ETV Bharat / bharat

ಅಲೌಕಿಕ ಶಕ್ತಿಗಳೊಂದಿಗೆ '​ದೇವ'ರಾಗಲು ಬಯಸುವ ಮನುಷ್ಯ - ಭಾಗವತ್; ಇದು ಮೋದಿಯತ್ತ ಅಗ್ನಿ ಕ್ಷಿಪಣಿ ಎಂದ ಕಾಂಗ್ರೆಸ್​ - Mohan Bhagwat - MOHAN BHAGWAT

ಮಾನವ ಗುಣಗಳನ್ನು ಸಾಧಿಸಿದ ನಂತರ ಮನುಷ್ಯ ಅಲೌಕಿಕ ಶಕ್ತಿಗಳೊಂದಿಗೆ 'ಸೂಪರ್‌ಮ್ಯಾನ್' ಆಗಲು ಮತ್ತು ನಂತರ 'ದೇವರ' ಸ್ಥಾನಮಾನ ಪಡೆಯಲು ಹಂಬಲಿಸುತ್ತಾನೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.

Mohan Bhagwat
ಮೋಹನ್ ಭಾಗವತ್ (IANS)
author img

By PTI

Published : Jul 19, 2024, 8:41 AM IST

ಗುಮ್ಲಾ(ಜಾರ್ಖಂಡ್): ''ಸ್ವಯಂ ಅಭಿವೃದ್ಧಿಯ ಹಾದಿಯಲ್ಲಿ ಮನುಷ್ಯ 'ಸೂಪರ್‌ಮ್ಯಾನ್' ಆಗಲು ಬಯಸಬಹುದು. ಬಳಿಕ 'ಭಗವಾನ್' ಆಗಲೂ ಬಯಸಬಹುದು. 'ವಿಶ್ವರೂಪ'ಕ್ಕಾಗಿಯೂ ಹಾತೊರೆಯಬಹುದು. ಆದರೆ, ಮುಂದೇನಾಗುತ್ತದೆ ಎಂದು ಯಾರಿಗೂ ಖಚಿತವಿಲ್ಲ'' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಇದೇ ವೇಳೆ, ''ಕೆಲವರಲ್ಲಿ ಮನುಷ್ಯರಾಗಿದ್ದರೂ ಮಾನವೀಯ ಗುಣಗಳ ಕೊರತೆ ಇದ್ದು, ಅದನ್ನು ಮೊದಲು ಮೈಗೂಡಿಸಿಕೊಳ್ಳಬೇಕು'' ಎಂದೂ ಸಲಹೆ ನೀಡಿದರು.

ಜಾರ್ಖಂಡ್​ನ ಗುಮ್ಲಾದಲ್ಲಿ ಗುರುವಾರ ವಿಕಾಸ್ ಭಾರತಿ ಸಂಸ್ಥೆ ಆಯೋಜಿಸಿದ್ದ ಗ್ರಾಮ ಮಟ್ಟದ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

''ಅಭಿವೃದ್ಧಿ ಮತ್ತು ಮಾನವ ಮಹತ್ವಾಕಾಂಕ್ಷೆಯ ಅನ್ವೇಷಣೆಗೆ ಕೊನೆಯೇ ಇಲ್ಲದ ಕಾರಣ ಜನರು ಮನುಕುಲದ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸಬೇಕಿದೆ'' ಎಂದು ಅವರು ಪ್ರತಿಪಾದಿಸಿದರು.

''ಮಾನವ ಗುಣಗಳನ್ನು ಸಾಧಿಸಿದ ನಂತರ ಮನುಷ್ಯ ಅಲೌಕಿಕ ಶಕ್ತಿಗಳೊಂದಿಗೆ 'ಸೂಪರ್‌ಮ್ಯಾನ್' ಆಗಲು ಮತ್ತು ನಂತರ 'ಭಗವಾನ್' ಸ್ಥಾನಮಾನ ಪಡೆಯಲು ಬಯಸುತ್ತಾನೆ. ನಂತರ ಆತ ವಿಶ್ವರೂಪ (ಪರಮೋಚ್ಚ ಶಕ್ತಿಯ ಸರ್ವವ್ಯಾಪಿ ರೂಪ)ಕ್ಕಾಗಿ ಹಾತೊರೆಯುತ್ತಾನೆ. ಆದರೆ, ಅದರಾಚೆಗೆ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ'' ಎಂದು ಭಾಗವತ್ ತಿಳಿಸಿದರು.

ಭಾರತದಂತೆ ಜಗತ್ತೂ ಸುಂದರ ಸ್ಥಳವಾಗಬೇಕು: ''ಅಂತರಂಗದ ಅಭಿವೃದ್ಧಿಗೆ ಕೊನೆಯಿಲ್ಲ. ಮಾನವೀಯತೆಗಾಗಿ ಅವಿರತವಾಗಿ ದುಡಿಯಬೇಕು. ಶ್ರಮಿಕನು ತನ್ನ ದುಡಿಮೆಯಿಂದ ಎಂದಿಗೂ ತೃಪ್ತನಾಗಬಾರದು. ಕಾಯಕ ಮುಂದುವರಿಯಬೇಕು. ಪರಿಸರ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನಿರಂತರವಾಗಿ ಶ್ರಮಿಸಬೇಕು. ವಿವಿಧ ಕ್ಷೇತ್ರಗಳಲ್ಲಿ ನಿರಂತರವಾದ ಕೆಲಸವೊಂದೇ ಪರಿಹಾರ. ಭಾರತದ ಸ್ವಭಾವದಂತೆಯೇ ಈ ಜಗತ್ತನ್ನೂ ಸುಂದರ ಸ್ಥಳವನ್ನಾಗಿ ಮಾಡಲು ಶ್ರಮಿಸಬೇಕು'' ಎಂದು ಹೇಳಿದರು.

''ಭಾರತದ ಸ್ವಭಾವವು ಹೊಲಗಳು ಮತ್ತು ಕಾಡುಗಳಿಂದ ತುಂಬಿದೆ. ಅದರಿಂದಲೇ ಸನಾತನ ಧರ್ಮವೂ ಬಂದಿದೆ. ಸನಾತನ ಸಂಸ್ಕೃತಿ ಮತ್ತು ಧರ್ಮ ರಾಜಮನೆತನದಿಂದ ಬಂದಿಲ್ಲ. ಬದಲಿಗೆ, ಆಶ್ರಮಗಳು ಮತ್ತು ಕಾಡುಗಳಿಂದ ಬಂದಿದೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಮ್ಮ ಬಟ್ಟೆಗಳು ಬದಲಾಗಬಹುದು. ಆದರೆ, ನಮ್ಮ ಸ್ವಭಾವ ಎಂದಿಗೂ ಬದಲಾಗದು'' ಎಂದು ತಿಳಿಸಿದರು.

ಮೋದಿಯತ್ತ ಅಗ್ನಿ ಕ್ಷಿಪಣಿ ಎಂದ ಕಾಂಗ್ರೆಸ್​: ಮನುಷ್ಯ 'ಸೂಪರ್‌ಮ್ಯಾನ್', 'ಭಗವಾನ್' ಆಗಲು ಬಯಸುತ್ತಾನೆ ಎಂಬ ಭಾಗವತ್ ಅವರ ಗೂಢಾರ್ಥದ ಹೇಳಿಕೆಯನ್ನು ಪ್ರತಿಪಕ್ಷ ಕಾಂಗ್ರೆಸ್​ ಪ್ರಧಾನಿ ನರೇಂದ್ರ ಮೋದಿ ಅವರತ್ತ ತಿರುಗಿಸಿದೆ.

''ಜಾರ್ಖಂಡ್‌ನಿಂದ ನಾಗ್ಪುರದಿಂದ ಉಡಾವಣೆಯಾದ ಇತ್ತೀಚಿನ ಅಗ್ನಿ ಕ್ಷಿಪಣಿ ಬಗ್ಗೆ ಪ್ರಧಾನಿಗೆ ವಿಷಯ ಮುಟ್ಟಿದೆ ಮತ್ತು ಇದರ ಗುರಿ ಲೋಕ ಕಲ್ಯಾಣ್ ಮಾರ್ಗ (ಪ್ರಧಾನಿ ಅಧಿಕೃತ ನಿವಾಸ) ಎಂದು ನನಗೆ ಖಾತ್ರಿಯಿದೆ'' ಎಂದು ಕಾಂಗ್ರೆಸ್ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ 'ಎಕ್ಸ್​' ಪೋಸ್ಟ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.