ETV Bharat / bharat

ಆಂಧ್ರ ಫಾರ್ಮಾ ಘಟಕ ಸ್ಫೋಟದ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಎನ್​ಜಿಟಿ - Pharma unit blast in Andhra

ಆಂಧ್ರ ಪ್ರದೇಶದಲ್ಲಿ ಸಂಭವಿಸಿದ್ದ ಫಾರ್ಮಾ ಘಟಕ ಸ್ಫೋಟದ ಘಟನೆಯ ಬಗ್ಗೆ ಹಸಿರು ನ್ಯಾಯ ಮಂಡಳಿಯು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

ಅನಕಪಲ್ಲಿಯಲ್ಲಿನ ಫಾರ್ಮಾ ಘಟಕದಲ್ಲಿ ಕಳೆದ ವಾರ ಸಂಭವಿಸಿದ ರಿಯಾಕ್ಟರ್ ಸ್ಫೋಟ
ಅನಕಪಲ್ಲಿಯಲ್ಲಿನ ಫಾರ್ಮಾ ಘಟಕದಲ್ಲಿ ಕಳೆದ ವಾರ ಸಂಭವಿಸಿದ ರಿಯಾಕ್ಟರ್ ಸ್ಫೋಟ (IANS)
author img

By ETV Bharat Karnataka Team

Published : Aug 26, 2024, 2:32 PM IST

ನವದೆಹಲಿ: ಆಂಧ್ರಪ್ರದೇಶದ ಅನಕಪಲ್ಲಿಯಲ್ಲಿನ ಫಾರ್ಮಾ ಘಟಕದಲ್ಲಿ ಕಳೆದ ವಾರ ಸಂಭವಿಸಿದ ರಿಯಾಕ್ಟರ್ ಸ್ಫೋಟದಲ್ಲಿ ಕನಿಷ್ಠ 17 ಮಂದಿ ಮೃತಪಟ್ಟು, 36 ಮಂದಿ ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್​ಜಿಟಿ) ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದೆ.

ಆಗಸ್ಟ್ 21 ರಂದು ಅಚ್ಚುತಪುರಂ ವಿಶೇಷ ಆರ್ಥಿಕ ವಲಯದ ಎಸ್ಸಿಯೆಂಟಿಯಾ ಅಡ್ವಾನ್ಸಡ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿನ ರಿಯಾಕ್ಟರ್ ಸ್ಫೋಟಗೊಂಡಿತ್ತು. ಯಾವುದೋ ದ್ರಾವಕವೊಂದರ ಸೋರಿಕೆಯಿಂದ ರಿಯಾಕ್ಟರ್ ಸ್ಫೋಟಗೊಂಡು ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಸ್ಫೋಟ ಸಂಭವಿಸಿದ ಫಾರ್ಮಾ ಘಟಕವು ಪರಿಸರ ನಿಯಮಗಳನ್ನು ಅನುಸರಿಸುತ್ತಿದೆಯೇ ಮತ್ತು ಗಾಯಗೊಂಡವರಿಗೆ ಮತ್ತು ಮೃತರ ಕುಟುಂಬಗಳಿಗೆ ಪರಿಹಾರವನ್ನು ಪಾವತಿಸಿದೆಯೇ ಎಂಬುದರ ಪರಿಶೀಲನೆ ಅಗತ್ಯವಿದೆ ಎಂದು ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ನೇತೃತ್ವದ ಎನ್​ಜಿಟಿ ನ್ಯಾಯಪೀಠ ಹೇಳಿದೆ. ಪರಿಸರ ಮಾನದಂಡಗಳನ್ನು ಎಷ್ಟರ ಮಟ್ಟಿಗೆ ಪಾಲಿಸಲಾಗುತ್ತಿದೆ ಎಂಬುದರ ಬಗ್ಗೆ ಈ ಅಪಘಾತವು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ ಎನ್​ಜಿಟಿ ಹೇಳಿದೆ.

ಹಸಿರು ನ್ಯಾಯಮಂಡಳಿಯು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಆಂಧ್ರಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಆಂಧ್ರಪ್ರದೇಶದ ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ನಿರ್ದೇಶನಾಲಯ ಮತ್ತು ಅನಕಪಲ್ಲಿಯ ಜಿಲ್ಲಾಧಿಕಾರಿಗಳನ್ನು ಈ ವಿಷಯದಲ್ಲಿ ಪ್ರತಿವಾದಿಗಳಾಗಿ ಸೇರಿಸಿದೆ. ಸೆಪ್ಟೆಂಬರ್ 23 ರೊಳಗೆ ಎನ್​ಜಿಟಿಯ ದಕ್ಷಿಣ ವಲಯ ಪೀಠದ ಮುಂದೆ ಉತ್ತರವನ್ನು ಸಲ್ಲಿಸುವಂತೆ ಅದು ಅಧಿಕಾರಿಗಳಿಗೆ ಸೂಚಿಸಿದೆ.

"ಈ ವಿಷಯವು ನ್ಯಾಯಾಧಿಕರಣದ ದಕ್ಷಿಣ ವಲಯ ಪೀಠದ ವ್ಯಾಪ್ತಿಯಲ್ಲಿ ಬರುವುದರಿಂದ, ಮುಂದಿನ ಕ್ರಮಕ್ಕಾಗಿ ಮೂಲ ಅರ್ಜಿಯನ್ನು ಅನ್ನು ಚೆನ್ನೈನ ದಕ್ಷಿಣ ವಲಯ ಪೀಠಕ್ಕೆ ವರ್ಗಾಯಿಸಲಾಗಿದೆ" ಎಂದು ಪೀಠ ಹೇಳಿದೆ. "ಯಾವುದೇ ಪ್ರತಿವಾದಿಗಳು (ಅಧಿಕಾರಿಗಳು) ತಮ್ಮ ವಕೀಲರ ಮೂಲಕ ಉತ್ತರಿಸದೆ ನೇರವಾಗಿ ಉತ್ತರವನ್ನು ಸಲ್ಲಿಸಿದರೆ, ಅಂಥ ಪ್ರತಿವಾದಿಯು ವಾಸ್ತವದಲ್ಲಿ ನ್ಯಾಯಾಧಿಕರಣದ ವಿಚಾರಣೆಗೂ ಹಾಜರಾಗಬೇಕಾಗುತ್ತದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ತಲಾ 1 ಕೋಟಿ ರೂ., ಗಂಭೀರವಾಗಿ ಗಾಯಗೊಂಡವರಿಗೆ ತಲಾ 50 ಲಕ್ಷ ರೂ., ಸಣ್ಣಪುಟ್ಟ ಗಾಯಗೊಂಡವರಿಗೆ ತಲಾ 25 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ. ಗಾಯಾಳುಗಳ ಚಿಕಿತ್ಸೆಯ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ ಎಂದು ಸಿಎಂ ನಾಯ್ಡು ಭರವಸೆ ನೀಡಿದರು.

ಇದನ್ನೂ ಓದಿ : ಜಮ್ಮು & ಕಾಶ್ಮೀರ ಚುನಾವಣೆ: 44 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಹಿಂಪಡೆದ ಬಿಜೆಪಿ - J and K polls

ETV Bharat Logo

Copyright © 2024 Ushodaya Enterprises Pvt. Ltd., All Rights Reserved.