ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಮಂಗಳವಾರ) ಮಂಡಿಸಿದ ಬಜೆಟ್ನಲ್ಲಿ ಮಧ್ಯಮ ವರ್ಗದ ಜನರ ಆಕಾಂಕ್ಷೆಗಳು ಹಾಗೂ ಭಾರತದ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡಿರುವುದು ಕಂಡುಬಂದಿದೆ.
''ವೀಕ್ಷಿತ್ ಭಾರತ್ಕ್ಕಾಗಿ 9 ಆದ್ಯತೆಗಳ ಮೇಲೆ ಕೇಂದ್ರ ಸರ್ಕಾರವು ನಿರಂತರ ಪ್ರಯತ್ನಗಳನ್ನು ಮಾಡುತ್ತದೆ. ಕೃಷಿ, ಸಾಮಾಜಿಕ ನ್ಯಾಯ, ಉದ್ಯೋಗ, ಕೌಶಲ್ಯ, ಸುಧಾರಿತ ಮಾನವ ಸಂಪನ್ಮೂಲಗಳು, ಉತ್ಪಾದನೆ ಹಾಗೂ ಸೇವೆಗಳು, ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲಸೌಕರ್ಯ, ನಾವೀನ್ಯತೆಗಳಲ್ಲಿ ಉತ್ಪಾದಕತೆ ಮತ್ತು ಸ್ಥಿತಿಸ್ಥಾಪಕತ್ವ ಪಟ್ಟಿ ಮಾಡುವ ‘ವೀಕ್ಷಿತ್ ಭಾರತ್’ಗಾಗಿ 9 ಆದ್ಯತೆಗಳ ಮೇಲೆ ಸರ್ಕಾರವು ಸತತ ಪ್ರಯತ್ನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇದೇ 9 ಆದ್ಯತೆಗಳ ಆಧಾರದ ಮೇಲೆ ಪ್ರಸಕ್ತ ಸಾಲಿನ ಬಜೆಟ್ ಸಿದ್ಧಪಡಿಸಲಾಗಿದೆ'' ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ನಿರ್ಮಲಾ ಸೀತಾರಾಮನ್ ಬಜೆಟ್- ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ?
- ರಕ್ಷಣಾ ಕ್ಷೇತ್ರ- 4,54,773 (ಕೋಟಿ ರೂಪಾಯಿಗಳಲ್ಲಿ)
- ಗ್ರಾಮೀಣಾಭಿವೃದ್ಧಿ- 2,65,808
- ಕೃಷಿ ಮತ್ತು ಅದಕ್ಕೆ ಸಂಬಂಧಿಸಿದಂತೆ- 1,51,851
- ಗೃಹ ಇಲಾಖೆ- 1,51,983
- ಶಿಕ್ಷಣ - 1,25,638
- ಐಟಿ ಮತ್ತು ಟಿಲಿಕಾಂ - 1,16,342
- ಆರೋಗ್ಯ ಕ್ಷೇತ್ರ- 89,287
- ಪವರ್ ಸೆಕ್ಟರ್- 68,769
- ಸಾಮಾಜ ಕಲ್ಯಾಣ ಇಲಾಖೆ- 56,501
- ವಾಣಿಜ್ಯ ಮತ್ತು ಕೈಗಾರಿಕೆ- 47,559
- ನರೇಗಾ- 86,000
- ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳು- 1,200
- ನ್ಯೂಕ್ಲೀಯರ್ ಪವರ್ ಪ್ರಾಜೆಕ್ಟ್- 2228
- ಫಾರ್ಮಾಸಿಟಿಮಲ್ ಇಂಡಸ್ಟ್ರಿ- 2,143
- ಸೆಮಿಕಂಡಕ್ಟರ್ ಕ್ಷೇತ್ರ- 6,903
- ಸೋಲಾರ್ ಪವರ್- 10,000
- ಎಲ್ಪಿಜಿ (ಫಲಾನುಭವಿಗಳಿಗೆ ನೇರ ಲಾಭ)- 15,000
- ಐಡಿಇಎ ಯೋಜನೆ- 3,849
ದೇಶದ ಅರ್ಥ ವ್ಯವಸ್ಥೆಗೆ ವೇಗ ನೀಡುವ ನಿಟ್ಟಿನಲ್ಲಿ ಹಣದುಬ್ಬರ ನಿಯಂತ್ರಿಸುವ ಹೊಸ ತೆರಿಗೆ ಪದ್ಧತಿ ಜಾರಿಗೆ ತರುವ ಮೂಲಕ ವಿಕಸಿತ ಭಾರತಕ್ಕೆ ಮತ್ತಷ್ಟು ವೇಗ ದೊರೆಯಲಿದೆ.#BudgetForViksitBharat pic.twitter.com/IKTuDpOEk7
— BJP Karnataka (@BJP4Karnataka) July 23, 2024ಉದ್ಯೋಗ ಭದ್ರತೆಗೆ 3 ಹಂತದ ನೂತನ ಯೋಜನೆ ಜಾರಿಗೊಳಿಸಿರುವ ಮೋದಿ ಅವರ ಸರ್ಕಾರ 30 ಲಕ್ಷ ಯುವಕರಿಗೆ ಉದ್ಯೋಗ ಮತ್ತು ನಾಲ್ಕು ವರ್ಷ ಆರ್ಥಿಕ ನೆರವು ನೀಡಿರುವುದಲ್ಲದೇ ಕೌಶಲ್ಯಾಭಿವೃದ್ಧಿ ತರಬೇತಿ ಸಾಲದ ಮೊತ್ತವನ್ನು 7.5 ಲಕ್ಷಕ್ಕೆ ಹೆಚ್ಚಿಸಿ ಉದ್ಯೋಗಿಗಳಿಗೆ 4 ಲಕ್ಷ ಭವಿಷ್ಯ ನಿಧಿ ಘೋಷಿಸಿದೆ.#BudgetForViksitBharat pic.twitter.com/n7LsaBRj74
— BJP Karnataka (@BJP4Karnataka) July 23, 2024ಉನ್ನತ ಶಿಕ್ಷಣ ಹಾಗೂ ಯುವ ಸಮೂಹಕ್ಕೆ ವಿಶೇಷ ಒತ್ತು ನೀಡಿರುವ ಮೋದಿ ಅವರ ಸರ್ಕಾರ 1 ಕೋಟಿ ಯುವಕರಿಗೆ ಹೊಸ ಇಂಟರ್ನ್ ಶಿಪ್ ಯೋಜನೆ, ಉನ್ನತ ಶಿಕ್ಷಣಕ್ಕೆ 10 ಲಕ್ಷದವರೆಗೆ ಸಾಲ ಸೌಲಭ್ಯ ಪಡೆಯಲು ಅವಕಾಶ ಸೇರಿದಂತೆ 1 ಲಕ್ಷ ವಿದ್ಯಾರ್ಥಿಗಳಿಗೆ ಇ-ವೋಚರ್ ನೀಡುವ ಮಹತ್ವಪೂರ್ಣ ಯೋಜನೆಗಳ ಘೋಷಿಸಿದೆ.#BudgetForViksitBharat pic.twitter.com/wkbqyVCujz
— BJP Karnataka (@BJP4Karnataka) July 23, 2024ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯ ಮೂಲಕ ಉಚಿತ ವಿದ್ಯುತ್ ನೀಡಿ, ಹೆಚ್ಚುವರಿ ನ್ಯೂಕ್ಲಿಯರ್ ವಿದ್ಯುತ್ ಸ್ಟೋರೇಜ್ ಗೆ ಆರ್ಥಿಕ ನೆರವು ನೀಡುವ ಮೂಲಕ ಸೌರ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬಿ ಸಂಕಲ್ಪವನ್ನು ಸಾಕಾರಗೊಳಿಸಲಿದೆ.#BudgetForViksitBharat pic.twitter.com/SzOmt6Yx5x
— BJP Karnataka (@BJP4Karnataka) July 23, 2024ಸಣ್ಣ ಕೈಗಾರಿಕೆಗಳಿಗೆ ಸಾಲ ಕಾತರಿ ಯೋಜನೆಯನ್ನು ವಿಸ್ತರಿಸಿ, ಮುದ್ರಾ ಯೋಜನೆಯ ಸಾಲ ಮಿತಿ 10 ಲಕ್ಷದಿಂದ 20 ಲಕ್ಷಗಳವರೆಗೆ ಹೆಚ್ಚಿಸಿ ಕೈಗಾರಿಕಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಲಾಗಿದೆ.#BudgetForViksitBharat pic.twitter.com/st8rxItZbm
— BJP Karnataka (@BJP4Karnataka) July 23, 2024ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿ 3 ಕೋಟಿ ಹೆಚ್ಚುವರಿ ಮನೆ ನಿರ್ಮಾಣ, 1 ಕೋಟಿಯಷ್ಟು ನಗರ ಪ್ರದೇಶದ ಬಡವರಿಗೆ ಸೂರು ಕಲ್ಪಿಸಿ, ಗ್ರಾಮೀಣಾಭಿವೃದ್ಧಿ 2.66 ಲಕ್ಷ ಕೋಟಿ ರೂ ಮೀಸಲು, ಮಹಿಳಾಭಿವೃದ್ಧಿಗೆ 3 ಲಕ್ಷ ಕೋಟಿ ಅನುದಾನ ನೀಡಿ ವಿಕಸಿತ ಭಾರತಕ್ಕೆ ಅಡಿಪಾಯ ಹಾಕಲಾಗಿದೆ.#BudgetForViksitBharat pic.twitter.com/vgijSvQ9ku
— BJP Karnataka (@BJP4Karnataka) July 23, 2024
ಇದನ್ನೂ ಓದಿ: ಕೇಂದ್ರ ಬಜೆಟ್ 2024: ಯಾವ ವಸ್ತು ಏರಿಕೆ, ಯಾವುದು ಇಳಿಕೆ- ತಿಳಿಯಿರಿ - Union Budget 2024