ETV Bharat / bharat

ಅಗ್ನಿವೀರ್​ಗಳ 4 ವರ್ಷದ ಸೇವಾವಧಿ ವಿಸ್ತರಣೆ ಅಗತ್ಯವಿಲ್ಲ: ಲೆಫ್ಟಿನೆಂಟ್ ಜನರಲ್ ಮನ್ವೇಂದ್ರ ಸಿಂಗ್ - Agniveer Yojana

author img

By ETV Bharat Karnataka Team

Published : Jul 17, 2024, 6:00 PM IST

ಅಗ್ನಿವೀರ್ ಯೋಜನೆಯು ಯುವಕರ ಭವಿಷ್ಯಕ್ಕೆ ಉತ್ತಮವಾಗಿದೆ ಎಂದು ಲೆಫ್ಟಿನೆಂಟ್ ಜನರಲ್ ಮನ್ವೇಂದ್ರ ಸಿಂಗ್ ಪ್ರತಿಪಾದಿಸಿದ್ದಾರೆ.

ಈಟಿವಿ ಭಾರತ್​ ಜೊತೆಗೆ ಲೆಫ್ಟಿನೆಂಟ್ ಜನರಲ್ ಮನ್ವೇಂದ್ರ ಸಿಂಗ್ ಮಾತುಕತೆ
ಈಟಿವಿ ಭಾರತ್​ ಜೊತೆಗೆ ಲೆಫ್ಟಿನೆಂಟ್ ಜನರಲ್ ಮನ್ವೇಂದ್ರ ಸಿಂಗ್ ಮಾತುಕತೆ (ETV Bharat)

ನವದೆಹಲಿ : ಅಗ್ನಿವೀರ್ ಯೋಜನೆಯ ಬಗ್ಗೆ ಪ್ರತಿಪಕ್ಷಗಳು ನಿರಂತರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಅಗ್ನಿವೀರ್ ಯೋಜನೆಯು ದೇಶದ ಹಿತಾಸಕ್ತಿಗೆ ವಿರುದ್ಧವಾಗಿರುವುದರಿಂದ ಅದನ್ನು ನಿಲ್ಲಿಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ಆದರೆ ಅಗ್ನಿವೀರ್​ ಯೋಜನೆಯ ಬಗ್ಗೆ ಜನರ ಮನಸ್ಸಿನಲ್ಲಿ ಸಾಕಷ್ಟು ಗೊಂದಲಗಳು ಮುಂದುವರೆದಿವೆ. ಈ ಬಗ್ಗೆ ಲೆಫ್ಟಿನೆಂಟ್ ಜನರಲ್ ಮನ್ವೇಂದ್ರ ಸಿಂಗ್ ಅವರು ಈಟಿವಿ ಭಾರತ್ ಜೊತೆ ಮಾತನಾಡಿದ್ದು, ಜನರ ಗೊಂದಲಗಳನ್ನು ನಿವಾರಿಸಲು ಪ್ರಯತ್ನಿಸಿದ್ದಾರೆ.

ದೇಶಾದ್ಯಂತ ಅಗ್ನಿವೀರರ ಬಗ್ಗೆ ಪ್ರಶ್ನೆಗಳು ಮತ್ತು ವಿವಾದಗಳು ಉದ್ಭವಿಸುತ್ತಿರುವ ಮಧ್ಯೆ ಭಾರತೀಯ ಮಾಜಿ ಸೈನಿಕರ ಸಂಘವು ಮೊದಲ ಬಾರಿಗೆ ಈ ವಿಷಯದ ಬಗ್ಗೆ ಧ್ವನಿ ಎತ್ತಿದೆ. ಈಟಿವಿ ಭಾರತ್​ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಲೆಫ್ಟಿನೆಂಟ್ ಜನರಲ್ ಮನ್ವೇಂದ್ರ ಸಿಂಗ್ ಅವರು ಅಗ್ನಿಪಥ್ ಯೋಜನೆಯನ್ನು ದೇಶದ ಸೈನ್ಯಕ್ಕೆ ಮಹತ್ವದ ತಿರುವು ಎಂದು ಬಣ್ಣಿಸಿದ್ದಾರೆ ಮತ್ತು 1980 ರಿಂದ ಭಾರತದಲ್ಲಿ ಸೈನಿಕರ ಸರಾಸರಿ ವಯಸ್ಸು ಇನ್ನೂ 32 ವರ್ಷ ಆಗಿದೆ ಎಂದು ಹೇಳಿದರು. ಈ ಯೋಜನೆ ಜಾರಿಗೆ ಬಂದ ಆರೇಳು ವರ್ಷಗಳಲ್ಲಿ ಸೈನಿಕರ ಸರಾಸರಿ ವಯಸ್ಸು 26 ವರ್ಷಗಳಿಗೆ ಇಳಿಕೆಯಾಗಲಿದೆ ಹಾಗೂ ಈ ಯೋಜನೆಯ ಅನುಷ್ಠಾನದಿಂದ 2030 - 2032ರ ವೇಳೆಗೆ ಸೇನೆಯ ಶೇ 50ರಷ್ಟು ಭಾಗ ಅಗ್ನಿವೀರರಿಂದ ತುಂಬಲಿದೆ ಎಂದರು.

ಕಾರ್ಗಿಲ್ ಯುದ್ಧದ ನಂತರ ಸೇನೆಯಲ್ಲಿ ಬದಲಾವಣೆ ಮಾಡುವುದು ಅಗತ್ಯ ಎಂಬುದು ಕಂಡು ಬಂದಿದೆ ಎಂದು ಮನ್ವೇಂದ್ರ ಸಿಂಗ್ ಹೇಳಿದ್ದಾರೆ. "ಅಗ್ನಿಪಥ್ ಯೋಜನೆಯ ನಂತರ ಆ ಅಗತ್ಯ ಬದಲಾವಣೆಗಳನ್ನು ಸೈನ್ಯದಲ್ಲಿ ಕಾಣಬಹುದು. 12 ಲಕ್ಷದಷ್ಟು ಬಲಿಷ್ಠ ಸೇನೆಯಲ್ಲಿ ಯುವಕರ ಸಂಖ್ಯೆ ಹೆಚ್ಚಾಗಲಿದೆ. ಆಗ ಅನುಭವದೊಂದಿಗೆ ಉತ್ಸಾಹದ ಸಮನ್ವಯವನ್ನು ಕಾಣಬಹುದು. ಆದರೆ ಯೋಜನೆಯ ಬಗ್ಗೆ ಗೊಂದಲ ಮೂಡಿಸಲಾಗುತ್ತಿರುವುದು ದುಃಖದ ಸಂಗತಿಯಾಗಿದೆ. ಯೋಜನೆಯ ಸಾಧಕ ಬಾಧಕಗಳನ್ನು ತಿಳಿಯದೆಯೇ ಇದರ ಬಗ್ಗೆ ನಿರ್ಣಯ ಮಾಡಲಾಗುತ್ತಿದೆ. ಯಾವುದೇ ಯೋಜನೆಯಾದರೂ ಅದರ ಬಗ್ಗೆ ತಿಳಿಯಲು ಸಮಯ ನೀಡುವುದು ಅಗತ್ಯ" ಎಂದು ಅವರು ನುಡಿದರು.

ಅಗ್ನಿವೀರ ಬಗ್ಗೆ ಅಪಪ್ರಚಾರಕ್ಕೆ ಬೇಸರ: "ಅಗ್ನಿವೀರರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ಅಪಪ್ರಚಾರ ಮಾಡಲಾಗುತ್ತಿದೆ. ಅಗ್ನಿವೀರ್​ಗಳಿಗೆ ಟ್ರಾಯ್ ಸೇವೆಗಳಂತೆಯೇ ಅಪಾಯ ಮತ್ತು ಕಷ್ಟ ಭತ್ಯೆಗಳನ್ನು ನೀಡಲಾಗುತ್ತದೆ. ಅಗ್ನಿವೀರ್ ಸೇವಾವಧಿಯಲ್ಲಿ ಹುತಾತ್ಮರಾದರೆ ಅಥವಾ ಮೃತಪಟ್ಟರೆ 48 ಲಕ್ಷ ರೂ.ಗಳ ವಿಮಾ ಮೊತ್ತ ಮತ್ತು 44 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುತ್ತದೆ. ಇದಲ್ಲದೇ, ಹುತಾತ್ಮ ಸೈನಿಕರಿಗೆ ವಿವಿಧ ರಾಜ್ಯ ಸರ್ಕಾರಗಳು ನೀಡುವ ಸಹಾಯವನ್ನು ಅವರ ಕುಟುಂಬಗಳಿಗೂ ನೀಡಲಾಗುತ್ತದೆ. ಕರ್ತವ್ಯದ ಸಮಯದಲ್ಲಿ ಅಗ್ನಿವೀರ್ ಅಂಗವಿಕಲರಾದರೆ, ಅಂಗವೈಕಲ್ಯಕ್ಕೆ ಅನುಗುಣವಾಗಿ ಅವರಿಗೆ ದೊಡ್ಡ ಮೊತ್ತದ ಪರಿಹಾರವನ್ನು ಸಹ ನೀಡಲಾಗುತ್ತದೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಇದೆಲ್ಲದರ ಬಗ್ಗೆ ಸುಳ್ಳು ಮಾಹಿತಿಗಳನ್ನು ಹರಡಲಾಗುತ್ತಿದೆ" ಎಂದು ಅವರು ಹೇಳಿದರು.

ನಾಲ್ಕು ವರ್ಷಗಳ ಅವಧಿ ಬದಲಾಯಿಸುವ ಅಗತ್ಯವಿಲ್ಲ: "ಅಗ್ನಿವೀರರ 4 ವರ್ಷಗಳ ಸೇವಾವಧಿ ತುಂಬಾ ಚಿಕ್ಕದಾಯಿತು ಎಂದು ವಾದಿಸಲಾಗುತ್ತಿದೆ. ಆದರೆ ಪ್ರಸ್ತುತ ಇದನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಸದ್ಯಕ್ಕೆ ನಾಲ್ಕು ವರ್ಷಗಳ ಸೇವಾವಧಿಯ ಫಲಿತಾಂಶಗಳು ಹೊರಬೀಳಲಿ. ಅಗ್ನಿವೀರ ಯುವಕರ ಮುಂದೆ ಅನೇಕ ಆಯ್ಕೆಗಳಿವೆ. ರಾಜ್ಯ ಸರ್ಕಾರಗಳು ಅವರಿಗೆ ಉದ್ಯೋಗ ನೀಡುತ್ತವೆ. ಅಲ್ಲದೆ ಶೇ 25ರಷ್ಟು ಅಗ್ನಿವೀರರನ್ನು ಭಾರತೀಯ ಸೇನೆಯಲ್ಲಿಯೇ ಖಾಯಂ ಸೇವೆಗೆ ನೇಮಕ ಮಾಡಲಾಗುತ್ತದೆ." ಎಂದು ಲೆಫ್ಟಿನೆಂಟ್ ಜನರಲ್ ಮನ್ವೇಂದ್ರ ಸಿಂಗ್ ತಿಳಿಸಿದರು.

"ನಿವೃತ್ತ ಅಗ್ನಿವೀರ್​ಗಳಿಗೆ ಬಿಎಸ್ಎಫ್, ಸಿಐಎಸ್ಎಫ್, ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್​ಪಿಎಫ್) ಮತ್ತು ರಕ್ಷಣಾ ಪಿಎಸ್​ಯುಗಳಲ್ಲಿ ಶೇಕಡಾ 10 ರಷ್ಟು ಮೀಸಲಾತಿ ನೀಡಲಾಗುವುದು. ಕೇಂದ್ರ ಸರ್ಕಾರದ ಪ್ರಮುಖ ಸಚಿವಾಲಯಗಳು ಮತ್ತು ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯಗಳು ನಾಲ್ಕು ವರ್ಷಗಳ ಸೇವೆಯ ನಂತರ ಅಗ್ನಿವೀರರನ್ನು ತಮ್ಮ ಸರ್ಕಾರಿ ಉದ್ಯೋಗಗಳಲ್ಲಿ ಸೇರಿಸುವ ಪ್ರಸ್ತಾಪವನ್ನು ಒಪ್ಪಿಕೊಂಡರೆ, ಈ ಯೋಜನೆಯು ಯುವಕರ ಭವಿಷ್ಯವನ್ನು ಬದಲಾಯಿಸಲಿದೆ." ಎಂದು ಅವರು ಅಭಿಪ್ರಾಯ ಪಟ್ಟರು.

ಇದನ್ನೂ ಓದಿ : 'ವಯನಾಡ್‌ನಲ್ಲಿ ಪ್ರಿಯಾಂಕಾ ಗಾಂಧಿಗೆ 7 ಲಕ್ಷ ಬಹುಮತ ಕೊಡಿಸಿ': ಸ್ಥಳೀಯ ನಾಯಕರಿಗೆ ಎಐಸಿಸಿ​ ಟಾರ್ಗೆಟ್​ - Lok Sabha Byelection

ETV Bharat Logo

Copyright © 2024 Ushodaya Enterprises Pvt. Ltd., All Rights Reserved.