ETV Bharat / bharat

ನೀಟ್‌-ನೆಟ್‌ ಪ್ರಶ್ನೆ ಪತ್ರಿಕೆ ಅಕ್ರಮ: ಎನ್‌ಟಿಎ ಮಹಾನಿರ್ದೇಶಕ ಹುದ್ದೆಯಿಂದ ಸುಬೋಧ್ ಸಿಂಗ್ ಔಟ್‌ - NEET NET Paper Leak Row - NEET NET PAPER LEAK ROW

ನೀಟ್‌-ನೆಟ್‌ ಅಕ್ರಮದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್​ಟಿಎ)ಯ ಮಹಾನಿರ್ದೇಶಕ ಸುಬೋಧ್ ಸಿಂಗ್​ ಅವರನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ.

ಸುಬೋಧ್ ಸಿಂಗ್​
ಸುಬೋಧ್ ಸಿಂಗ್​ (IANS)
author img

By PTI

Published : Jun 23, 2024, 12:13 PM IST

Updated : Jun 23, 2024, 12:51 PM IST

ನವದೆಹಲಿ: ನೀಟ್ ಮತ್ತು ಯುಜಿಸಿ ನೆಟ್ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಕೇಂದ್ರ ಸರ್ಕಾರವು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ)ಯ ಮಹಾನಿರ್ದೇಶಕ ಸುಬೋಧ್ ಸಿಂಗ್​ ಅವರನ್ನು ಶನಿವಾರ ಹುದ್ದೆಯಿಂದ ತೆಗೆದುಹಾಕಿದೆ. ಈ ಸ್ಥಾನಕ್ಕೆ ಐಎಎಸ್ ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ ಅವರನ್ನು ನೇಮಿಸಲಾಗಿದೆ.

ಪ್ರದೀಪ್ ಸಿಂಗ್ ಖರೋಲಾ ಹೊಸ ಡಿಜಿ: ಪ್ರದೀಪ್ ಸಿಂಗ್ ಖರೋಲಾ ಅವರಿಗೆ ಎನ್​ಟಿಎಯ ಹೆಚ್ಚುವರಿ ಡೈರೆಕ್ಟರ್ ಜನರಲ್​ ಜವಾಬ್ದಾರಿ ನೀಡಲಾಗಿದೆ. ಸದ್ಯ ಅವರು ಭಾರತೀಯ ವ್ಯಾಪಾರ ಉತ್ತೇಜನಾ ಸಂಸ್ಥೆಯ (ಐಟಿಪಿಐ) ಅಧ್ಯಕ್ಷ ಮತ್ತು ಎಂಡಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಯುಜಿಸಿ-ನೆಟ್​ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ದಕ್ಷತೆಯ ವಿರುದ್ಧ ಸಾಕಷ್ಟು ಪ್ರಶ್ನೆಗಳು ಮೂಡಿವೆ. ಈ ಪ್ರಕರಣ ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಹಿನ್ನೆಲೆಯಲ್ಲಿ ಜೂನ್ 21ರಂದು ನಡೆಯಬೇಕಿದ್ದ ಯುಜಿಸಿ ನೆಟ್ ಪರೀಕ್ಷೆಯನ್ನು ಸರ್ಕಾರ ಮುಂದೂಡಿದೆ.

ಇದನ್ನೂ ಓದಿ: ನೀಟ್​ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಪ್ರಮುಖ ಕಿಂಗ್​ಪಿನ್​ ಸಂಜೀವ್​ ಮುಖಿಯಾಗಾಗಿ ಪೊಲೀಸರ ತೀವ್ರ ಹುಡುಕಾಟ - NEET exam question paper leak

Last Updated : Jun 23, 2024, 12:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.