ETV Bharat / bharat

ಈಶಾನ್ಯ ರಾಜ್ಯಗಳಲ್ಲಿ 4 ತಿಂಗಳಲ್ಲಿ 196 ಭೂಕುಸಿತ ದುರಂತಗಳು ದಾಖಲು: ಕೇಂದ್ರ ಸರ್ಕಾರ - landslides in Northeast states - LANDSLIDES IN NORTHEAST STATES

ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾದಲ್ಲಿ ಕಳೆದ ನಾಲ್ಕು ತಿಂಗಳಲ್ಲಿ 196 ಭೂಕುಸಿತ ದುರಂತಗಳು ಸಂಭವಿಸಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ಹಂಚಿಕೊಂಡಿದೆ.

ಭೂಕುಸಿತ ದುರಂತ ದಾಖಲು
ಭೂಕುಸಿತ ದುರಂತ ದಾಖಲು (ETV Bharat)
author img

By PTI

Published : Jul 31, 2024, 10:44 PM IST

ನವದೆಹಲಿ: ಈಶಾನ್ಯ ಭಾರತದ ರಾಜ್ಯಗಳಲ್ಲಿ 2017 ರಿಂದ ಈವರೆಗೂ ಭಾರೀ ಮಳೆಯಿಂದಾಗಿ 592 ಭೂಕುಸಿತಗಳು ಉಂಟಾಗಿವೆ. ಇದರಲ್ಲಿ ಈ ವರ್ಷದ ಏಪ್ರಿಲ್​ನಿಂದ ಜುಲೈ ಅಂದರೆ ನಾಲ್ಕು ತಿಂಗಳಲ್ಲಿ 196 ಭೂಕುಸಿತಗಳು ನಡೆದಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಲೋಕಸಭೆಯಲ್ಲಿ ಬುಧವಾರ ಈ ಬಗ್ಗೆ ಮಾಹಿತಿ ಹಂಚಿಕೊಂಡ ಕೇಂದ್ರ ಭೂ ವಿಜ್ಞಾನ ಸಚಿವ ಜಿತೇಂದ್ರ ಸಿಂಗ್, ಈಶಾನ್ಯ ಭಾರತವು ಅತಿಹೆಚ್ಚು ಮಳೆ ಹಾನಿ ಪ್ರಕರಣಗಳನ್ನು ಕಂಡಿದೆ. ಈ ವರ್ಷ ಏಪ್ರಿಲ್​ನಿಂದ ಜುಲೈವರೆಗೆ ಅತ್ಯಧಿಕ ಭೂಕುಸಿತಗಳನ್ನು ಕಂಡಿದೆ. ಇದು 2017 ರಿಂದ ದಾಖಲಾದ ಒಟ್ಟು ಭೂಕುಸಿತಗಳ ಪೈಕಿ ಮೂರನೇ ಒಂದು ಭಾಗದಷ್ಟಿವೆ ಎಂದು ಹೇಳಿದರು.

ಬಿಜೆಪಿ ಸಂಸದ ಕಾಮಾಖ್ಯ ಪ್ರಸಾದ್ ತಾಸಾ ಅವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು, ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ಏಪ್ರಿಲ್ 2017 ಮತ್ತು ಜುಲೈ 2024 ರ ನಡುವೆ ಈಶಾನ್ಯದ ವಿವಿಧ ರಾಜ್ಯಗಳಲ್ಲಿ ಸಂಭವಿಸಿದ 592 ಭೂಕುಸಿತಗಳನ್ನು ದಾಖಲಿಸಿದೆ. ಅಲ್ಲಿ ಉಂಟಾದ ಜೀವ ಹಾನಿ ಮತ್ತು ಮೂಲಸೌಕರ್ಯಗಳ ನಾಶವು ಹೆಚ್ಚಿದೆ. ದತ್ತಾಂಶದ ವಿಶ್ಲೇಷಣೆಯ ಪ್ರಕಾರ, ಭೂಕುಸಿತಕ್ಕೆ ಹವಾಮಾನ ಏರಿಳಿತ ಮತ್ತು ಮಾನವ ನಿರ್ಮಿತ ಸಮಸ್ಯೆಗಳು ಕಾರಣವಾಗಿವೆ ಎಂದು ಮಾಹಿತಿ ನೀಡಿದರು.

ಯಾವ ವರ್ಷ ಎಷ್ಟು ಭೂಕುಸಿತ?: ಈಶಾನ್ಯ ಭಾರತದ ಏಳು ಸಹೋದರ ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾದಲ್ಲಿ 2017-18ರಲ್ಲಿ 28 ಭೂಕುಸಿತಗಳು ಸಂಭವಿಸಿವೆ. 2018 - 19ರಲ್ಲಿ 49, 2019-20ರಲ್ಲಿ 45; 2020-21ರಲ್ಲಿ 65; 2021-22ರಲ್ಲಿ 78; 2022-23ರಲ್ಲಿ 102; 2023-24 ರಲ್ಲಿ 29 ಮತ್ತು 2024-25 ರಲ್ಲಿ ಇದುವರೆಗೆ 196 ಭೂಕುಸಿತಗಳು ಸಂಭವಿಸಿವೆ. ಇದು 2022-23 ರಲ್ಲಿ ಎರಡನೇ ಅತ್ಯಧಿಕ ಪ್ರಕೃತಿ ವಿಕೋಪಗಳು ನಡೆದಿವೆ ಎಂದು ಕೇಂದ್ರ ಸಚಿವರು ಅಂಕಿ - ಅಂಶ ನೀಡಿದ್ದಾರೆ.

ಕಳೆದ ವರ್ಷ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ರಾಷ್ಟ್ರೀಯ ದೂರಸಂವೇದಿ ಕೇಂದ್ರ ಬಿಡುಗಡೆ ಮಾಡಿದ ಭೂಕುಸಿತ ದಾಖಲೆಯ ಪ್ರಕಾರ, ಭಾರತದಲ್ಲಿನ ಭೂಕುಸಿತಗಳಲ್ಲಿ ವಾಯುವ್ಯ ಹಿಮಾಲಯ ಭಾಗದಲ್ಲಿ ಶೇಕಡಾ 66.5 ರಷ್ಟು ಇದ್ದರೆ, ಈಶಾನ್ಯ ಹಿಮಾಲಯಗಳಲ್ಲಿ ಶೇ.18.8, ಪಶ್ಚಿಮ ಘಟ್ಟಗಳಲ್ಲಿ ಶೇ.14.7 ಪ್ರಮಾಣದಲ್ಲಿ ಪ್ರಕೃತಿ ತನ್ನ ಮುನಿಸು ತೋರಿದೆ.

ಇದನ್ನೂ ಓದಿ: ವಯನಾಡ್​ ಭೂಕುಸಿತ: "ಕಣ್ಣ ಮುಂದೆಯೇ ಎಲ್ಲವೂ ಮಾಯವಾಗುತ್ತಿತ್ತು" ಭಯಾನಕತೆ ಬಿಚ್ಚಿಟ್ಟ ಸಂತ್ರಸ್ತರು - Wayanad Landslides

ETV Bharat Logo

Copyright © 2025 Ushodaya Enterprises Pvt. Ltd., All Rights Reserved.