದ್ಘಾಟಿಸಿದರು. ಮತ್ತು ಐಐಪಿಎಯ ಹಲವು ಪ್ರಕಟಣೆಗಳನ್ನು ಬಿಡುಗಡೆಗೊಳಿಸಿದರು. ಸುರೇಂದ್ರ ನಾಥ್ ತ್ರಿಪಾಠಿ, ಅಮಿತಾಭ್ ರಂಜನ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ: ಭಾರೀ ಭದ್ರತೆಯ ನಡುವೆ ಗ್ಯಾಂಗಸ್ಟರ್​​ ಮುಖ್ತಾರ್ ಅನ್ಸಾರಿ ಅಂತ್ಯಕ್ರಿಯೆ - Funeral of Mukhtar Ansari

ETV Bharat Logo

Copyright © 2024 Ushodaya Enterprises Pvt. Ltd., All Rights Reserved.