ETV Bharat / bharat

NEET UG ಪರೀಕ್ಷೆ: ಔಟ್​ ಆಪ್​ ಔಟ್​ ಅಂಕ ಪಡೆದವರಿಗೂ ದೆಹಲಿ ಏಮ್ಸ್​ನಲ್ಲಿ ಸೀಟು ಪಡೆಯಲು ಸಾಧ್ಯವಿಲ್ಲ, ಕಾರಣವೇನು ತಿಳಿಯಿರಿ!! - NEET UG Exam Result 2024 - NEET UG EXAM RESULT 2024

ವೈದ್ಯಕೀಯ ಪ್ರವೇಶಕ್ಕಾಗಿ ನಡೆದ ನೀಟ್ ಯುಜಿ ಪರೀಕ್ಷೆಯಲ್ಲಿ ಪರಿಪೂರ್ಣ ಅಂಕಗಳನ್ನು ಗಳಿಸಿದ ಅನೇಕ ವಿದ್ಯಾರ್ಥಿಗಳು ಟಾಪರ್ ಆಗಿದ್ದರೂ ದೆಹಲಿ ಏಮ್ಸ್​ನಲ್ಲಿ ಪಡೆಯಲು ಸಾಧ್ಯವಾಗುವುದಿಲ್ಲ. ಸಾಮಾನ್ಯ ಕೋಟಾದ ಅಡಿ 49ನೇ ರ‍್ಯಾಂಕ್‌ವರೆಗೆ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಸೀಟುಗಳನ್ನು ಪಡೆಯಲು ಸಾಧ್ಯವಿದೆ. ಆದರೆ, ಈ ಬಾರಿ 720ಕ್ಕೆ 720 ಅಂಕಗಳನ್ನು ಗಳಿಸಿದ ಟಾಪರ್‌ಗಳ ಸಂಖ್ಯೆ 67 ಆಗಿದೆ.

NEET UG 2024  AIIMS DELHI  NEET UG EXAM RESULT
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : Jun 7, 2024, 7:22 AM IST

ಕೋಟಾ (ರಾಜಸ್ಥಾನ): ವೈದ್ಯಕೀಯ ಪ್ರವೇಶಕ್ಕಾಗಿ ನಡೆದ NEET UG 2024ರ ಪರೀಕ್ಷೆಯ ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮಂಗಳವಾರ ಬಿಡುಗಡೆ ಮಾಡಿದೆ. ಈ ಬಾರಿ ಪರೀಕ್ಷೆಯಲ್ಲಿ ಟಾಪರ್​ಗಳ ಸಂಖ್ಯೆ ಹೆಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಬಾರಿ ಕಟ್​​​ಆಫ್​ ಕೂಡ ಹೆಚ್ಚಾಗಿದೆ. ದೆಹಲಿ ಏಮ್ಸ್ ಟಾಪರ್ ವಿದ್ಯಾರ್ಥಿಗಳ ಮೊದಲ ಆಯ್ಕೆಯಾಗಿದೆ. ಆದರೆ, ಈ ಬಾರಿಯ ಪ್ರವೇಶ ಪರೀಕ್ಷೆಯಲ್ಲಿ ಪರಿಪೂರ್ಣ ಅಂಕ ಗಳಿಸಿದ ಟಾಪರ್‌ಗಳ ಸಂಖ್ಯೆ 67 ಇದೆ. ಇದರ ಹೊರತಾಗಿಯೂ, ಹಲವು ಟಾಪರ್‌ಗಳಿಗೆ ದೆಹಲಿ ಏಮ್ಸ್​ನಲ್ಲಿ ಸೀಟ್​ಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಸಾಮಾನ್ಯ ಕೋಟಾದ ವಿದ್ಯಾರ್ಥಿಗಳು 49ನೇ ರ‍್ಯಾಂಕ್‌ವರೆಗೆ ಮಾತ್ರ ಸೀಟುಗಳನ್ನು ಪಡೆಯಬಹುದು. ಆದರೆ, ಈ ಬಾರಿ 720ಕ್ಕೆ 720 ಅಂಕ ಗಳಿಸಿದ ಟಾಪರ್‌ಗಳ ಸಂಖ್ಯೆ 67 ಆಗಿದೆ. ಇದು ಸಾಮಾನ್ಯ ಕೋಟಾದ ಸೀಟುಗಳಿಗೆ ಹೋಲಿಸಿದರೆ 18 ಸೀಟುಗಳು ಹೆಚ್ಚಿವೆ.

ಡಾ.ಬ್ರಿಜೇಶ್ ಮಹೇಶ್ವರಿ ಪ್ರತಿಕ್ರಿಯೆ: ಕೋಟಾದ ಖಾಸಗಿ ಕೋಚಿಂಗ್ ಸಂಸ್ಥೆಯ ನಿರ್ದೇಶಕ ಡಾ.ಬ್ರಿಜೇಶ್ ಮಹೇಶ್ವರಿ ಮಾತನಾಡಿ, ''ಈ ಬಾರಿ 67 ವಿದ್ಯಾರ್ಥಿಗಳು ಮೊದಲ ರ‍್ಯಾಂಕ್‌ ಪಡೆದಿದ್ದಾರೆ. ಪ್ರತಿಷ್ಠಿತ ದೆಹಲಿ ಏಮ್ಸ್ ನಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಸೀಟು ಪಡೆಯುವುದು ಕಷ್ಟ. ಈ ವಿದ್ಯಾರ್ಥಿಗಳ ಕೌನ್ಸೆಲಿಂಗ್ ಆದ್ಯತೆಗಾಗಿ ಅಖಿಲ ಭಾರತ ರ‍್ಯಾಂಕ್‌ವರೆಗೆ ಒನ್ ಬದಲಿಗೆ 1.01ರಿಂದ 1.67 ರವರೆಗೆ ನೀಡಲಾಗಿದೆ'' ಎಂದು ತಿಳಿಸಿದರು.

ದೆಹಲಿ ಏಮ್ಸ್‌ನಲ್ಲಿ ಸಾಮಾನ್ಯ ವರ್ಗಕ್ಕೆ 49 ಸೀಟುಗಳು ಮೀಸಲು: ದೆಹಲಿ ಏಮ್ಸ್‌ನಲ್ಲಿ 132 ಸೀಟುಗಳಿವೆ. ಅವುಗಳಲ್ಲಿ 125 ಸೀಟುಗಳು ಮುಕ್ತ ಕೋಟಾದಲ್ಲಿವೆ. ಉಳಿದ 7 ಸೀಟುಗಳು ಎನ್‌ಆರ್‌ಐ ಕೋಟಾಕ್ಕೆ ಮೀಸಲು ಆಗಿವೆ. ಸಾಮಾನ್ಯ, ಒಬಿಸಿ, ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲರಿಗೆ ಸೇರಿದಂತೆ ವಿವಿಧ ವರ್ಗಗಳಿಗೆ ಸೀಟುಗಳು ಮೀಸಲು ಇಡಲಾಗಿದೆ. ಇನ್ನು ಸಾಮಾನ್ಯ ವರ್ಗದಲ್ಲಿ 49 ಸೀಟುಗಳು ಇರುತ್ತವೆ. ಇದರಿಂದಾಗಿ ಮೊದಲ 49 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಇದರ ನಂತರ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಪರಿಪೂರ್ಣ ಅಂಕಗಳನ್ನು ಗಳಿಸಿದರೂ ಮತ್ತೊಂದು ಸಂಸ್ಥೆಯನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಕೋಟಾದ ಖಾಸಗಿ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಡಾ.ಬ್ರಿಜೇಶ್ ಮಹೇಶ್ವರಿ ವಿವರಿಸಿದರು.

ಕಳೆದ ವರ್ಷ 710 ಅಂಕ ಪಡೆದವರಿಗೆ ದೆಹಲಿ ಏಮ್ಸ್​ನಲ್ಲಿ ಸೀಟು: ಕಳೆದ ವರ್ಷ 2023ರ ಅಖಿಲ ಭಾರತ 15 ಪ್ರತಿಶತ ಕೋಟಾ ಕೌನ್ಸೆಲಿಂಗ್ ಪ್ರಕಾರ, ದೆಹಲಿ AIIMS ಅನ್ನು ದೆಹಲಿಯ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು 56ನೇ ಶ್ರೇಣಿಯಲ್ಲಿ ಪಾಸಾದವರಿಗೂ ಸೀಟುಗಳು ಲಭಿಸಿದ್ದವು. ಏಕೆಂದರೆ, ಇದಕ್ಕಿಂತ ಮೇಲಿನ ಶ್ರೇಯಾಂಕದ 7 ಅಭ್ಯರ್ಥಿಗಳು ದೆಹಲಿ ಏಮ್ಸ್ ಬದಲಿಗೆ ಇತರ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಕಳೆದ ವರ್ಷ 720ರಿಂದ 710 ಅಂಕಗಳನ್ನು 48 ಅಭ್ಯರ್ಥಿಗಳಿದ್ದರು. ಈ ಬಾರಿ 720 ರಿಂದ 705 ಅಂಕ ಗಳಿಸಿದವರ ಸಂಖ್ಯೆ 540ಕ್ಕೂ ಹೆಚ್ಚು ಅಭ್ಯರ್ಥಿಗಳು ಇದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಈ ಬಾರಿ ಸೀಟು ಹಂಚಿಕೆಯಲ್ಲಿ ಉನ್ನತ ಶ್ರೇಣಿಯ ಅಭ್ಯರ್ಥಿಗಳಿಗೆ ಮಾತ್ರ ಪ್ರತಿಷ್ಠಿತ ಸಂಸ್ಥೆಗಳು ಸಿಗುತ್ತವೆ.

ಈ ಬಾರಿ ಕಟ್‌ಆಫ್‌ ಹೆಚ್ಚಾಗುವ ಸಾಧ್ಯತೆ: ಈ ಬಾರಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಪ್ರವೇಶಕ್ಕೆ ಕಟಾಫ್ ಸುಮಾರು 25 ರಿಂದ 30 ಅಂಕಗಳು ಹೆಚ್ಚಾಗಬಹುದು ಎಂದು ನೀಟ್ ಯುಜಿ ಪರೀಕ್ಷೆಯ ಫಲಿತಾಂಶ ಬಹಿರಂಗವಾಗಿದೆ. ಕಳೆದ ವರ್ಷ 2023ರಲ್ಲಿ, ಜನರಲ್ ಮತ್ತು ಆರ್ಥಕವಾಗಿ ಹಿಂದುಳಿದ ವಿಭಾಗಕ್ಕೆ ಕಟ್​ಆಪ್​ 137 ಆಗಿತ್ತು. ಈ ಬಾರಿ 164ಕ್ಕೆ ಏರಿಕೆಯಾಗಿದೆ. ಈ ವೇಳೆ 27 ಅಂಕ ಏರಿಕೆಯಾಗಿದೆ. ಈ ವರ್ಷ OBC, SC ಮತ್ತು ST ಕಟ್ ಆಫ್ 129 ಅಂಕಗಳು. ಕಳೆದ ವರ್ಷ ಈ ಕಟ್‌ಆಫ್ ಶೇಕಡಾವಾರು 107 ಆಗಿತ್ತು. ಇದು 22 ಪಾಯಿಂಟ್‌ಗಳಷ್ಟು ಹೆಚ್ಚಾಗಿದೆ. ಕಳೆದ ವರ್ಷ ಅಖಿಲ ಭಾರತ ರ‍್ಯಾಂಕ್ 94 ರಿಂದ 705 ಅಂಕಗಳಿದ್ದರೆ, ಈ ಬಾರಿ 705 ಅಂಕಗಳಿಗೆ 542 ಅಂಕಗಳು ಬಂದಿವೆ. ಅದೇ ರೀತಿ ಕಳೆದ ವರ್ಷ 650 ಅಂಕಗಳಲ್ಲಿ 6,950 ರ ರ‍್ಯಾಂಕ್‌, ಈ ವರ್ಷ 29 ಸಾವಿರ ರ‍್ಯಾಂಕ್‌ ಬಂದಿದೆ. ಹೀಗಿರುವಾಗ ವಿದ್ಯಾರ್ಥಿ ಟಾಪರ್​ಗಳ ಸಂಖ್ಯೆ ಮೂರರಿಂದ ಐದು ಪಟ್ಟು ಹೆಚ್ಚಿದೆ.

ಅಂತಿಮ ಕೀ ಉತ್ತರದಲ್ಲಿ ಎರಡು ಆಯ್ಕೆಗಳನ್ನು ಸರಿ: ಡಾ.ಬ್ರಿಜೇಶ್ ಮಹೇಶ್ವರಿ ಮಾತನಾಡಿ, ಭೌತಶಾಸ್ತ್ರದ ಒಂದು ಪ್ರಶ್ನೆಗೆ, ಹಳೆಯ ಎನ್‌ಸಿಆರ್‌ಟಿ ಮತ್ತು ಹೊಸ ಎನ್‌ಸಿಆರ್‌ಟಿಯಲ್ಲಿ ವಿಭಿನ್ನ ಉತ್ತರಗಳಿವೆ ಎಂದು ಹೇಳುತ್ತಾರೆ. ಕೆಲವು ಮಕ್ಕಳು ಹಳೆಯ ಎನ್‌ಸಿಇಆರ್‌ಟಿ ಅಡಿ ಉತ್ತರಗಳನ್ನು ನೀಡಿದ್ದರು. ಆದ್ದರಿಂದ ಅವರು ತಾತ್ಕಾಲಿಕ ಕೀ ಉತ್ತರದಲ್ಲಿ ತಪ್ಪಾಗುತ್ತಿದೆ . ಆದರೆ ಕೆಲವರು ಹೊಸ ಎನ್‌ಸಿಇಆರ್‌ಟಿ ಅಡಿಯಲ್ಲಿ ಉತ್ತರಗಳನ್ನು ನೀಡಿದ್ದಾರೆ. ಆದರೆ, ಕೆಲ ವಿದ್ಯಾರ್ಥಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ನಂತರ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಅಂತಿಮ ಕೀ ಉತ್ತರದಲ್ಲಿ ಎರಡು ಆಯ್ಕೆಗಳನ್ನು ಸರಿಯಾಗಿದೆ ಎಂದು ಘೋಷಿಸಿತು. ಇದಾದ ನಂತರವೇ ಟಾಪರ್​ಗಳ ಸಂಖ್ಯೆ ಹೆಚ್ಚಿದೆ ಎಂದು ಹೇಳಿದರು.

ಪರೀಕ್ಷೆ ಮಾದರಿ ಬದಲಾಯಿಸಿದರೆ ಟಾಪರ್‌ಗಳ ಸಂಖ್ಯೆ ಇಳಿಕೆೆ: ಪರೀಕ್ಷಾ ಪತ್ರಿಕೆಯಲ್ಲಿನ ಪ್ರಶ್ನೆಗಳನ್ನು ಪರಿಹರಿಸಲು ಅಭ್ಯರ್ಥಿಗಳಿಗೆ ಆಯ್ಕೆಯನ್ನು ನೀಡಲಾಗಿರುವುದರಿಂದ ಇದಕ್ಕಿಂತ ಹೆಚ್ಚು ಅಂಕ ಗಳಿಸುತ್ತಿದ್ದಾರೆ. ಎಲ್ಲ ಅಭ್ಯರ್ಥಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದಲ್ಲಿ 50-50 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದನ್ನು ಭಾಗ ಎ ಮತ್ತು ಬಿ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

ಎ ಭಾಗದಲ್ಲಿ, ಅಭ್ಯರ್ಥಿಯು 35 ಪ್ರಶ್ನೆಗಳನ್ನು ಪ್ರಯತ್ನಿಸಬೇಕು, ಆದರೆ, ಬಿ ಭಾಗದಲ್ಲಿ, ಅಭ್ಯರ್ಥಿಯು 15ರಲ್ಲಿ 10 ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಬೇಕು. ಈ ಆಯ್ಕೆಯನ್ನು ಅಭ್ಯರ್ಥಿಗಳಿಗೆ ನೀಡಿದಾಗಿನಿಂದ, ರ‍್ಯಾಂಕರ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಟಾಪರ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕಾದರೆ ಪರೀಕ್ಷೆಯ ಮಾದರಿಯನ್ನು ಬದಲಾಯಿಸಬೇಕಾಗುತ್ತದೆ.

ಇದನ್ನೂ ಓದಿ: ನೀಟ್​ ಪರೀಕ್ಷೆಯಲ್ಲಿ 720ಕ್ಕೆ 720 ಅಂಕ ಗಳಿಸಿದ 67 ಅಭ್ಯರ್ಥಿಗಳು: ಕರ್ನಾಟಕದ ಮೂವರಿಂದ ಔಟ್​​ ಆಫ್​ ಔಟ್ ಸಾಧನೆ​: ಪ್ರಪ್ರಥಮ ಬಾರಿಗೆ ದೊಡ್ಡ ದಾಖಲೆ - NEET UG 2024 RESULT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.