ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು 19 ಕೆ.ಜಿ ವಾಣಿಜ್ಯ ಸಿಲಿಂಡರ್ ಮತ್ತು 5 ಕೆ.ಜಿ ಎಫ್‌ಟಿಎಲ್ (Free Trade LPG) ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಿವೆ ಎಂದು ಮೂಲಗಳು ತಿಳಿಸಿವೆ. 19 ಕೆ.ಜಿ ವಾಣಿಜ್ಯ ಸಿಲಿಂಡರ್‌ಗೆ 30.50 ರೂಪಾಯಿ ಇಳಿಕೆಯಾಗಿದ್ದು, 5 ಕೆ.ಜಿ ಎಫ್‌ಟಿಎಲ್ ಸಿಲಿಂಡರ್ ಬೆಲೆ 7.50 ರೂಪಾಯಿ ಇಳಿಕೆಯಾಗಿದೆ. ಪರಿಷ್ಕೃತ ದರಗಳು ಇಂದಿನಿಂದ (ಏಪ್ರಿಲ್ 1ರಿಂದ) ಅನ್ವಯವಾಗಲಿದೆ. ದೆಹಲಿಯಲ್ಲಿ 19 ಕೆ.ಜಿ ವಾಣಿಜ್ಯ ಸಿಲಿಂಡರ್ ಬೆಲೆ 1764.50 ರೂಪಾಯಿ ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಗೃಹಬಳಕೆಯ (14 ಕೆಜಿ) ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 30.50 ರೂಪಾಯಿ, ಮುಂಬೈನಲ್ಲಿ 31.50 ರೂಪಾಯಿ, ಚೆನ್ನೈನಲ್ಲಿ 30.50 ರೂಪಾಯಿ ಮತ್ತು ಕೋಲ್ಕತ್ತಾದಲ್ಲಿ 32 ರೂಪಾಯಿ ಕಡಿಮೆ ಆಗಿದೆ. ಬೆಲೆ ಇಳಿಕೆ ನಂತರ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1764.50 ರೂಪಾಯಿಗಳಿಗೆ ಲಭ್ಯವಾಗಲಿದೆ. ಇನ್ನು ಮುಂಬೈನಲ್ಲಿ ಅದೇ ಸಿಲಿಂಡರ್ 1717.50 ರೂಪಾಯಿಗೆ, ಕೋಲ್ಕತ್ತಾದಲ್ಲಿ 1879 ರೂಪಾಯಿಗೆ, ಚೆನ್ನೈನಲ್ಲಿ 1930 ರೂಪಾಯಿಗೆ ಲಭ್ಯವಾದರೆ ಬೆಂಗಳೂರಿನಲ್ಲಿ 1830 ರೂಪಾಯಿ ಇಳಿಕೆ ಕಂಡಿದೆ.
ಕಳೆದ ತಿಂಗಳ ಆರಂಭದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಹಿಳಾ ದಿನದಂದು (8 ಮಾರ್ಚ್) ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 100 ರೂ. ಇಳಿಕೆ ಘೋಷಿಸಿದ್ದರು. ಅದಕ್ಕೂ ಒಂದು ದಿನ ಮೊದಲು ಅಂದರೆ ಮಾ. 7ರಂದು ಎಲ್‌ಪಿಜಿ ಸಿಲಿಂಡರ್ ವಿಚಾರದಲ್ಲಿ ಮೋದಿ ಸರ್ಕಾರ ಜನ ಸಾಮಾನ್ಯರಿಗೆ ಪರಿಹಾರ ನೀಡಿತ್ತು. 2025ರ ಮಾ. 31ರವರೆಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ 300 ರೂ. ಸಹಾಯಧನ ನೀಡುವುದಾಗಿ ಸಂಪುಟ ಘೋಷಿಸಿತ್ತು.
ಕೆಲವೇ ದಿನಗಳಲ್ಲಿ ಲೋಕಸಬಾ ಚುನಾವಣೆಗೆ ಮತದಾನ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಿದ್ದು, ಜನಸಾಮಾನ್ಯರಿಗೆ ಚುನಾವಣಾ ಗಿಫ್ಟ್ ನೀಡಿದೆ. ಬೆಲೆ ಇಳಿಕೆಯ ಹಿಂದಿನ ನಿಖರವಾದ ಕಾರಣಗಳನ್ನು ಬಹಿರಂಗಪಡಿಸಲಾಗಿಲ್ಲ. ಅಂತಾರಾಷ್ಟ್ರೀಯ ತೈಲ ಬೆಲೆಗಳಲ್ಲಿನ ಬದಲಾವಣೆಗಳು, ತೆರಿಗೆ ನೀತಿಗಳಲ್ಲಿನ ಬದಲಾವಣೆಗಳು ಮತ್ತು ಪೂರೈಕೆ-ಬೇಡಿಕೆ ಡೈನಾಮಿಕ್ಸ್‌ನಂತಹ ವಿವಿಧ ಅಂಶಗಳು ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಬಳಕೆದಾರರ ಗಮನಕ್ಕೆ; ಏಪ್ರಿಲ್ 1 ರಿಂದ ಹೊಸ ನಿಯಮಗಳು ಜಾರಿ - New Credit Card Rules April 2024